logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

labouring man
ನಾಮವಾಚಕ
= labourer.

labourite
ನಾಮವಾಚಕ
(ಅಮೆರಿಕನ್‍ ಪ್ರಯೋಗ laborite.). ಲೇಬರ್‍ ಪಕ್ಷದವನು; ಲೇಬರ್‍ ಪಕ್ಷದ ಸದಸ್ಯ ಯಾ ಅನುಯಾಯಿ.

labra
ನಾಮವಾಚಕ
labrum ಪದದ ಬಹುವಚನ.

Labrador
ನಾಮವಾಚಕ
ಲ್ಯಾಬ್ರಡಾರ್‍:
  • ಅಮೆರಿಕದ ನ್ಯೂಹೌಂಡ್‍ಲಂಡ್‍ ಮೂಲದ ತಳಿಯಿಂದ ಇಂಗ್ಲೆಂಡಿನಲ್ಲಿ ಅಭಿವೃದ್ಧಿ ಮಾಡಿದ, ಕಪ್ಪು ಯಾ ಹೊಂಬಣ್ಣದ ಕೂದಲಿನ, ಅಗಲ ತಲೆ ಮತ್ತು ಎದೆ ಉಳ್ಳ, ಅಂಧರನ್ನು ಕರೆದೊಯ್ಯುವುದು ಮೊದಲಾದವುಗಳಿಗಾಗಿ ಬಳಸುವ ನಾಯಿ.
  • ಈ ನಾಯಿ ತಳಿ.

  • Labrador dog
    ನಾಮವಾಚಕ
    = Labrador.

    Labrador retriever
    ನಾಮವಾಚಕ
    = Labrador.

    labret
    ನಾಮವಾಚಕ
    ತುಟಿಯೊಡವೆ; ಓಷ್ಠಾಭರಣ; ಅಧರಾಲಂಕಾರ; ತುಟಿಯ ತುದಿಯಲ್ಲಿ ರಂಧ್ರ ಮಾಡಿ ಆಭರಣವಾಗಿ ತೊಡಿಸಿದ (ಪ್ರಾಣಿಯ) ಚಿಪ್ಪು, ಎಲುಬು, ಮೊದಲಾದವು.

    labrum
    ನಾಮವಾಚಕ
    ಲೇಬ್ರಮ್‍; ಕೀಟದ ಬಾಯಿಯ ಮೇಲ್ತುಟಿ; ಊಧ್ವೋಷ್ಠ.

    laburnum
    ನಾಮವಾಚಕ
    ಲಬರ್ನಮ್‍:
  • ಲೆಗುಮಿನೇಸೀ ವಂಶಕ್ಕೆ ಸೇರಿದ, ಹಳದಿ ಹೂಗಳನ್ನೂ ವಿಷಪೂರಿತ ಬೀಜಗಳನ್ನೂ ಬಿಡುವ, ಅಲಂಕಾರಕ್ಕಾಗಿ ಬೆಳೆಸುವ ಚಿಕ್ಕ ಮರಗಳ ಕುಲ.
  • ಈ ಕುಲದ ಮರ. Figure: laburnum

  • labyrinth
    ನಾಮವಾಚಕ
  • ಚಕ್ರಭೀಮನ ಕೋಟೆ; ಚಕ್ರವ್ಯೂಹ; ತೊಳಸುಬಳಸಿನ ಹಾದಿಗಳ ಕಟ್ಟಡ; ಹೊಕ್ಕುಬಳಸಲು ಕಷ್ಟವಾದ ಯಾ ಗೊಂದಲ ಉಂಟುಮಾಡುವ ದಾರಿಗಳುಳ್ಳ ಯಾ ಮಾರ್ಗದರ್ಶನವಿಲ್ಲದೆ ದಾರಿ ಕಂಡುಹಿಡಿಯಲು ಸಾಧ್ಯವಿಲ್ಲದಂತೆ ಹಲವು ದಾರಿಗಳಿಂದ ಕೂಡಿ ತೊಡಕಾಗಿಯೂ ಕ್ರಮಬದ್ಧವಲ್ಲದೆಯೂ ಇರುವ ಕಟ್ಟಡ.
  • ತೊಡಕಾದ ರಚನೆ; ಜಟಿಲ ವ್ಯವಸ್ಥೆ.
  • (ಅಂಗರಚನಾಶಾಸ್ತ್ರ) ಒಳಗಿವಿ; ಅಂತರಕರ್ಣ; ಎಲುಬು ಮತ್ತು ಪೊರೆ ಉಳ್ಳ ಕಾಲುವೆಗಳೂ, ಕುಹರಗಳೂ ಉಳ್ಳ, ಒಳ ಕಿವಿಯ ಸಂಕೀರ್ಣ ರಚನೆ.
  • ಜಟಿಲ ಸ್ಥಿತಿ; ಬಹಳ ತೊಡಕಿನ ಪರಿಸ್ಥಿತಿ; ಗೋಜಲಿನ, ಸಿಕ್ಕುಸಿಕ್ಕಾದ – ಸ್ಥಿತಿ.


  • logo