logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manna-ash
ನಾಮವಾಚಕ
ದಕ್ಷಿಣ ಯೂರೋಪಿನ ಹ್ರ್ಯಾಕ್ಸಿನಸ್‍ ಅರ್ನಸ್‍ ಕುಲದ, ಆಷ್‍ ಮರ, ಬೂದಿ ಮರ.

manned
ಗುಣವಾಚಕ
(ವಿಮಾನ, ಗಗನ ನೌಕೆ, ಮೊದಲಾದವುಗಳ ವಿಷಯದಲ್ಲಿ) ಮಾನವಚಾಲಿತ; ಚಾಲನೆ ಮಾಡಲು ಮಾನವನಿರುವ.

mannequin
ನಾಮವಾಚಕ
  • ವೇಷದರ್ಶಿನಿ; ವೇಷಪ್ರದರ್ಶಿನಿ; ವೇಷಪ್ರದರ್ಶಕಿ; ಹೊಸ ಹ್ಯಾಷನ್‍ಗಳನ್ನು ತಾವೇ ಉಡುವುದರ ಮೂಲಕ ಪ್ರದರ್ಶಿಸಲು (ಮುಖ್ಯವಾಗಿ ಹೆಂಗಸರ ಉಡಿಗೆ – ತೊಡಿಗೆಯ) ಉಡುಪುಗಾರರು ನೇಮಿಸಿಕೊಳ್ಳುವ (ಸಾಮಾನ್ಯವಾಗಿ ಸ್ತ್ರೀ) ವ್ಯಕ್ತಿ.
  • ಉಡುಪಿನ ಬೊಂಬೆ; ವೇಷದ ಪ್ರತಿಮೆ; ಉಡುಪನ್ನು ಪ್ರದರ್ಶಿಸಲು ಅಂಗಡಿಗಳಲ್ಲಿಡುವ – ಬೊಂಬೆ, ಮನುಷ್ಯಾಕೃತಿ, ಅಲಂಕಾರದ ಬೊಂಬೆ, ಪ್ರತಿಮೆ.

  • manner
    ನಾಮವಾಚಕ ಪದಗುಚ್ಛ
  • (ಕೆಲಸ ಮಾಡುವ ಯಾ ನಡೆಯುವ) ಬಗೆ; ತೆರ; ರೀತಿ; ಕ್ರಮ; ವಿಧಿ; ಪ್ರಕಾರ; ವಿಧಾನ: in this manner ಈ ರೀತಿಯಲ್ಲಿ.
  • (ಬಹುವಚನದಲ್ಲಿ)
    1. (ಬದುಕಿನ, ಸಮಾಜದ) ಸ್ಥಿತಿಗತಿಗಳು; ರೀತಿರಿವಾಜುಗಳು.
    2. (ಸಮಾಜದಲ್ಲಿ ವ್ಯವಹರಿಸುವುದರಲ್ಲಿಯ) ನಡೆ; ನಡಾವಳಿ; ನಡವಳಿಕೆ.
    3. ಸಭ್ಯ ವರ್ತನೆ; ಮರ್ಯಾದೆ; ವಿನಯದ ನಡೆನುಡಿ: good manners ಸಭ್ಯ ನಡವಳಿಕೆ; ಸದ್ವರ್ತನೆ. bad manners ಅಸಭ್ಯ ನಡವಳಿಕೆ; ದುರ್ವರ್ತನೆ. he has no manners ಅವನಿಗೆ ಸಭ್ಯ ನಡವಳಿಕೆ, ಮರ್ಯಾದೆ ಇಲ್ಲ.
  • (ವ್ಯಕ್ತಿಯ) ಬಾಹ್ಯಚರ್ಯೆ; ಹೊರನಡೆವಳಿಕೆ; ಬಾಹ್ಯವರ್ತನೆ; ಮಾತನಾಡುವ, ನಡೆದುಕೊಳ್ಳುವ, ವ್ಯವಹರಿಸುವ, ಮೊದಲಾದ ಬಾಹ್ಯ ರೀತಿ: has an imperious manner ದರ್ಪದ ವರ್ತನೆ ಹೊಂದಿದ್ದಾನೆ.
  • (ಸಾಹಿತ್ಯದಲ್ಲಿ ಯಾ ಕಲೆಯಲ್ಲಿ) ಶೈಲಿ; ರೀತಿ.
  • = mannerism.
  • (ಪ್ರಾಚೀನ ಪ್ರಯೋಗ) ಬಗೆ; ತೆರ; ತರಹ; ರೀತಿ; ವಿಧ: what manner of man is he? ಅವನು ಯಾವ ತರಹದ ಮನುಷ್ಯ?

  • mannered
    ಗುಣವಾಚಕ
  • (ಸಮಾಸಗಳಲ್ಲಿ) ನಡತೆಯ; ವರ್ತನೆಯ; ಆಚಾರದ; ನಡತೆಯುಳ್ಳ: ill mannered ಕೆಟ್ಟ ನಡತೆಯ. well mannered ಸನ್ನಡತೆಯ; ಸದ್ವರ್ತನೆಯ.
  • (ಶೈಲಿಯ, ಕಲಾವಿದನ, ಲೇಖಕನ ವಿಷಯದಲ್ಲಿ) ವಿಲಕ್ಷಣ; ವಿಲಕ್ಷಣ ಗುಣಗಳನ್ನು ಹೊಂದಿರುವ; ವಿಶಿಷ್ಟ ರೀತಿಯನ್ನು ಅನುಸರಿಸುವ.
  • (ವ್ಯಕ್ತಿಯ ವಿಷಯದಲ್ಲಿ) ವಿಲಕ್ಷಣ ವರ್ತನೆಯ; ಅತಿ ವಿಚಿತ್ರ ಅಭ್ಯಾಸದ.

  • mannerism
    ನಾಮವಾಚಕ
  • ವಿಲಕ್ಷಣತೆ; ವೈಚಿತ್ರ ; (ಕಲೆಯಲ್ಲಿ, ಸಾಹಿತ್ಯದಲ್ಲಿ) ಯಾವುದೇ ವಿಶಿಷ್ಟ ರೀತಿಯನ್ನು ಅತಿಯಾಗಿ ಬಳಸುವುದು, ಅನುಸರಿಸುವುದು.
  • (ಹಾವಭಾವ, ಮಾತುಕತೆ, ಮೊದಲಾದವುಗಳ) ವಿಲಕ್ಷಣತೆ; ವಿಚಿತ್ರವಾದ ರೂಢಿ.
  • ಶೈಲಿಯ – ಫಕ್ಕಿ, ವಿಚಿತ್ರ ಪ್ರಯೋಗ.
  • ಮ್ಯಾನರಿಸಂ; 16ನೇ ಶತಮಾನದ ಇಟಲಿಯ ಚಿತ್ರಕಲೆಯ (ಆಕೃತಿಗಳನ್ನು ಬಹಳ ಲಂಬಿಸಿ ನಿರೂಪಿಸುತ್ತಿದ್ದ) ಶೈಲಿ.

  • mannerist
    ನಾಮವಾಚಕ
  • (ಕಲೆಯಲ್ಲಿ, ಸಾಹಿತ್ಯದಲ್ಲಿ) ಯಾವುದೇ ವಿಶಿಷ್ಟ ರೀತಿಯನ್ನು ಅತಿಯಾಗಿ ಬಳಸುವವನು; ಅತಿ ವಿಲಕ್ಷಣ ಶೈಲಿಯನ್ನು ಬಳಸುವವನು.
  • (ಹಲವೊಮ್ಮೆ Mannerist) ಇಟಲಿಯ 16ನೇ ಶತಮಾನದ ಕೊನೆಯಲ್ಲಿದ್ದ ಮ್ಯಾನರಿಸಂ ಶೈಲಿಯನ್ನೇ ಅನುಸರಿಸುತ್ತಿದ್ದ ಕಲಾಪಂಥದವನು.

  • manneristic
    ಗುಣವಾಚಕ
    (ಕಲೆಯಲ್ಲಿ, ಸಾಹಿತ್ಯದಲ್ಲಿ)
  • ಅತಿ ವಿಲಕ್ಷಣ ಶೈಲಿಯ; ಅತಿ ವೈಚಿತ್ರ ದ.
  • ಇಟಲಿಯ 16ನೇ ಶತಮಾನದ ಮ್ಯಾನರಿಸಂ ಪಂಥದ, ಶೈಲಿಯ.

  • manneristical
    ಗುಣವಾಚಕ
    = manneristic.

    manneristically
    ಕ್ರಿಯಾವಿಶೇಷಣ
    (ಕಲೆಯಲ್ಲಿ, ಸಾಹಿತ್ಯದಲ್ಲಿ)
  • ಅತಿ ವಿಲಕ್ಷಣ ಶೈಲಿಯಲ್ಲಿ.
  • ಮ್ಯಾನರಿಸಂನ ಶೈಲಿಯಲ್ಲಿ.


  • logo