logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acromania
ನಾಮವಾಚಕ
(ಮನಶ್ಶಾಸ್ತ್ರ) ರೌದ್ರೋನ್ಮಾದ; ಗುಣಪಡಿಸಲಾಗದ ಮತ್ತು ಹಿಂಸಾಪ್ರವೃತ್ತಿಯ ಹುಚ್ಚು.

acromegaly
ನಾಮವಾಚಕ
(ರೋಗಶಾಸ್ತ್ರ) ದೈತ್ಯಾಂಗತೆ; ಅಂಗಾತಿವೃದ್ಧಿ; ಪಿಟ್ಯುಟರಿ ಗ್ರಂಥಿಯ ಅವ್ಯವಸ್ಥೆಯಿಂದ ವಯಸ್ಕರ ಕೈಕಾಲು, ಮುಖ, ಮೊದಲಾದ ಅಂಗಗಳು, ಮೂಳೆಗಳು ಅತಿಯಾಗಿ ಬೆಳೆಯುವ ಒಂದು ವ್ಯಾಧಿ.

acronarcotic
ಗುಣವಾಚಕ
(ವಸ್ತುಗಳ ವಿಷಯದಲ್ಲಿ) ಸಂಮಾದಕ; ಕಟುವಾಗಿಯೂ ಮತ್ತು ಬರಿಸುವಂತೆಯೂ ಇರುವ ಗುಣವುಳ್ಳ.

acronyc(h)al
ಗುಣವಾಚಕ
(ಮುಖ್ಯವಾಗಿ ನಕ್ಷತ್ರಗಳ ಉದಯ ಯಾ ಅಸ್ತಗಳ ವಿಷಯದಲ್ಲಿ) ಸಾಯಂಕಾಲಿಕ; ಸಂಜೆಯಲ್ಲಿ ಆಗುವ.

acronyc(h)ally
ಕ್ರಿಯಾವಿಶೇಷಣ
ಸಾಯಂಕಾಲಿಕವಾಗಿ.

acronym
ನಾಮವಾಚಕ
ಮೊದಲಕ್ಕರಿ; ಪ್ರಥಮಾಕ್ಷರಿ; ಪ್ರಥಮಾಕ್ಷರಕ; ಪದಗಳ ಪ್ರಥಮ ಅಕ್ಷರಗಳನ್ನು ಸೇರಿಸಿ ಮಾಡಿದ ಒಂದು ಪದ, ಉದಾಹರಣೆಗೆ UNESCO (United Nations Educational Scientific and Cultural Organisation).

acrook
ಕ್ರಿಯಾವಿಶೇಷಣ
ಓರೆಯಾಗಿ; ಸೊಟ್ಟಗೆ; ವಕ್ರವಾಗಿ.

acropetal
ಗುಣವಾಚಕ
(ಸಸ್ಯವಿಜ್ಞಾನ) ಊರ್ಧ್ವ ಪ್ರಸರಿ; ಊರ್ಧ್ವವರ್ಧಿ; ಕೆಳಗಿನಿಂದ ಮೇಲ್ಗಡೆಗೆ–ಹರಡುವ, ಹಬ್ಬುವ, ಬೆಳೆಯುವ: acropetal spread of a virus ವೈರಸ್ಸಿನ ಊರ್ಧ್ವಾಭಿಮುಖ ಪ್ರಸರಣ.

acropetally
ಕ್ರಿಯಾವಿಶೇಷಣ
(ಸಸ್ಯವಿಜ್ಞಾನ) ಊರ್ಧ್ವಪ್ರಸರವಾಗಿ; ಊರ್ಧ್ವವರ್ಧಿಯಾಗಿ; ಊರ್ಧ್ವಾಭಿಮುಖವಾಗಿ ವರ್ಧಿಸುವಂತೆ.

acrophobia
ನಾಮವಾಚಕ
(ಮನಶ್ಶಾಸ್ತ್ರ) ಎತ್ತರದ ಭಯ; ಔನ್ನತ್ಯಭೀತಿ; ಎತ್ತರದಲ್ಲಿರುವುದರಿಂದ ಬರುವ ಭಯವಿಕಾರ.


logo