ಯುಗ್ಮಾನ್ವಯ (ಅಲಂಕಾರ); ವಾಕ್ಯದ ಒಂದು ಕ್ರಿಯಾಪದ ಯಾ ಗುಣವಾಚಕ ಆ ವಾಕ್ಯದಲ್ಲಿನ ಎರಡು ನಾಮಪದಗಳಲ್ಲಿ ಒಂದಕ್ಕೆ ಮಾತ್ರ ಸರಿಯಾಗಿ ಅನ್ವಯಿಸುವಂತಿದ್ದು ಮತ್ತೊಂದಕ್ಕೆ ಅನ್ವಯವಾಗಬೇಕಾಗಿದ್ದುದನ್ನು ಲೋಪಿಸಿ, ಎರಡು ನಾಮಪದಗಳಿಗೂ ಆ ಒಂದೇ ಕ್ರಿಯಾಪದ ಯಾ ಗುಣವಾಚಕ ಅನ್ವಯಿಸುವಂತೆ ಪ್ರಯೋಗಿಸುವ ಒಂದು ಅಲಂಕಾರ, ಉದಾಹರಣೆಗೆ with weeping eyes and grieving hearts ಎಂಬಲ್ಲಿ grieving ಪದವನ್ನು ಲೋಪಿಸಿ ಹೇಳುವುದು.
zeugmatic
ಗುಣವಾಚಕ
ಯುಗ್ಮಾನ್ವಯಾಲಂಕಾರದ.
Zeus
ನಾಮವಾಚಕ
ಪದಗುಚ್ಛ
(ಗ್ರೀಕ್ ಪುರಾಣ) ಗಿಕರ ದೇವರಾಜ; ದೇವೇಂದ್ರ; ಅತ್ಯುನ್ನತ ದೇವತೆ. by Zeus! (= Jove) ದೇವರಾಣೆ! (ಒಪ್ಪಿಗೆಯನ್ನು ಯಾ ಆಶ್ಚರ್ಯವನ್ನು ಸೂಚಿಸುವ ಉದ್ಗಾರ.)
zho
ನಾಮವಾಚಕ
dzho ಎಂಬುದರ ರೂಪಾಂತರ.
zibet
ನಾಮವಾಚಕ
(ಅಮೆರಿಕನ್ ಪ್ರಯೋಗ zibeth).
(ಏಷ್ಯದ ಯಾ ಇಂಡಿಯಾದ) ಪುನುಗು ಬೆಕ್ಕು.
(ಅದರ) ಪುನುಗು; ಜವಾದಿ; ಜವಾಜಿ.
zidovudine
ನಾಮವಾಚಕ
ಏಡ್ಸ್ (AIDS) ರೋಗಾಣುಗಳನ್ನು ನಾಶಪಡಿಸಲು ಬಳಸುವ ಒಂದು ಮದ್ದು (azidothymidine).
ziff
ನಾಮವಾಚಕ
(ಆಸ್ಟ್ರೇಲಿಯ) (ಅಶಿಷ್ಟ) ಗಡ್ಡ; ದಾಡಿ.
ziggurat
ನಾಮವಾಚಕ
ಹಂತಗೋಪುರದ ದೇವಾಲಯ; ಒಂದರ ಮೇಲೊಂದರಂತೆ ಪಿರಮಿಡ್ಡಿನಾಕಾರದಲ್ಲಿ ಏರುತ್ತ ಹೋಗುವ ತಾರಸಿಗಳುಳ್ಳ, ಪುರಾತನ ಮೆಸಪೊಟೇಮಿಯದ ದೇವಾಲಯ.