logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cabinet-making
ನಾಮವಾಚಕ
  • ಕುಶಲ ಬಡಗಿ ಕಲೆ; ನಾಜೂಕು ಮರಗೆಲಸ.
  • (ಪ್ರಧಾನಿಯಿಂದ) ಹೊಸ ಸಂಪುಟ ರಚನೆ.

  • cable
    ನಾಮವಾಚಕ
  • ಹೊರಜಿ; ಮಿಣಿ; ಹಗ್ಗ; ಕೇಬಲ್ಲು; ಸಣಬಿನ ಯಾ ತಂತಿಯ, ಬಲವಾದ ದಪ್ಪಹಗ್ಗ. Figure: cable 1
  • (ನೌಕಾಯಾನ) ಲಂಗರು–ಹಗ್ಗ, ಹೊರಜಿ, ಸರಪಣಿ.
  • (ಅಳತೆಯಲ್ಲಿ) 200 ಗಜ.
  • ಕೇಬಲು; ಭೂಗರ್ಭತಂತಿ; ನೀರಿನ ಯಾ ನೆಲದ ಅಡಿಯಲ್ಲಿ ಹಾಕಿರುವ, ಸುದ್ದಿ, ಸಮಾಚಾರಗಳ–ತಂತಿ.
  • ಕೇಬಲ್ಲು; ತಂತಿವಾರ್ತೆ; ಜಲಾಂತರ್ಗಾಮಿ ಕೇಬಲಿನ ಮೂಲಕ ಕಳುಹಿಸಿದ ಟೆಲಿಗ್ರಾಮು ಯಾ ತಂತಿಸಮಾಚಾರ.
  • (ಅಕ್ಕಸಾಲಿಗರ ಕೆಲಸದಲ್ಲಿ) ಮುಪ್ಪುರಿ; ಹಗ್ಗದಾಕಾರದ ಅಲಂಕಾರದ ಒಡವೆ.
  • (ವಾಸ್ತುಶಿಲ್ಪ) ರಜ್ಜುಶಿಲ್ಪ; ರಜ್ಜುಚಿತ್ರಣ; ಹಗ್ಗಕಾರಣೆ; ಹಗ್ಗಕೆತ್ತನೆ; ಮಿಣಿಕಾರಣೆ; (ಮುಖ್ಯವಾಗಿ ಕಂಬದಡಿಯಲ್ಲಿ ಮಾಡಿರುವ) ಹಗ್ಗದ ಆಕಾರದ ಕೆತ್ತನೆ.
  • = cable stitch.

  • cable
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಕೇಬಲ್‍ ಕಳುಹಿಸು; ಕಡಲ ತಂತಿಯ (ಮೂಲಕ ಸುದ್ದಿ) ಕಳುಹಿಸು.
  • ಹೊರಜಿ ಬಿಗಿ; ಮಿಣಿಕಟ್ಟು; ಹಗ್ಗದಿಂದ ಬಂಧಿಸು.
  • ಹೊರಜಿ ಒದಗಿಸು.
  • (ವಾಸ್ತುಶಿಲ್ಪ) ಹಗ್ಗಕೆತ್ತನೆ ಮಾಡು; ಮಿಣಿಕಾರಣೆ ತುಂಬು.
  • ಕೇಬಲ್‍ ಕಳುಹಿಸು; ಕಡಲ ತಂತಿ ಕಳಿಸು; ಜಲಾಂತರ್ಗಾಮಿತಂತಿಯ ಮೂಲಕ ವ್ಯಕ್ತಿಗೆ ಸುದ್ದಿ ಕಳುಹಿಸು.

  • cable address
    ನಾಮವಾಚಕ
    ಕೇಬಲ್‍ ವಿಳಾಸ; (ಮುಖ್ಯವಾಗಿ ಸಂಕೇತಪದವಾಗಿ) ಕೇಬಲ್‍ಗಾಗಿ ಮೊಟಕುಗೊಳಿಸಿದ ವಿಳಾಸ

    cable desk
    ನಾಮವಾಚಕ
    ಕೇಬಲುಕಟ್ಟೆ; ಹೊರಸುದ್ದಿಕಟ್ಟೆ; ಕೇಬಲುಶಾಖೆ; ಪತ್ರಿಕಾಲಯಗಳಿಗೆ ಹೊರದೇಶಗಳಿಂದ (ಮುಖ್ಯವಾಗಿ ಕೇಬಲಿನ ಮೂಲಕ) ಬರುವ ಸುದ್ದಿಗಳನ್ನು ಪ್ರಕಟಣೆಗೆ ಸಿದ್ಧಪಡಿಸುವ ಪತ್ರಿಕಾಕಚೇರಿಯ ಯಾ ಸುದ್ದಿಕಚೇರಿಯ ಒಂದು ವಿಭಾಗ.

    cable net
    ನಾಮವಾಚಕ
    (ಪರದೆಗಳಿಗೆ ಬಳಸುವಂಥ) ಒರಟುಹತ್ತಿಯ ಜಾಲರಿಬಟ್ಟೆ.

    cable railway
    ನಾಮವಾಚಕ
    ಕೇಬಲ್‍ಹಳಿ; ಕೇಬಲ್‍ರೈಲು ಹಾದಿ; ಚಲಿಸುವ ಹೊರಜಿಯೊಂದು ಗಾಡಿಗಳನ್ನು ಎಳೆದುಕೊಂಡು ಹೋಗುವ ರೈಲುಹಳಿ.

    cable stitch
    ನಾಮವಾಚಕ
    ಹೊರಜಿಹೆಣಿಗೆ; ಮಿಣಿಹೆಣಿಗೆ; ಸುಲಿದ ಹಗ್ಗದಂತೆ ಕಾಣುವ ಹೆಣಿಗೆ.

    cable tramway
    ನಾಮವಾಚಕ
    = cable railway.

    cable-car
    ನಾಮವಾಚಕ
    ಕೇಬಲುಗಾಡಿ; ಸರಪಳಿಕಾರು; ಚಲಿಸುವ ಕೇಬಲಿನ ಯಾ ಹಗ್ಗದ ಸಹಾಯದಿಂದ ಕೇಬಲ್‍ ಹಾದಿಗಳ ಮೇಲೆ ಸಾಗುವ ಗಾಡಿ.


    logo