ಲ್ಯಾಟಿನ್ನಿನಿಂದ ಬೆಳೆದು ಬಂದ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ಬಳಸುವ ದೇಶಗಳ ಯಾ ಜನರ (ಮುಖ್ಯವಾಗಿ ಹ್ರಾನ್ಸ್ ಮತ್ತು ಸ್ಪೇನಿನ).
ರೋಮನ್ ಕ್ಯಾಥೊಲಿಕ್ ಚರ್ಚಿನ.
Latin America
ನಾಮವಾಚಕ
ಲ್ಯಾಟಿನ್ ಅಮೆರಿಕ; ಸ್ಪ್ಯಾನಿಷ್ ಯಾ ಪೋರ್ಚುಗೀಸ್ ಭಾಷೆ ಪ್ರಧಾನ ಭಾಷೆಯಾಗಿರುವ ಮಧ್ಯ ಮತ್ತು ದಕ್ಷಿಣ ಅಮೆರಿಕಗಳ ಭಾಗಗಳು.
Latin American
ನಾಮವಾಚಕ
ಲ್ಯಾಟಿನ್ ಅಮೆರಿಕನ್; ಲ್ಯಾಟಿನ್ ಅಮೆರಿಕದ ವ್ಯಕ್ತಿ.
Latin American
ಗುಣವಾಚಕ
ಲ್ಯಾಟಿನ್ ಅಮೆರಿಕದ; ಲ್ಯಾಟಿನ್ ಅಮೆರಿಕದ ಯಾ ಅದಕ್ಕೆ ಸಂಬಂಧಿಸಿದ.
Latin cross
ನಾಮವಾಚಕ
ಲ್ಯಾಟಿನ್ ಶಿಲುಬೆ; ಉಳಿದ ಮೂರು ಬಾಹುಗಳಿಗಿಂತ ಕೆಳಗಿನ ಬಾಹು ಉದ್ದವಾಗಿರುವ, ಸರಳವಾದ ಶಿಲುಬೆ.
Latin Quarter
ನಾಮವಾಚಕ
ಲ್ಯಾಟಿನ್ – ವಿಭಾಗ, ಮೊಹಲ್ಲಾ; ಮಧ್ಯಯುಗದಲ್ಲಿ ಲ್ಯಾಟಿನ್ ಮಾತನಾಡುತ್ತಿದ್ದ, ಅದರ ಅಸಾಂಪ್ರದಾಯಿಕ ಜೀವನವಿಧಾನಗಳಿಗೆ ಹೆಸರುವಾಸಿಯಾದ, ಶತಮಾನಗಳ ಕಾಲದಿಂದ ವಿದ್ಯಾರ್ಥಿಗಳು ಮತ್ತು ಕಲಾವಿದರು ಗುಂಪುಗೂಡುತ್ತಿರುವ, ಪ್ಯಾರಿಸಿನ ಸಿಯೆನ್ ನದಿಯ ದಕ್ಷಿಣಕ್ಕಿರುವ ಪ್ರದೇಶ.
Latinate
ಗುಣವಾಚಕ
ಲ್ಯಾಟಿನ್ನಿನ ಲಕ್ಷಣದ; ಲ್ಯಾಟಿನ್ ಭಾಷೆಯ ಸ್ವಭಾವದ.
Latine
ಕ್ರಿಯಾವಿಶೇಷಣ
(ಯಾವುದೇ ಪದ ಮೊದಲಾದವಕ್ಕೆ ಲ್ಯಾಟಿನ್ ಸಮಾನಪದ ಕೊಡುವಲ್ಲಿ ಬಳಸುವ) ಲ್ಯಾಟಿನ್ನಿನಲ್ಲಿ; ಲ್ಯಾಟಿನ್ ಭಾಷೆಯಲ್ಲಿ.