ಒಳ್ಳೆಯ ನಡತೆಯಿರುವಿಕೆ; ಸಭ್ಯತೆ; ಮರ್ಯಾದಾಪರತೆ; ವಿನಯಶೀಲತೆ.
mannerly
ಗುಣವಾಚಕ
ಒಳ್ಳೆಯ ನಡತೆಯುಳ್ಳ; ಸಭ್ಯ; ಮರ್ಯಾದೆಯ; ಮರ್ಯಾದಸ್ಥ; ವಿನಯ ಶೀಲ.
mannikin
ನಾಮವಾಚಕ
= manikin.
mannish
ಗುಣವಾಚಕ
(ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) (ಹೆಂಗಸಿನ ವಿಷಯದಲ್ಲಿ) (ನೋಡಲು ಯಾ ನಡೆವಳಿಕೆಯಲ್ಲಿ) ಗಂಡಸಿನಂತಿರುವ.
ಗಂಡಸಿಗೆ – ತಕ್ಕ ಯಾ ವಿಶಿಷ್ಟವಾದ; ಪುರುಷಾರ್ಹ: with true mannish arrogance ಗಂಡಸಿಗೆ ತಕ್ಕ ಸೊಕ್ಕಿನಿಂದ.
mannishly
ಕ್ರಿಯಾವಿಶೇಷಣ
(ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) (ಹೆಂಗಸಿನ ವಿಷಯದಲ್ಲಿ) (ನೋಡಲು ಯಾ ನಡವಳಿಕೆಯಲ್ಲಿ) ಗಂಡಸಿನಂತೆ.
ಗಂಡಸಿಗೆ – ತಕ್ಕಂತೆ; ಪುರುಷಾರ್ಹವಾಗಿ; ಪುರುಷಸದೃಶವಾಗಿ.
mannishness
ನಾಮವಾಚಕ
(ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) (ಹೆಂಗಸಿನ ವಿಷಯದಲ್ಲಿ) (ನೋಡಲು ಯಾ ನಡವಳಿಕೆಯಲ್ಲಿ) ಗಂಡಸಿನಂತಿರುವಿಕೆ.
ಪುರುಷನಂತಿರುವಿಕೆ; ಗಂಡಸಿಗೆ ತಕ್ಕಂತೆ ಯಾ ವಿಶಿಷ್ಟವಾಗಿ ಇರುವಿಕೆ.
manoeuvrability
ನಾಮವಾಚಕ
ಪೂರ್ವಯೋಜನೆಯಂತೆ ಚಲಿಸಬಲ್ಲಿಕೆ ಯಾ ಚಲಿಸುವಂತೆ ಮಾಡಬಲ್ಲಿಕೆ; ಕುಶಲತೆಯಿಂದ, ಹೇಗೆಂದರೆ ಹಾಗೆ – ಚಾಲನೆ ಮಾಡಬಹುದಾಗಿರುವಿಕೆ, ನಿರ್ವಹಿಸಬಹುದಾಗಿರುವಿಕೆ: manoeuvrability is an essential quality of a racing car ರೇಸಿಂಗ್ ಕಾರಿನಲ್ಲಿ ಅವಶ್ಯವಾಗಿರಬೇಕಾದ ಗುಣವೆಂದರೆ ಕುಶಲ ನಿರ್ವಹಣೆ.
(ಸೈನ್ಯ ಮೊದಲಾದವುಗಳ ವಿಷಯದಲ್ಲಿ)
ವ್ಯೂಹವಾಗಬಲ್ಲಿಕೆ; ವ್ಯೂಹಮಾಡಬಲ್ಲಿಕೆ.
ಅಭ್ಯಾಸ ಕಾರ್ಯಾಚರಣೆಯಲ್ಲಿ ತೊಡಗಬಲ್ಲಿಕೆ ಯಾ ತೊಡಗಿಸಬಲ್ಲಿಕೆ.
manoeuvrable
ಗುಣವಾಚಕ
ಕುಶಲ ನಿರ್ವಾಹದ; ಕುಶಲ ತಂತ್ರದಿಂದ ನಿರ್ವಹಿಸಬಹುದಾದ: a manoeuvrable foreign policy ಕುಶಲ ವಿದೇಶೀ ನೀತಿ.
(ಸೈನ್ಯಪಡೆಗಳ ವಿಷಯದಲ್ಲಿ)
ವ್ಯೂಹನೀಯ; ವ್ಯೂಹ ರಚಿಸಬಹುದಾದ.
ಅಭ್ಯಾಸ ಕಾರ್ಯಾಚರಣೆಯಲ್ಲಿ ತೊಡಗಿಸಬಹುದಾದ.
manoeuvre
ನಾಮವಾಚಕ
ಕುಶಲಚಲನೆ; ಯೋಜಿಸಿದ ಮತ್ತು ನಿಯಂತ್ರಿಸಿದ ಚಲನೆ ಯಾ ಚಲನೆಗಳು.
(ಬಹುವಚನದಲ್ಲಿ) (ಸೇನಾಪಡೆಗಳು, ಯುದ್ಧನೌಕೆಗಳು, ಮೊದಲಾದವುಗಳ) ಭಾರಿ ಪ್ರಮಾಣದ ಅಭ್ಯಾಸ ಕಾರ್ಯಾಚರಣೆ; ಪೂರ್ವಯೋಜಿತ ಮತ್ತು ನಿಯಂತ್ರಿತ ಚಾಲನೆ, ವ್ಯೂಹ ರಚನೆ, ಮೊದಲಾದವು.
ಕೃತ್ರಿಮೋಪಾಯ; ಕುಟಿಲ ತಂತ್ರ; ಕಪಟೋಪಾಯ; ಉದ್ದೇಶವೊಂದನ್ನು ಸಾಧಿಸಲು ಪೂರ್ವಯೋಜಿತವಾದ ಯಾ ನಿಯೋಜಿತವಾದ (ಅನೇಕ ವೇಳೆ) ಮೋಸದ ಕಾರ್ಯಾಚರಣೆ.
ಕುಶಲ – ಯೋಜನೆ, ಹಂಚಿಕೆ, ಹೂಟ, ಕಾರ್ಯಾಚರಣೆ: political manoeuvre ಕುಶಲ ರಾಜಕೀಯ ಕಾರ್ಯಾಚರಣೆಗಳು.