logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dahlia
ನಾಮವಾಚಕ ನುಡಿಗಟ್ಟು
blue dahlia ಅಸಾಧ್ಯವಾದದ್ದು; ಸಾಧ್ಯವಿಲ್ಲದ್ದು; ಸಾಧ್ಯವಾಗದ ಯಾವುದೇ ಕೆಲಸ ಮೊದಲಾದವು.
  • ಡೇಲಿಯ; ಡೇರಾ ಹೂ; ಬಣ್ಣಬಣ್ಣದ ಒಂದು ಯಾ ಎರಡು ಸುತ್ತುದಳದ ಹೂವುಗಳನ್ನು ಬಿಡುವ, ಮೆಕ್ಸಿಕೊ ತವರಿನ ಗೆಡ್ಡೆಯಿಂದ ಬೆಳೆಯುವ ಸಂಕೀರ್ಣ ಗಿಡಗಳ ಕುಲ.
  • (ಒಂದು ಬಗೆಯ) ಕೆಂಪು ಛಾಯೆ; ನೇರಿಳೆ ಮತ್ತು ಕಪ್ಪು ಬಣ್ಣಗಳ ಮಿಶ್ರವರ್ಣ.
  • ಡೇರಾ ಕುಲದ ಗಿಡ.

  • dai
    ನಾಮವಾಚಕ
    (ಆಂಗ್ಲೋ ಇಂಡಿಯನ್‍) ದಾಯಿ; ಮೊಲೆಯೂಡಿಸುವ ದಾದಿ.

    Dail(Eireann)
    ನಾಮವಾಚಕ
    ಐರ್ಲೆಂಡಿನ ಪಾರ್ಲಿಮಂಟಿನ ಕೆಳಸಭೆ.

    daily
    ಗುಣವಾಚಕ
    ಪ್ರತಿದಿನದ; ದಿನಂಪ್ರತಿಯ; ದೈನಿಕ; ದಿನನಿತ್ಯದ; ಪ್ರತಿನಿತ್ಯದ; ನಿತ್ಯವೂ – ಆಗುವ, ಮಾಡುವ, ಕೊಡುವ.

    daily
    ಕ್ರಿಯಾವಿಶೇಷಣ
  • ದಿನವೂ; ಪ್ರತಿದಿನವೂ; ದಿನನಿತ್ಯವೂ; ನಿತ್ಯ; ದಿನವಹಿ.
  • ದಿನೇದಿನೇ; ದಿನದಿಂದ ದಿನಕ್ಕೆ.
  • ಸದಾ; ಯಾವಾಗಲೂ; ಒಂದೇ ಸಮನಾಗಿ.

  • daily
    ನಾಮವಾಚಕ
  • ದಿನಪತ್ರಿಕೆ; ದೈನಿಕ.
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು) (ಮನೆಯಲ್ಲಿ ವಾಸಿಸದ) ಮನೆಗೆಲಸದವಳು; ದಿನಗೆಲಸದವಳು.

  • daily bread
    ನಾಮವಾಚಕ
    ಜೀವನಾಧಾರ; ಜೀವಿಕೆ; ದಿನನಿತ್ಯದ ಬದುಕಿಗೆ ಅತ್ಯಗತ್ಯವಾದ ಆಹಾರ ಮೊದಲಾದವು.

    daily dozen
    ನಾಮವಾಚಕ
    ದಿನನಿತ್ಯದ ವ್ಯಾಯಾಮ; ನಿತ್ಯದ ನಾಲ್ಕು ದಂಡೆ; ಪ್ರತಿದಿನ ಬೆಳಗ್ಗೆ ಎದ್ದಮೇಲೆ ಮಾಡುವ ವ್ಯಾಯಾಮ.

    daimio
    ನಾಮವಾಚಕ
    (ಚರಿತ್ರೆ) ಜಪಾನೀ ಚಕ್ರವರ್ತಿಯ – ಸಾಮಂತ, ಸರದಾರ.

    daimon
    ನಾಮವಾಚಕ
    = demon(1 & 4).


    logo