logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Cantate
ನಾಮವಾಚಕ
ಬೈಬಲಿನ ಪ್ರಾರ್ಥನಾ ಪುಸ್ತಕದ ಒಂದು ಗೀತೆ.

cantatrice
ನಾಮವಾಚಕ
ವೃತ್ತಿಗಾಯಕಿ; ಗಾಯನವನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವವಳು.

cantboard
ನಾಮವಾಚಕ
ಇಳಿಜಾರು ಹಲಗೆ; ಓಲುಹಲಗೆ; ವಾಲುಹಲಗೆ.

cante hondo
ನಾಮವಾಚಕ
Spanish ಸ್ಪೇನ್‍ ಭಾಷೆಯ ಒಂದು ಬಗೆಯ ಜನಪ್ರಿಯ ಗೀತೆ, ಸಾಮಾನ್ಯವಾಗಿ ಶೋಕಗೀತೆ.

canteen
ನಾಮವಾಚಕ
  • (ಸೈನಿಕರ ವಠಾರ ಯಾ ಬಿಡಾರದಲ್ಲಿನ) ದಿನಸಿ ಮತ್ತು ಮದ್ಯದ ಅಂಗಡಿ: dry canteen (ಮುಖ್ಯವಾಗಿ ಮದ್ಯ ಮಾರದ) ದಿನಸಿ ಅಂಗಡಿ. wet canteen ಮದ್ಯದಂಗಡಿ; ಮುಖ್ಯವಾಗಿ ಮದ್ಯವನ್ನು ಮಾರುವ ಅಂಗಡಿ.
  • ಕ್ಯಾಂಟೀನು; ತಿಂಡಿಕಟ್ಟೆ; ದೊಡ್ಡ ದೊಡ್ಡ ಸಾರ್ವಜನಿಕ ಯಾ ಖಾಸಗಿ ಸಂಸ್ಥೆಗಳಲ್ಲಿ ತಮ್ಮ ನೌಕರರಿಗಾಗಿ ಇರುವ ರೆಸ್ಟೊರಂಟು, ಬಾರ್‍ ಯಾ ಊಟದ ಹೋಟೆಲು.
  • (ಸೈನಿಕನ ಯಾ ಪ್ರಯಾಣಿಕನ) ನೀರುದಾನಿ ಯಾ (ತಿನ್ನಲು ಮತ್ತು ಕುಡಿಯಲು ಬಳಸುವ) ಪಾತ್ರೆಗಳು.
  • ಊಟದಲ್ಲಿ ಬಳಸುವ ತಟ್ಟೆ, ಚಮಚ, ಚಾಕು, ಫೋರ್ಕು ಮೊದಲಾದವುಗಳನ್ನು ಇಡುವ ಪೆಟ್ಟಿಗೆ; ಅಡಿಗೆ ಮತ್ತು ಊಟದ ಪಾತ್ರೆಗಳ ಪೆಟ್ಟಿಗೆ; ಪಾತ್ರೆಪೆಟ್ಟಿಗೆ.

  • canter
    ನಾಮವಾಚಕ
  • (ಒಂದು ವೃತ್ತಿಯ, ಧರ್ಮದ) ಪರಿಭಾಷಕ; ಪರಿಭಾಷೆ ಆಡುವವನು.
  • ಬೂಟಾಟಿಕೆ ಮಾತಾಡುವವನು; ಆಷಾಢಭೂತಿ ಮಾತುಗಾರ; ಸೋಗುಮಾತಾಳಿ.

  • canter
    ನಾಮವಾಚಕ ನುಡಿಗಟ್ಟು
    (ಕುದುರೆಯ ವಿಷಯದಲ್ಲಿ) ಅನಾಯಾಸ ನಾಗಾಲೋಟ; ನಾಗಾಲೋಟಕ್ಕಿಂತ ಸ್ವಲ್ಪ ನಿಧಾನವಾದ ಮತ್ತು ಸಲೀಸಾದ ಓಟ. win in a canter ಅನಾಯಾಸವಾಗಿ ಗೆಲ್ಲು; ಸಲೀಸಾಗಿ ಯಶಸ್ವಿಯಾಗು; ಶ್ರಮವಿಲ್ಲದೆ ಜಯಗಳಿಸು.

    canter
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಕುದುರೆಯನ್ನು) ಸಲೀಸಾದ ನಾಗಾಲೋಟದಲ್ಲಿ –ಬಿಡು, ಓಡಿಸು. (ಸವಾರ ಯಾ ಕುದುರೆಯ ವಿಷಯದಲ್ಲಿ) ಸಲೀಸಾಗಿ ನಾಗಾಲೋಟದಲ್ಲಿ ಓಡು.

    Canterbury
    ನಾಮವಾಚಕ
  • ಇಂಗ್ಲಂಡಿನ ಪ್ರಧಾನ ಮಠಾಧಿಪತಿ (ಆರ್ಚ್‍ ಬಿಷಪ್‍) ಇರುವ ನಗರ.
  • (canterbury) ಖಾನೆನಿಲುವು; ಅರೆನಿಲುವು; ಸಂಗೀತಕೃತಿ ಮೊದಲಾದವನ್ನು ಮುದ್ರಿಸಿರುವ ಹಾಳೆಗಳು, ಪತ್ರಿಕೆಗಳು, ಬಿಳಿ ಹಾಳೆಗಳು ಮೊದಲಾದವನ್ನು ಬೇರೆಬೇರೆಯಾಗಿ ಇಡುವಂಥ ಖಾನೆಗಳುಳ್ಳ ನಿಲುವು.

  • Canterbury bell
    ನಾಮವಾಚಕ
    (ಒಂದು ಬಗೆಯ) ಗಂಟೆ ಹೂವು (ಗಿಡ); ಕ್ಯಾಂಪ್ಯಾನ್ಯುಲ ಕುಲಕ್ಕೆ ಸೇರಿದ, ನೀಲಿ, ಗುಲಾಬಿ ಯಾ ಬಿಳಿ ಬಣ್ಣದ, ಗಂಟೆಯಾಕಾರದ ಸುಂದರ ಹೂಗಳನ್ನು ಬಿಡುವ ಗಿಡ.


    logo