ಚಹ ಮೇಲುಡುಗೆ; ಟೀ ಸೇವಿಸುವ ಸಮಯದಲ್ಲಿ ಧರಿಸುವ ಉದ್ದನೆಯ, ಅಳ್ಳಕವಾದ ಅಲಂಕಾರ ಮಾಡಿದ, ಹೆಂಗಸರ ಗೌನು, ಮೇಲುಡುಗೆ.
tea-house
ನಾಮವಾಚಕ
ಟೀ ಗೃಹ; ಚೀನಾ, ಪಾನುಗಳಲ್ಲಿ ಚಹಾ ಮೊದಲಾದವನ್ನು ಸೇವಿಸುವ ಸ್ಥಳ.
tea-kettle
ನಾಮವಾಚಕ
ಚಹಾ ಕೆಟ್ಟಲ್; ಚಹಾ ತಯಾರಿಸುವ, ನಳಿಕೆ ಮೂತಿ ಪಾತ್ರೆ, ಗಿಂಡಿ.
tea-leaf
ನಾಮವಾಚಕ
ಚಹಾ ಪಾನೀಯವನ್ನು ತಯಾರಿಸಲು ಬಳಸುವ, ಒಣಗಿಸಿದ ಚಹಾ ಎಲೆ.
(ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ನೆಲ ತೊಳೆಯಲು ಬಳಸುವ) ಚಹಾ ಚರಟ.
(ಅಶಿಷ್ಟ ಪ್ರಾಸ ಶಬ್ದವಾಗಿ thief) ಕಳ್ಳ.
tea-planter
ನಾಮವಾಚಕ
ಟೀ ಎಸ್ಟೇಟಿನ, ಚಹಾ ತೋಟದ–ಮಾಲೀಕ.
tea-tree
ನಾಮವಾಚಕ
(ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್) = manuka.
teacake
ನಾಮವಾಚಕ
ಟೀ ಜತೆ ಸೇವಿಸುವ, (ಸಾಮಾನ್ಯವಾಗಿ ಕರಿದ) ಸಣ್ಣ ಸಿಹಿ ಬ್ರೆಡ್ಡು ಯಾ ಬನ್ನು; ಸಣ್ಣ ಸಿಹಿ ಕೇಕು.
teach
ಕ್ರಿಯಾಪದ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
(ಮುಖ್ಯವಾಗಿ ಶಾಲೆಯಲ್ಲಿ) ಅಧ್ಯಾಪಕನಾಗಿರು; ಪಾಠಹೇಳು.
ಬೋಧಿಸು; (ವಿಷಯದ ಯಾ ಕೌಶಲದ ಬಗ್ಗೆ) ವ್ಯವಸ್ಥಿತ ಮಾಹಿತಿ ಕೊಡು, ತಿಳಿಸು, ಒದಗಿಸು.
ಕಲಿಸು; ಶಿಕ್ಷಣ ಕೊಡು; (ಬೋಧನೆ ಮತ್ತು ಶಿಕ್ಷಣದ ಮೂಲಕ) ಹೇಳಿಕೊಡು: taught him how to dance ನರ್ತನ ಮಾಡುವುದನ್ನು ಹೇಳಿಕೊಟ್ಟ.
ಪಾಠ ಕಲಿಸು; ಬಉದ್ಧಿ ಕಲಿಸು; ಮೇಲ್ಪಂಕ್ತಿಯ ಯಾ ಶಿಕ್ಷೆಯ ಮೂಲಕ ಪ್ರೇರಿಸು, ಪ್ರಚೋದಿಸು: this will teach you to speak the truth ಇದು ನಿನಗೆ ನಿಜ ಹೇಳುವುದನ್ನು ಕಲಿಸುತ್ತದೆ.
(ಆಡುಮಾತು) (ಮಾಡದಂತೆ, ಮಾಡಲು ಹೊರಡದಂತೆ) ಪಾಠ ಕಲಿಸು; ಬಉದ್ಧಿ ಕಲಿಸು: I will teach him not to meddle in my affairs ನನಗೆ ಸಂಬಂಧಿಸಿದ ವಿಷಯಗಳಲ್ಲಿ ಕೈಹಾಕದಂತೆ ಅವನಿಗೆ ಬಉದ್ಧಿ ಕಲಿಸುತ್ತೇನೆ.
(ಯಾವುದಾದರೂ ವಿಷಯ ಮೊದಲಾದವುಗಳನ್ನು) ಹೇಳಿಕೊಡು; ಬೋಧಿಸು; ಕಲಿಸು; ಪಾಠ ಹೇಳು: taught him Greek ಅವನಿಗೆ ಗ್ರೀಕ್ ಪಾಠ ಹೇಳಿಕೊಟ್ಟ. teaches Greek for a living ಹೊಟ್ಟೆಪಾಡಿಗಾಗಿ ಅವನು ಗ್ರೀಕ್ ಕಲಿಸುತ್ತಾನೆ.
ಪಾಠ ಹೇಳು; ಅಧ್ಯಾಪಕನಾಗಿರು; ಪಾಠ ಮಾಡು; ಬೋಧಿಸು: he teaches a large class ಅವನು ದೊಡ್ಡ (ಭಾರಿ ಸಂಖ್ಯೆಯ ವಿದ್ಯಾರ್ಥಿಗಳಿರುವ) ತರಗತಿಗೆ ಅಧ್ಯಾಪಕನಾಗಿದ್ದಾನೆ.
(ನೈತಿಕ ಮೊದಲಾದ ತತ್ತ್ವವನ್ನಾಗಿ) ತೋರಿಸಿ ಕೊಡು; ತಿಳಿಸಿಕೊಡು: taught him that we must forgive our enemies ನಮ್ಮ ಶತ್ರುಗಳನ್ನು ನಾವು ಕ್ಷಮಿಸಬೇಕೆಂದು ಅವನು ತೋರಿಸಿಕೊಟ್ಟ.
teach-in
ನಾಮವಾಚಕ
ಉಪನ್ಯಾಸ; ಸಾರ್ವಜನಿಕರಿಗೆ ಆಸಕ್ತಿ ಇರುವ ವಿವಾದಾತ್ಮಕ ವಿಷಯಗಳ ಮೇಲೆ ವಿಶ್ವವಿದ್ಯಾನಿಲಯ ಮೊದಲಾದವುಗಳಲ್ಲಿ ಏರ್ಪಡಿಸಲಾಗುವ ಸಾಮಾನ್ಯ ಉಪನ್ಯಾಸ, ಚರ್ಚೆ, ಮೊದಲಾದವು ಯಾ ಅವುಗಳ ಮಾಲೆ, ಸರಣಿ.