logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electrotechnics
ನಾಮವಾಚಕ
= electrotechnology.

electrotechnology
ನಾಮವಾಚಕ
ವಿದ್ಯುತ್ತಂತ್ರ; ವಿದ್ಯುತ್ತಂತ್ರ — ವಿಜ್ಞಾನ, ವಿದ್ಯೆ; ವಿದ್ಯುತ್ತನ್ನು ತಂತ್ರವಿದ್ಯೆಯಲ್ಲಿ ಬಳಸಿಕೊಳ್ಳುವ ವಿಜ್ಞಾನ.

electrotherapist
ನಾಮವಾಚಕ
ವಿದ್ಯುಚ್ಚಿಕಿತ್ಸಕ; ವಿದ್ಯುತ್‍ಚಿಕಿತ್ಸೆ ನೀಡುವವ.

electrotherapy
ನಾಮವಾಚಕ
ವಿದ್ಯುಚ್ಚಿಕಿತ್ಸೆ; ವಿದ್ಯುತ್ತಿನ ನೆರವಿನಿಂದ ನಡೆಸುವ ರೋಗ ಚಿಕಿತ್ಸೆ.

electrothermal
ಗುಣವಾಚಕ
ವಿದ್ಯುದುಷ್ಣದ; ವಿದ್ಯುತ್ತಿನಿಂದ ಶಾಖವನ್ನು ಉತ್ಪತ್ತಿ ಮಾಡುವುದಕ್ಕೆ ಸಂಬಂಧಿಸಿದ.

electrothermic
ಗುಣವಾಚಕ
= electrothermal.

electrotonus
ನಾಮವಾಚಕ
(ಶರೀರ ವಿಜ್ಞಾನ) ವಿದ್ಯುನ್ನಾಡೀಸ್ಥಿತಿ; ವಿದ್ಯುತ್ಪ್ರವಾಹದ ಪರಿಣಾಮವಾಗಿ ನರದ ಸಂವೇದಕತೆಯಲ್ಲಾಗುವ ಬದಲಾದ ಸ್ಥಿತಿ.

electrotype
ನಾಮವಾಚಕ
  • ವಿದ್ಯುದಚ್ಚು; ಮೇಣ ಮೊದಲಾದ ಅಚ್ಚಿನ ಮೇಲೆ ವಿದ್ಯುಲ್ಲೇಪನ ವಿಧಾನದಿಂದ ತಾಮ್ರವನ್ನು ತೆಳುವಾಗಿ ಹರಡಿ ನಿಕ್ಷೇಪಿಸಿ ತಯಾರಿಸಿದ, ಮುಖ್ಯವಾಗಿ ಮುದ್ರಣದ ಅಚ್ಚು.
  • ವಿದ್ಯುನ್ಮುದ್ರಣ:
    1. ವಿದ್ಯುದಚ್ಚಿನಿಂದ ಮುದ್ರಿಸುವುದು.
    2. ಈ ವಿಧಾನದಿಂದ ಅಚ್ಚು ಮಾಡಿದ್ದು.

  • electrotype
    ಸಕರ್ಮಕ ಕ್ರಿಯಾಪದ
    (ಯಾವುದೇ ಮಾದರಿಯ) ವಿದ್ಯುದಚ್ಚು ತಯಾರಿಸು.

    electrovalence
    ನಾಮವಾಚಕ
    (ರಸಾಯನವಿಜ್ಞಾನ) ವಿದ್ಯುದ್ವೇಲನ್ಸಿ:
  • ಒಂದು ಪರಮಾಣುವಿನಿಂದ ಇನ್ನೊಂದಕ್ಕೆ ಇಲೆಕ್ಟ್ರಾನುಗಳು ವರ್ಗಾವಣೆಯಾಗಿ ಅಯಾನುಗಳು ಉತ್ಪತ್ತಿಯಾಗುವ ರೀತಿಯ ರಾಸಾಯನಿಕ ಸಂಯೋಗ.
  • ಇದರ ಪರಿಣಾಮವಾಗಿ ಆ ಪರಮಾಣುಗಳ ಮೇಲೆ ಉಂಟಾಗುವ ಋಣ ಯಾ ಧನ ಆವೇಶಗಳ ಸಂಖ್ಯೆ.


  • logo