logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

taboo
ಗುಣವಾಚಕ
  • (ಸಾಮಾನ್ಯವಾಗಿ ಸಾಮಾಜಿಕ ಪದ್ಧತಿಯಿಂದ) ಬಹಿಷ್ಕರಿಸಿದ; ನಿಷೇಧಿಸಿದ; ನಿಷಿದ್ಧ: a taboo word ನಿಷಿದ್ಧ ಪದ ಯಾ ಮಾತು.
  • ಪವಿತ್ರವೆಂದು ಮೀಸಲಾಗಿಟ್ಟ, ಪ್ರತ್ಯೇಕಿಸಿಟ್ಟ.

  • taboo
    ಸಕರ್ಮಕ ಕ್ರಿಯಾಪದ
  • (ವಸ್ತು, ಪದ್ಧತಿ, ಮೊದಲಾದವನ್ನು)
    1. ನಿಷೇಧಿಸು; ಬಹಿಷ್ಕರಿಸು.
    2. ಪವಿತ್ರವೆಂದು–ಮೀಸಲಾಗಿರಿಸು, ಪ್ರತ್ಯೇಕಿಸಿಡು.
  • (ಅಧಿಕಾರ ಬಲದಿಂದ ಯಾ ಸಾಮಾಜಿಕ ಪ್ರಭಾವದ ಮೂಲಕ) ಹೊರಚ್ಚು ಮಾಡು; ಬಹಿಷ್ಕರಿಸು: the subject was tabooed ಆ ವಿಷಯವನ್ನು ನಿಷೇಧಿಸಲಾಯಿತು.

  • tabor
    ನಾಮವಾಚಕ
    (ಚರಿತ್ರೆ) ಪೀಪಿ ಯಾ ಪಿಳ್ಳಂಗೋವಿ ಯಾ ಓಲಗದ ಜತೆ ಬಾರಿಸುತ್ತಿದ್ದ ಸಣ್ಣ–ಕಂಜರಿ, ಡೋಲು, ತಮಟೆ.

    taboret
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = tabouret.

    tabouret
    ನಾಮವಾಚಕ
    ಸ್ಟೂಲು; ಸಾಮಾನ್ಯವಾಗಿ ತೋಳು, ಬೆನ್ನು ಇಲ್ಲದ ಕುಳ್ಳು ಪೀಠ.

    tabu
    ನಾಮವಾಚಕ
    = 1taboo.

    tabu
    ಗುಣವಾಚಕ
    = 2taboo.

    tabu
    ಸಕರ್ಮಕ ಕ್ರಿಯಾಪದ
    = 3taboo.

    tabula rasa
    ನಾಮವಾಚಕ
  • (ಪುನಃ ಬರೆಯಲು ಸಿದ್ಧವಾಗಿರುವ) ಅಳಿಸಿದ ಹಲಗೆ; ಸ್ವಚ್ಫ ಫಲಕ.
  • ಸ್ವಚ್ಫ, ನಿರ್ಮಲ, ವಿಶುದ್ಧ–ಮನಸ್ಸು; (ಮುಖ್ಯವಾಗಿ, ಹುಟ್ಟಿದ ಕ್ಷಣದಲ್ಲಿ) ಮಗುವಿಗೆ ಇರುವುದೆಂದು ಭಾವಿಸಲಾಗಿರುವ, ಯಾವುದೇ ಭಾವ, ಭಾವನೆ, ಅನುಭವಗಳಿರದ, ಸ್ವಚ್ಫ ಮನಸ್ಸು.

  • tabular
    ಗುಣವಾಚಕ
  • (ಅಂಕಣ)ಪಟ್ಟಿಯ, ತಃಖ್ತೆಯ, ಕೋಷ್ಟಕದ–ರೂಪದಲ್ಲಿ ಜೋಡಿಸಿದ, ಲೆಕ್ಕ ಮಾಡಿದ: tabular statement ಕೋಷ್ಟಕ.
  • ಹಲಗೆಯಂಥ ಮೈಯ; ಅಗಲವೂ ಚಪ್ಪಟೆಯೂ ಆದ: tabular surface ಚಪ್ಪಟೆ–ತಲ, ಮೇಲ್ಮೈ
  • (ಹರಳುಗಳ ವಿಷಯದಲ್ಲಿ) ದ್ವಿಮುಖಿ; ಅಗಲವೂ ಚಪ್ಪಟೆಯೂ ಆದ ಎರಡು ಮುಖಗಳುಳ್ಳ.
  • ತೆಳುಫಲಕಗಳ ರೂಪದಲ್ಲಿರುವ; ಪದರಗಳುಳ್ಳ.


  • logo