(ಸಸ್ಯವಿಜ್ಞಾನ) ಓಲಿಯೇಷಸ್; ಆಲಿವ್ ಹಾಗೂ ಮಲ್ಲಿಗೆಯನ್ನೊಳಗೊಂಡ ಓಲಿಯೇಸೀ ಕುಟುಂಬಕ್ಕೆ ಸೇರಿದ.
oleaginous
ಗುಣವಾಚಕ
ತೈಲೀಯ; ಎಣ್ಣೆಯ ಲಕ್ಷಣಗಳುಳ್ಳ.
ತೈಲದಾಯಕ; ಎಣ್ಣೆ ಕೊಡುವ.
ಎಣ್ಣೆಯಂಥ ಜಿಡ್ಡುಜಿಡ್ಡಾದ.
ದಾಸಾನುದಾಸನಂತೆ ವರ್ತಿಸುವ; ಹಲ್ಲುಗಿಂಜುವ; ಅತಿಯಾಗಿ ಆಶ್ರಯಿಸುವ.
oleander
ನಾಮವಾಚಕ
ಕಣಿಗಲು ಗಿಡ; ಕರವೀರ; ಪಡ್ಡಳಿ; ಬಿಳಿ, ಪಾಟಲ ಯಾ ಕೆಂಪು ಬಣ್ಣದ ಹೂಗೊಂಚಲುಗಳನ್ನು ಬಿಡುವ, ನಿತ್ಯ ಹಸುರಿನ ಒಂದು ವಿಷಪೂರಿತ ಪೊದೆ ಗಿಡ.
oleaster
ನಾಮವಾಚಕ
ಹೆಜ್ಜಾಲ; ಹಿಟ್ಟೆಲೆ; (ಈಲಿಗ್ನಸ್) ಕುಲಕ್ಕೆ ಸೇರಿದ, ಕೆಲವೊಮ್ಮೆ ಮುಳ್ಳುಗಳಿರುವ ಮತ್ತು ನಿತ್ಯ ಹರಿದ್ವರ್ಣದ, ತೊಗಲಿನಂಥ ಎಲೆಗಳುಳ್ಳ ಹಲವಾರು ಮರಗಳ್ಲೊಂದು, ಮುಖ್ಯವಾಗಿ ಈಲಿಗ್ನಸ್ ಆಂಗಸ್ಟಿಹೋಲಿಯ ಕುಲಕ್ಕೆ ಸೇರಿದ, ನಸುಹಳದಿ ಬಣ್ಣದ ಹಣ್ಣುಗಳನ್ನು ಬಿಡುವ ಮರ.
olecranon
ನಾಮವಾಚಕ
(ಅಂಗರಚನಾಶಾಸ್ತ್ರ) ಮೊಣಕೈ ಮೂಳೆಯ, ಕೂರ್ಪರಾಸ್ಥಿಯ ಹಿಂದೆ ಇರುವ ಗೆಣ್ಣು ಚಾಚು.