logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Barbizon school
ನಾಮವಾಚಕ
ಬಾರ್ಬಿಸಾನ್‍ ಪಂಥ; ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿದ್ದ, ಭೂದೃಶ್ಯಗಳನ್ನೂ ಜನಸಾಮಾನ್ಯರ ಜೀವನವನ್ನೂ ಚಿತ್ರಿಸುತ್ತಿದ್ದ, ಹ್ರೆಂಚ್‍ ಚಿತ್ರಕಾರರ ಗುಂಪು.

barbola
ನಾಮವಾಚಕ
ಅಂಟು ಅಲಂಕಾರ; ಸಣ್ಣ ವಸ್ತುಗಳಿಗೆ ಬಣ್ಣಬಣ್ಣದ ಪ್ಲಾಸ್ಟಿಕ್‍ ಹೂ, ಹಣ್ಣು, ಮೊದಲಾದವನ್ನು ಅಂಟಿಸುವ ಕುಶಲ ಕೆಲಸ.

barbola work
ನಾಮವಾಚಕ
= barbola.

barbule
ನಾಮವಾಚಕ
  • (ಕೆಲವು ಬಗೆಯ ಈನುಗಳಿಂದ ಜೋಲಾಡುವ) ಕಿರುತಂತು.
  • (ಹಕ್ಕಿಯ ಗರಿಯ) ನವುರೆಳೆ; ಸಣ್ಣತಂತು.

  • barcarol(l)e
    ನಾಮವಾಚಕ
  • (ವೆನಿಸ್‍ನ) ದೋಣಿಗನ ಹಾಡು; ನಾವಿಕಗೀತ.
  • ದೋಣಿಗನ ಹಾಡಿನ ಶೈಲಿಯ ಸಂಗೀತ.

  • Barcelona
    ನಾಮವಾಚಕ
  • (ಸ್ಪೇನ್‍ನ) ಬಾರ್ಸಿಲೋನ(ನಗರ).
  • (ಸ್ಪೇನ್‍ ಮೊದಲಾದವುಗಳಿಂದ ಆಮದು ಮಾಡಿಕೊಂಡು) ಹೇಸಲ್‍ ಕಾಯಿ.

  • Barcelona nut
    ನಾಮವಾಚಕ
    = Barcelona(2).

    bard
    ನಾಮವಾಚಕ ನುಡಿಗಟ್ಟು
  • (ಪುರಾತನ ಕೆಲ್ಟ್‍ ಬುಡಕಟ್ಟುಗಳ) ಪುರಾಣಿಕ; ಚಾರಣ; ಹಾಡುಕವಿ.
  • (ವೇಲ್ಸಿನ) ರಾಜ್ಯಕವಿ; ಐಸ್ಟೆಡ್‍ಫಡ್‍ ಸಭೆ ಒಪ್ಪಿಕೊಂಡ ಕವಿ.
  • ಪ್ರಾಚೀನ ಕವಿ.
  • ಭಾವಗೀತಕಾರ.
  • ಕವಿ.

  • bard
    ನಾಮವಾಚಕ
    (ಯುದ್ಧಕುದುರೆಯ) ಎದೆಗವಚ; ಪಕ್ಕರೆ; ಎದೆಮರೆ; ಉರಸ್ತ್ರಾಣ.

    bard
    ನಾಮವಾಚಕ
    (ಹುರಿಯುವಾಗ ಮಾಂಸ ಒಣಗದಂತೆ ಇರಲು, ಅದಕ್ಕೆ ಬಿಗಿಯಾಗಿ ಜೋಡಿಸುವ) ಹಂದಿಮಾಂಸದ ಬಿಲ್ಲೆ.


    logo