logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bard
ಸಕರ್ಮಕ ಕ್ರಿಯಾಪದ
  • (ಕುದುರೆಗೆ) ಕವಚ ಹಾಕು.
  • (ಮಾಂಸಕ್ಕೆ) ಹಂದಿಮಾಂಸದ ಬಿಲ್ಲೆಯನ್ನು ತಗುಲಿಸು, ಹಚ್ಚು.

  • bardic
    ಗುಣವಾಚಕ
    (ಪುರಾತನ ಕೆಲ್ಟ್‍ ಬುಡಕಟ್ಟುಗಳ) ಪುರಾಣಿಕನ; ಹಾಡುಕವಿಯ ಯಾ ಅವನ ಕವಿತೆಗೆ ಸಂಬಂಧಿಸಿದ.

    bardlet
    ನಾಮವಾಚಕ
  • ಕುಕವಿ; ಕೆಟ್ಟಕವಿ; ಕ್ಷುದ್ರಕವಿ; ಕೀಳ್ಗವಿ.
  • ಕಿರುಕವಿ.

  • bardling
    ನಾಮವಾಚಕ
    = bardlet.

    bardolater
    ನಾಮವಾಚಕ
    ಷೇಕ್ಸ್‍ಪಿಯರ್‍ ಆರಾಧಕ.

    bardolatry
    ನಾಮವಾಚಕ
    ಷೇಕ್ಸ್‍ಪಿಯರ್‍ – ಪೂಜೆ, ಆರಾಧನೆ.

    bardship
    ನಾಮವಾಚಕ
  • ಕವಿಪದವಿ.
  • ಕವಿಮರ್ಯಾದೆ.
  • ಕವಿಯ ವ್ಯಕ್ತಿತ್ವ.

  • bardy
    ನಾಮವಾಚಕ
    (ಆಸ್ಟ್ರೇಲಿಯ) ಮರವನ್ನು ಕೊರೆಯುವ, ತಿನ್ನಬಹುದಾದ, ಹುಳು ಯಾ ಕೋಶದೊಳಗಿರುವ ಅದರ ಮರಿಹುಳು.

    bare
    ಗುಣವಾಚಕ ಪದಗುಚ್ಛ
  • ಬತ್ತಲೆ; ನಗ್ನ; ನಿರ್ವಾಣವಾದ; ಅನಾವೃತ; ಬಟ್ಟೆ – ಹಾಕಿರದ, ಹೊದಿಸಿರದ: bare knees ನಗ್ನ ಮಂಡಿಗಳು.
  • (ರೂಪಕವಾಗಿ) ತೆರೆದಿಟ್ಟ; ಮುಚ್ಚಿರದ; ಮರೆಯಿಲ್ಲದ; ಕಾಣುವ; ಪ್ರಕಟಿತ: his bare dislike (ಎದ್ದು) ಕಾಣುವ ಅವನ ಅಸಮಾಧಾನ.
  • (ಭೂಮಿಯ ವಿಷಯದಲ್ಲಿ) ಮರಗಿಡಗಳಿಲ್ಲದ; ಸಸ್ಯರಹಿತ.
  • (ಆಕಾಶದ ವಿಷಯದಲ್ಲಿ) ಮೋಡವಿಲ್ಲದ.
  • (ಮರಗಳ ವಿಷಯದಲ್ಲಿ) ಬೋಳಾದ; ಎಲೆಗಳಿಲ್ಲದ.
  • (ತಲೆಯ ವಿಷಯದಲ್ಲಿ):
    1. ಬರಿ; ಟೊಪ್ಪಿಯಿಲ್ಲದ.
    2. ಬೋಳು; ಕೂದಲಿಲ್ಲದ.
  • (ನೆಲ ಮೊದಲಾದವುಗಳ ವಿಷಯದಲ್ಲಿ) ಕಂಬಳಿ ಮೊದಲಾದವನ್ನು ಹಾಸಿಲ್ಲದ: bare floors ಬರಿ ನೆಲ; ಕಂಬಳಿ ಮೊದಲಾದವನ್ನು ಹಾಸಿರದ ನೆಲ. sleeping on bare boards ಬರಿ ಹಲಗೆಗಳ ಯಾ ಹಾಸಿಗೆ ಹಾಕಿರದ ಹಲಗೆಗಳ ಮೇಲೆ ಮಲಗಿರುವ.
  • ಕಾಪಿಲ್ಲದ; ರಕ್ಷಣೆಯಿಲ್ಲದ; ಅರಕ್ಷಿತ: fighting with bare hands (ಕವಚ ಮೊದಲಾದ ಕಾಪು ಧರಿಸದೆ) ಬರಿಗೈಯಿಂದಲೇ ಹೋರಾಡುತ್ತ.
  • (ಆಯುಧಗಳ ವಿಷಯದಲ್ಲಿ) ಒರೆ ಕಳಚಿದ: bare sword ಒರೆಯಿಂದ ಹೊರಗೆಳೆದ ಕತ್ತಿ.
  • ಇಲ್ಲದ; ಕೊರತೆಯಿರುವ; ಆವಶ್ಯಕತೆಗಳನ್ನು ಪೂರೈಸದ: a house bare of all comforts ಯಾವ ಅನುಕೂಲಗಳೂ ಇಲ್ಲದ ಮನೆ.
  • ಖಾಲಿ; ಬರಿದಾದ; ಏನೂ ಇಲ್ಲದ; ಶೂನ್ಯ; ರಹಿತ: bare room ಖಾಲಿ ಕೋಣೆ.
  • (ಸಾಹಿತ್ಯ, ಕಾವ್ಯ, ಮೊದಲಾದವುಗಳ ವಿಷಯದಲ್ಲಿ) ಬೋಳಾದ; ಅನಲಂಕೃತ.
  • ಸ್ವಲ್ಪ; ಅಲ್ಪ; ಬಹಳ ಕಡಮೆ: a bare majority ಅಲ್ಪ ಬಹುಮತ.
  • ಬರಿಯ; ಕೇವಲ; ಮಾತ್ರ: bare two years old ಕೇವಲ ಎರಡು ವರ್ಷದ.
  • ಬರಿಯ; ಸಾದಾ; ನಿರಲಂಕೃತ; ಇದ್ದದ್ದು ಇದ್ದಹಾಗೇ ಇರುವ: bare facts ಇದ್ದದ್ದು ಇದ್ದ ಹಾಗೆ ಇರುವ ಸಂಗತಿಗಳು.
  • ಸಾಲದೇನೋ ಎನ್ನುವಷ್ಟರ; ಎಷ್ಟು ಬೇಕೋ ಅಷ್ಟು ಮಾತ್ರದ; ಅಗತ್ಯಕ್ಕೆ ಮಾತ್ರ ಸಾಕಾಗಿರುವ: bare necessities ಎಷ್ಟು ಬೇಕೋ ಅಷ್ಟು ಮಾತ್ರದ ಆವಶ್ಯಕತೆಗಳು.

  • bare
    ಸಕರ್ಮಕ ಕ್ರಿಯಾಪದ ನುಡಿಗಟ್ಟು
  • ತೆರೆದಿಡು; ಮರೆ ತೆಗೆ; ಮುಸುಕು ತೆಗೆ.
  • ಒರೆ ಕಳಚು; ಹೊರಕ್ಕೆಳೆ.
  • ಬಿಚ್ಚಿ, ತೆಗೆದು – ತೋರಿಸು: bare one’s teeth (ಬಾಯಿ ತೆರೆದು) ಹಲ್ಲು ತೋರಿಸು.
  • ಬಟ್ಟೆ – ತೆಗೆ, ಬಿಚ್ಚು; ಬೆತ್ತಲೆ ಮಾಡು.


  • logo