logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cantharides
ನಾಮವಾಚಕ
(ಬಹುವಚನ) (ವೈದ್ಯಶಾಸ್ತ್ರ) ಒಣ ನೊಣ; ಒಣ ಜೀರುಂಡೆ; ಬೊಬ್ಬೆ ನೊಣ; ಒಣಗಿಸಿದ ಒಂದು ಜಾತಿಯ ಹಸಿರು ಬಣ್ಣದ ದಪ್ಪನೊಣ.

canthus
ನಾಮವಾಚಕ ಪದಗುಚ್ಛ
ಕಣ್ಮೂಲೆ; ಕಡೆಗಣ್ಣು; ಕುಡಿಗಣ್ಣು; ಕಣ್ಣಿನ ಮೇಲುರೆಪ್ಪೆ ಮತ್ತು ಕೆಳರೆಪ್ಪೆ ಕೂಡುವ ಎರಡು ಕಡೆಗಳಲ್ಲೂ ಇರುವ ಮೂಲೆ.
  • inner canthus ಕಣ್ಣುಕುಳಿ.
  • outer canthus ಕಡೆಗಣ್ಣು.

  • canticle
    ನಾಮವಾಚಕ
  • ಸ್ತೋತ್ರ, ಸ್ತೋತ್ರಗೀತೆ.
  • (ಆಂಗ್ಲಿಕನ್‍ ಸ್ತೋತ್ರಗ್ರಂಥದಲ್ಲಿನ) ಒಂದು ಪದ್ಯ, ಗೀತೆ ಯಾ ಸ್ತೋತ್ರ.

  • Canticles
    ನಾಮವಾಚಕ ಪದಗುಚ್ಛ
    ಸಾಲೊಮನ್‍ ದೊರೆಯ ಗೀತಮಾಲೆ. Canticles of Canticles = Canticles.

    cantilena
    ನಾಮವಾಚಕ
    (ಸಂಗೀತ) ಸರಳಗೀತೆ; ಸರಳವಾದ ಯಾ ಸಂತತವಾದ ಹಾಡು.

    cantilever
    ನಾಮವಾಚಕ
    (ವಾಸ್ತುಶಿಲ್ಪ) ಚಾಚು; ಚಾಚುದೂಲ; ಚಾಚುತೊಲೆ; ಚಾಚು ರಚನೆ; ಗೋಡೆ, ಕಂಬ ಮೊದಲಾದವಕ್ಕೆ ಒಂದು ತುದಿ ಅಂಟಿಕೊಂಡು ಇನ್ನೊಂದು ತುದಿ ಚಾಚಿಕೊಂಡಿರುವ, ಉದ್ದನೆಯ, ಸಾಮಾನ್ಯವಾಗಿ ದಪ್ಪನೆಯ, ತೊಲೆ ಯಾ ಅಂಥ ಯಾವುದೇ–ರಚನೆ ಯಾ ಆಕೃತಿ.

    cantilever bridge
    ನಾಮವಾಚಕ
    ಚಾಚುತೊಲೆ ಸೇತುವೆ; ಎದುರುಬದುರು ಚಾಚಿಕೊಂಡಿರುವ ಚಾಚು ತೊಲೆಗಳನ್ನು ಒಂದಕ್ಕೊಂದು ಸೇರಿಸಿ ನಿರ್ಮಿಸಿದ, ತೂಗುಹರವು ಉಳ್ಳ ಸೇತುವೆ.

    cantillate
    ಸಕರ್ಮಕ ಕ್ರಿಯಾಪದ
    ರಾಗವಾಗಿ ಪಠಿಸು; ರಾಗಬದ್ಧವಾಗಿ–ಓದು, ವಾಚನ ಮಾಡು, ಪಠಣ ಮಾಡು ( ಅಕರ್ಮಕ ಕ್ರಿಯಾಪದ ಸಹ).

    cantillation
    ನಾಮವಾಚಕ
    ಗಮಕ; ರಾಗಬದ್ಧವಾದ–ಓದು, ವಾಚನ, ಪಠಣ.

    cantina
    ನಾಮವಾಚಕ
    ಮದ್ಯದ ಅಂಗಡಿ ಯಾ ಮದ್ಯದ (ಅಂಗಡಿಯ ಕುಡಿಯುವ) ಕೋಣೆ.


    logo