logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ulema
ನಾಮವಾಚಕ
  • ಊಲೆಮಾ; ಮುಸಲ್ಮಾನ್‍ ಧರ್ಮಶಾಸ್ತ್ರಜ್ಞ, ದೇವತಾಶಾಸ್ತ್ರಜ್ಞ.
  • ಮುಸಲ್ಮಾನ್‍ ಧರ್ಮಶಾಸ್ತ್ರಜ್ಞರ ಯಾ ದೇವತಾಶಾಸ್ತ್ರಜ್ಞರ ಮಂಡಲಿ.

  • uliginose
    ಗುಣವಾಚಕ
    (ಸಸ್ಯವಿಜ್ಞಾನ) ಕಚ್ಫಜ; ಪಂಕಜ; ಅನೂಪಜ; ಕೆಸರಿನಲ್ಲಿ, ಜೌಗಿನಲ್ಲಿ ಬೆಳೆಯುವ.

    uliginous
    ಗುಣವಾಚಕ
    = uliginose.

    ullage
    ನಾಮವಾಚಕ
  • ಕೊರತೆ; ಹ್ರಾಸ; ಪೀಪಾಯಿ ಮೊದಲಾದವು ಭರ್ತಿಯಾಗುವುದಕ್ಕೆ ಕೊರೆಬಿದ್ದ ಮೊತ್ತ.
  • ಉಳಿಕೆ(ಯದು); ಉಳಿದದ್ದು; (ಅವ)ಶೇಷ; ಒಂದು ಪಾತ್ರೆ ಮೊದಲಾದವುಗಳಲ್ಲಿಟ್ಟ ಮದ್ಯ, ದ್ರವ, ಮೊದಲಾದವು ಆವಿಯಾಗಿ ಉಳಿದ ಮೊತ್ತ.

  • ulna
    ನಾಮವಾಚಕ
  • (ಬಹುವಚನ ulnae ಉಚ್ಚಾರಣೆ ಅಲ್ನೀ). ಪ್ರಕೋಷ್ಠಾಸ್ಥಿ; ಮುಂದೋಳಿನ, ಒಳ(ಪಾರ್ಶ್ವದ ) ಎಲುಬಉ; ಹೆಬ್ಬೆರಳಿಗೆ ವಿರುದ್ಧ ದಿಕ್ಕಿನಲ್ಲಿರುವ ಮುಂದೋಳಿನ, ಉದ್ದವೂ ತೆಳುವೂ ಆದ ಮೂಳೆ.
  • (ಪ್ರಾಣಿವಿಜ್ಞಾನ) ಪ್ರಾಣಿಯ ಮುಂಗಾಲಿನ ಯಾ ಪಕ್ಷಿಯ ರೆಕ್ಕೆಯ ಅದೇ ರೀತಿಯ ಮೂಳೆ.

  • ulnar
    ಗುಣವಾಚಕ
    ಪ್ರಕೋಷ್ಠಾಸ್ಥಿಯ; ಮುಂದೋಳಿನ ಒಳ ಎಲುಬಿನ ಯಾ ಅದಕ್ಕೆ ಸಂಬಂಧಿಸಿದ ಯಾ ಅದು ಇರುವೆಡೆ ಇರುವ.

    ulotrichan
    ಗುಣವಾಚಕ
  • (ಮುಖ್ಯವಾಗಿ ಮಾನವ ಜನವರ್ಗವನ್ನು ಸೂಚಿಸುವ) ಗುಂಗುರು ಕೇಶದ, ಕೂದಲಿನ.
  • ಗುಂಗುರು ಕೇಶಿ ಜನವರ್ಗದ; ಗುಂಗುರು ಕೂದಲುಳ್ಳ ಜನಾಂಗದ.

  • ulotrichan
    ನಾಮವಾಚಕ
    ಗುಂಗುರು ಕೇಶಿ, ಕೂದಲಿನವನು; ಗುಂಗುರು ಕೂದಲಿನ ಜನವರ್ಗಕ್ಕೆ ಸೇರಿದವನು.

    ulotrichous
    ಗುಣವಾಚಕ
    = 1ulotrichan.

    ulster
    ನಾಮವಾಚಕ
    ಅಲ್ಸ್‍ಟರ್‍ ಮೇಲಂಗಿ; ಒರಟು ಬಟ್ಟೆಯಿಂದ ಮಾಡಿದ, ನಡುಪಟ್ಟಿಯಿರುವ, ಉದ್ದವಾದ, ಸಡಿಲ ಮೇಲಂಗಿ.


    logo