(ಕ್ರೈಸ್ತದೀಕ್ಷಾವಿಧಿಯಲ್ಲಿ) ಕರನ್ಯಾಸ; ಹಸ್ತಾರೋಪಣ; ಪಾದ್ರಿಯು ತಲೆಯ ಮೇಲೆ ಕೈ ಇಡುವುದು.
(ವಿಧಿಸಿದ) ತೆರಿಗೆ; ಸುಂಕ; ಕರ.
ವಂಚನೆ; ಠಕ್ಕು; ಮೋಸ; ದಗಾ.
ಶಾಲೆ ಶಿಕ್ಷೆ; ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ನಿಯಮಿಸಿದ ಕೆಲಸ.
(ಮುದ್ರಣ) ಪುಟಜೋಡಣೆ; (ಅಚ್ಚುಮೊಳೆ ಪುಟಗಳನ್ನು) ಕ್ರಮವಾಗಿ ಜೋಡಿಸಿ, ಚೌಕಟ್ಟಿನಲ್ಲಿ ಬಿಗಿಸುವುದು.
impossibility
ನಾಮವಾಚಕ
ಅಸಾಧ್ಯತೆ; ಅಶಕ್ಯತೆ: the impossibility of the task ಕೆಲಸದ ಅಸಾಧ್ಯತೆ.
impossible
ಗುಣವಾಚಕ
ಅಸಾಧ್ಯವಾದ; ಅಶಕ್ಯವಾದ; ಸಾಧ್ಯವಿಲ್ಲದ; ಆಗದ; ಮಾಡಲಾಗದ; ಇರಲಾಗದ: such a thing is impossible ಅಂಥದೊಂದು ವಸ್ತು ಇರಲು ಸಾಧ್ಯವೇ ಇಲ್ಲ. it is impossible to alter them ಅವರನ್ನು ಬದಲಾಯಿಸುವುದು ಅಸಾಧ್ಯ.
(ಸಡಿಲವಾಗಿ) ಸುಲಭವಲ್ಲದ; ಅನುಕೂಲವಲ್ಲದ.
(ಆಡುಮಾತು) ಎಡವಟ್ಟಾದ; ವಿಕಾರವಾದ: an impossible hat ವಿಕಾರವಾದ ಹ್ಯಾಟು. an impossible woman ಎಡವಟ್ಟಾದ ಹೆಂಗಸು.
(ಆಡುಮಾತು) ಅಸಹ್ಯ; ಅಸಹನೀಯ; ಸಹಿಸಲಾಗದ: an impossible situation ಅಸಹನೀಯ ಪರಿಸ್ಥಿತಿ. an impossible person ಸಹಿಸಲಾಗದ ವ್ಯಕ್ತಿ.
(ಸಡಿಲವಾಗಿ) ಸುಲಭವಾಗಿ ನಂಬಲಾಗದ.
impossibly
ಕ್ರಿಯಾವಿಶೇಷಣ
ಅಸಾಧ್ಯವಾಗಿ; ಅಶಕ್ಯವಾಗಿ: an impossibly idealistic young man ಅಸಾಧ್ಯ ಆದರ್ಶವಾದಿ ಯುವಕ.