logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

earth science
ನಾಮವಾಚಕ
ಭೂ ವಿಜ್ಞಾನಗಳು; ಭೂಮಿಗೆ ಯಾ ಅದರ ಭಾಗಕ್ಕೆ ಸಂಬಂಧಿಸಿದ ಭೂವಿಜ್ಞಾನ, ಭೂಗೋಳವಿಜ್ಞಾನ, ಸಾಗರ ವಿಜ್ಞಾನ, ಪವನಶಾಸ್ತ್ರ, ಮೊದಲಾದ ವಿಜ್ಞಾನಗಳು.

earth tremor
ನಾಮವಾಚಕ
ನೆಲನಡುಕ; ಲಘು ಭೂಕಂಪ.

earth-born
ಗುಣವಾಚಕ
  • ಮರ್ತ್ಯ; ಮನುಷ್ಯಜಾತಿಯ.
  • (ಪುರಾಣ) ಭೂಜಾತ; ಭೂಮಿಯಿಂದ ಹುಟ್ಟಿದ.

  • earth-bound
    ಗುಣವಾಚಕ
  • ಭೂಮಿಯತ್ತ ಹೊರಟ: earth-bound astronaut ಭೂಮಿಯತ್ತ ಹೊರಟ ಖಗೋಳಯಾತ್ರಿ.
  • (ರೂಪಕವಾಗಿ ಸಹ) ಭೂಮಿಗೆ ಅಂಟಿಕೊಂಡ; ಭೂಬದ್ಧ; ಪ್ರಾಪಂಚಿಕ.

  • earth-closet
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಮಣ್ಣು ಕಕ್ಕಸ್ಸು; ಶೌಚದ ನಂತರ ಮಲವನ್ನು ಮಣ್ಣಿನಿಂದ ಮುಚ್ಚುವ ಕಕ್ಕಸು.

    earth-current
    ನಾಮವಾಚಕ
    (ವಿದ್ಯುದ್ವಿಜ್ಞಾನ) ಭೂವಿದ್ಯುತ್ತು; ಭೂಗಾಮಿ ವಿದ್ಯುತ್ತು; (ಮುಖ್ಯವಾಗಿ ಯಾವುದೇ ಸಲಕರಣೆಯಲ್ಲಿರಬಹುದಾದ ದೋಷದ ಕಾರಣ) ಭೂಮಿಗೆ ಹರಿದು ಹೋಗುವ ವಿದ್ಯುತ್ತು.

    earth-god
    ನಾಮವಾಚಕ
    ಭೂದೇವ; (ಭೂಮಿಯ ಸಾರ, ಫಲ, ಸದ್ಧಿಗಳಿಗೆ ಕಾರಣವಾದ) ಉರ್ವರದೇವತೆ.

    earth-light
    ನಾಮವಾಚಕ
    (ಖಗೋಳ ವಿಜ್ಞಾನ) ಭೂಕಾಂತಿ; ಭೂಪ್ರಕಾಶ; ಭೂಮಿಯಿಂದ ಪ್ರತಿಫಲಿತವಾಗಿ ಚಂದ್ರನ ಕತ್ತಲೆ ಭಾಗದ ಮೇಲೆ ಬೀಳುವ ಸೂರ್ಯನ ಮಂದಪ್ರಕಾಶ.

    earth-mover
    ನಾಮವಾಚಕ
    ಚ್ಚಾಲಕ; ಅರ್ತ್‍ಮೂವರ್‍; ಭಾರಿಪ್ರಮಾಣದಲ್ಲಿ ಮಣ್ಣನ್ನು ತೋಡಲು, ತಳ್ಳಲು ಯಾ ಸಾಗಿಸಲು ಬಳಸುವ ಯಂತ್ರ.

    earth-nut
    ನಾಮವಾಚಕ
  • ನೆಲಬೀಜ; ಗೆಡ್ಡೆಗಳನ್ನು ಬಿಡುವ ಹಲವಾರು ಗಿಡಗಳಲ್ಲೊಂದು, ಮುಖ್ಯವಾಗಿ ಛತ್ರಿಯ ಆಕಾರದ ಹೂಗೊಂಚಲನ್ನು ಬಿಡುವ, ಕೋನಪೋಡಿಯಮ್‍ ಮೇಜಸ್‍ ಕುಲಕ್ಕೆ ಸೇರಿದ ಕಾಡುಗಿಡ.
  • ಅದರ ಗೆಡ್ಡೆ.
  • = peanut.


  • logo