logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obeche
ನಾಮವಾಚಕ
ಓಬೀಚಿ:
  • ಪಶ್ಚಿಮ ಆಹ್ರಿಕದ ಒಂದು ಬಗೆಯ ಮರ.
  • ಈ ಮರದ ನಸುಬಣ್ಣದ ದಾರು.

  • obedience
    ನಾಮವಾಚಕ ಪದಗುಚ್ಛ
  • (ಕಾರ್ಯ, ಅಭ್ಯಾಸ, ಗುಣ ಯಾ ರೂಪದಲ್ಲಿ) ವಿಧೇಯತೆ; ನಮ್ರತೆ; ಹೇಳಿದಂತೆ–ಕೇಳುವಿಕೆ, ನಡೆಯುವಿಕೆ.
  • ವಿಧೇಯತೆ; ಇನ್ನೊಬ್ಬರ ಆಡಳಿತಕ್ಕೆ ಯಾ ಅಧಿಕಾರಕ್ಕೆ ತಲೆಬಾಗುವಿಕೆ.
  • ವಿಧೇಯತೆ; ಕಾನೂನನ್ನು ಯಾ ಆಜ್ಞೆಯನ್ನು ಪಾಲಿಸುವಿಕೆ.
  • (ಚರ್ಚ್‍, ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍)
    1. ಸಂನ್ಯಾಸಿ ಜೀವನದ ಯಾ ಮಠದ ನಿಯಮ ಪಾಲನೆ, ನಿಯಮಾನುಸರಣೆ.
    2. ವಿಧೇಯತೆಯನ್ನು ಪಡೆಯುವ ಪದವಿ, ಅಧಿಕಾರ, ಸ್ಥಾನ.
    3. ಅಧಿಕಾರ ಕ್ಷೇತ್ರ: the Roman obedience ರೋಮನ್‍ ಚರ್ಚಿನ ಅಧಿಕಾರ ಕ್ಷೇತ್ರ.
    4. (ಅಧಿಕಾರಕ್ಕೊಳಪಟ್ಟ ಪ್ರದೇಶದ) ವಿಧೇಯ ವರ್ಗ; ವಿಧೇಯತೆ ಸಲ್ಲಿಸಲು ಬದ್ಧರಾದ ಜನ: return to the obedience of the Pope ಪೋಪನ ಅಧಿಕಾರವ್ಯಾಪ್ತಿಗೆ ಹಿಂದಿರುಗು.
    5. ಸಂನ್ಯಾಸಿ ಮಠದ ಯಾ ಕಾನ್ವೆಂಟಿನ ಕೆಲಸ ಯಾ ಕರ್ತವ್ಯ.

  • obedient
    ಗುಣವಾಚಕ ಪದಗುಚ್ಛ
    your obedient servant ತಮ್ಮ ವಿಧೇಯ ಸೇವಕ(ನಾದ ನಾನು) (ಹಿಂದೆ ಮರ್ಯಾದೆಗಾಗಿ ಹೇಳುತ್ತಿದ್ದ ಉಪಾಚಾರೋಕ್ತಿ, ಈಗ ಬೀಳ್ಕೊಳ್ಳುವಲ್ಲಿ ವ್ಯಂಗ್ಯವಾಗಿ ಬಳಕೆ, ಸರ್ಕಾರದ ಇಲ್ಲವೆ ಸಾರ್ವಜನಿಕ ಪತ್ರವ್ಯವಹಾರದ ಕೊನೆಯ ಒಕ್ಕಣೆಯಲ್ಲಿ ಸಹ ಬಳಕೆ ಇತ್ತು).
  • ವಿಧೇಯನಾದ; ಆಜ್ಞಾಪಾಲನೆಗೆ ಸಿದ್ಧವಾಗಿರುವ.
  • ವಿಧೇಯನಾದ; ಆಜ್ಞಾಧಾರಕ; ಕರ್ತವ್ಯ ಪಾಲಿಸುವ; ಮೇಲಿನವನು ಯಾ ಮೇಲಧಿಕಾರಿ ಹೇಳಿದಂತೆ ಕೇಳುವ, ಅಪ್ಪಣೆ ಮಾಡಿದಂತೆ ನಡೆಯುವ: obedient to the law ಕಾನೂನಿಗೆ ನಿಷ್ಠನಾದ, ವಿಧೇಯನಾದ.

  • obedientiary
    ನಾಮವಾಚಕ
    (ಕ್ರೈಸ್ತ ಸಂನ್ಯಾಸಿಗಳ ಯಾ ಸಂನ್ಯಾಸಿನಿಯರ ಮಠದಲ್ಲಿ ಯಾ ಮಂದಿರದಲ್ಲಿ ಮೇಲಧಿಕಾರಿಯ ಕೈಕೆಳಗಿನ) ಅಧೀನಾಧಿಕಾರಿ.

    obediently
    ಕ್ರಿಯಾವಿಶೇಷಣ
    ವಿಧೇಯನಾಗಿ; ಆಜ್ಞಾಧಾರಕನಾಗಿ; ಮೇಲಿನವರು ಹೇಳಿದಂತೆ ನಡೆಯುತ್ತ; ಕರ್ತವ್ಯವನ್ನು ಪಾಲಿಸುತ್ತ.

    obeisance
    ನಾಮವಾಚಕ ಪದಗುಚ್ಛ
    do obeisance
  • (ಮುಖ್ಯವಾಗಿ ವಿಧೇಯತೆ, ಭಕ್ತಿ, ಗೌರವಗಳನ್ನು ತೋರಿಸಲು ಮಾಡುವ) ತಲೆಬಾಗಿಕೆ; ವಂದನೆ; ನಮನ’; ನಮಸ್ಕಾರ; ಪ್ರಣಾಮ: make an obeisance ಪ್ರಣಾಮ ಮಾಡು.
  • ಗೌರವ; ಭಕ್ತಿ; ವಿಧೇಯತೆ; ಶರಣು: pay obeisance ಗೌರವ ಅರ್ಪಿಸು; ಭಕ್ತಿ ಸಲ್ಲಿಸು.

  • obeisant
    ಗುಣವಾಚಕ
  • (ಭಕ್ತಿ, ಗೌರವ ತೋರಲು) ತಲೆಬಾಗುವ; ನಮಸ್ಕರಿಸುವ; ವಂದಿಸುವ; ನಮಿಸುವ.
  • ದಾಸ್ಯಭಾವದ; ಗುಲಾಮೀ ಪ್ರವೃತ್ತಿಯ, ಅಂಗಲಾಚುವ.

  • obeisantly
    ಕ್ರಿಯಾವಿಶೇಷಣ
  • ನಮಸ್ಕಾರಪೂರ್ವಕವಾಗಿ.
  • ದಾಸ್ಯಭಾವದಿಂದ.

  • obeli
    ನಾಮವಾಚಕ
    obelus ಪದದ ಬಹುವಚನ.

    obelise
    ಸಕರ್ಮಕ ಕ್ರಿಯಾಪದ
    = obelize.


    logo