logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acropolis
ನಾಮವಾಚಕ
  • ಅಕ್ರಾಪಲಿಸ್‍; ಪ್ರಾಚೀನ ಗ್ರೀಕ್‍ ಪಟ್ಟಣದ (ಮುಖ್ಯವಾಗಿ ಅಥೆನ್ಸಿನ) ಉನ್ನತ ಪ್ರದೇಶ ಯಾ ದುರ್ಗ.
  • ನಗರದುರ್ಗ.

  • acrosome
    ನಾಮವಾಚಕ
    (ಜೀವವಿಜ್ಞಾನ) ಅಗ್ರಪಿಂಡಕ; ಶುಕ್ರಾಗ್ರ; ಶುಕ್ರಾಣುವಿನ ಮುಂಭಾಗದಲ್ಲಿರುವ ಕೊಂಡಿಯಾಕಾರದ ಚಾಚಿಕೆ.

    acrospire
    ನಾಮವಾಚಕ
    (ಸಸ್ಯವಿಜ್ಞಾನ) ತುದಿಮೊಳಕೆ; ಅಗ್ರಾಂಕುರ; ಮೊಳಕೆ ಒಡೆದ ಕಾಳಿನಲ್ಲಿರುವ ಸುರುಳಿಯಾಕಾರದ ಅಂಕುರ.

    acrospore
    ನಾಮವಾಚಕ
    (ಸಸ್ಯವಿಜ್ಞಾನ) ಅಗ್ರಬೀಜಾಣು; ಬೀಜಾಣುದಾನಿಯ ತುದಿಯಲ್ಲಿರುವ ಬೀಜಾಣು.

    across
    ಕ್ರಿಯಾವಿಶೇಷಣ ನುಡಿಗಟ್ಟು
  • ಶಿಲುಬೆಯಾಕಾರದಲ್ಲಿ; ಅಡ್ಡಲಾಗಿ; ಅಡ್ಡಹಾಯುತ್ತ; ಪರಸ್ಪರ ಛೇದಿಸುವಂತೆ; ಒಂದರ ಮೇಲೆ ಇನ್ನೊಂದು ಹಾಯುವಂತೆ: a line drawn across ಅಡ್ಡಲಾಗಿ ಎಳೆದ ಗೆರೆ.
  • ಒಂದು ಕಡೆಯಿಂದ ಇನ್ನೊಂದು ಕಡೆಗೆ; ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ; ಅಡ್ಡಡ್ಡಲಾಗಿ: run across ಈ ಕಡೆಯಿಂದ ಆ ಕಡೆಗೆ (ಅಡ್ಡಡ್ಡಲಾಗಿ) ಓಡು. stretched across ಅಡ್ಡಡ್ಡಲಾಗಿ ಎಳೆದು ಕಟ್ಟಿದ. half a mile across ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಮೈಲಿ.
  • ಆ ಕಡೆಯಲ್ಲಿ; ಆ ಬದಿಯಲ್ಲಿ; ಆಚೆ ಕಡೆಗೆ; ಆ ಪಕ್ಕಕ್ಕೆ: by this time he is across ಇಷ್ಟುಹೊತ್ತಿಗೆ ಅವನು ಆಚೆ ದಡ ತಲುಪಿದ್ದಾನೆ.

  • across
    ಉಪಸರ್ಗ ನುಡಿಗಟ್ಟು
  • ಅಡ್ಡಲಾಗಿ; ಅಡ್ಡಹಾಯುವಂತೆ: keep this board across the other ಈ ಹಲಗೆಯನ್ನು ಇನ್ನೊಂದಕ್ಕೆ ಅಡ್ಡಲಾಗಿ ಇಡು.
  • ಅಡ್ಡಡ್ಡಲಾಗಿ; ಒಂದು ಕಡೆಯಿಂದ ಇನ್ನೊಂದು ಕಡೆಗೆ: swim across the lake ಸರೋವರದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಈಜಿಹೋಗು.
  • ಸಂಧಿಸುವಂತೆ; ಸೇರುವಂತೆ; ಸಂಪರ್ಕದಲ್ಲಿ; ಸಂಪರ್ಕಕ್ಕೆ; ಕಾಣುವಂತೆ: came across a blind man ಒಬ್ಬ ಕುರುಡನನ್ನು ಕಂಡ, ಸಂಧಿಸಿದ.
  • ಆ ಬದಿ; ಆ ಪಕ್ಕ; ಆಚೆ ಕಡೆ; ಆ ಕಡೆ: the shop is across the street ಅಂಗಡಿಯು ರಸ್ತೆಯ ಆ ಕಡೆ ಇದೆ. by this time he is across the channel ಇಷ್ಟು ಹೊತ್ತಿಗೆ ಅವನು ಕಾಲುವೆಯ ಆ ದಡ ಮುಟ್ಟಿದ್ದಾನೆ.

  • across the board
    ಗುಣವಾಚಕ
    (ಅಮೆರಿಕನ್‍ ಪ್ರಯೋಗ) ಸಾರ್ವಜನಿಕವಾದ; ಎಲ್ಲರಿಗೂ ಅನ್ವಯಿಸುವ: an across pay increase ಎಲ್ಲರಿಗೂ ಅನ್ವಯಿಸುವ ವೇತನ ಹೆಚ್ಚಳ.

    across the board
    ಕ್ರಿಯಾವಿಶೇಷಣ
    ಸಾರ್ವಜನಿಕವಾಗಿ; ಎಲ್ಲರಿಗೂ ಅನ್ವಯಿಸುವಂತೆ.

    acrostic
    ನಾಮವಾಚಕ ಪದಗುಚ್ಛ
  • ಪದ್ಯಬಂಧ; ಚಕ್ರಬಂಧ; ಕವನದ ಯಾ ಇತರ ಸಾಹಿತ್ಯಕೃತಿಯ ಪ್ರತಿ ಪಂಕ್ತಿಯ ಪ್ರಥಮ ಅಕ್ಷರಗಳನ್ನು ಯಾ ಪ್ರಥಮ ಅಂತಿಮ ಅಕ್ಷರಗಳನ್ನು, ಯಾ ಪ್ರಥಮ ಮಧ್ಯಮ ಅಂತಿಮ ಅಕ್ಷರಗಳನ್ನು ಯಾವುದಾದರೂ ಒಂದು ಕ್ರಮದಲ್ಲಿ ತೆಗೆದುಕೊಂಡರೆ ಒಂದು ಪದವೋ ವಾಕ್ಯವೋ ಆಗುವಂತೆ ಚಮತ್ಕಾರವಾಗಿ ಹೆಣೆದ ಪದ್ಯ.
  • ವರ್ಣಮಾಲಿಕೆ ಯಾ ಅಕ್ಷರ ಮಾಲಿಕೆ; ಪಾದಗಳ ಪ್ರಥಮಾಕ್ಷರಗಳು ವರ್ಣಮಾಲಾನುಕ್ರಮದಲ್ಲಿರುವ (ಮುಖ್ಯವಾಗಿ ಹೀಬ್ರೂ) ಪದ್ಯ.
  • = acronym.
  • ಚಿತ್ರಾಕ್ಷರಿ; ಸಮ ಉದ್ದದ ಹಲವಾರು ಪದಗಳನ್ನು ಒಂದರ ಕೆಳಗೊಂದು ಬರೆದು, ಮೇಲಿನಿಂದ ಕೆಳಕ್ಕೆ ಓದಿದರೂ ಅದೇ ಪದಗಳಾಗುವಂತಹ ಒಂದು ರಚನೆ. Figure: acrostic_4

  • acrostic
    ಗುಣವಾಚಕ
    ಪದ್ಯಬಂಧ ಯಾ ಪ್ರಥಮಾಕ್ಷರಿ ಯಾ ಚಿತ್ರಾಕ್ಷರಿ; ಇವುಗಳಿಗೆ ಸಂಬಂಧಿಸಿದ ಯಾ ಇವುಗಳನ್ನುಳ್ಳ ಯಾ ಇವುಗಳಂತಿರುವ.


    logo