logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electroplate
ಸಕರ್ಮಕ ಕ್ರಿಯಾಪದ
ವಿದ್ಯುಲ್ಲೇಪಿಸು; ಯಾವುದೇ ಪಾತ್ರೆ ಮೊದಲಾದ ವಸ್ತುವಿನ ಮೈಮೇಲೆ ವಿದ್ಯುದ್ವಿಚ್ಛೇದನ ವಿಧಾನದಿಂದ (ಕ್ರೋಮಿಯಂ, ಬೆಳ್ಳಿ, ಮೊದಲಾದ ನಿರ್ದಿಷ್ಟ ಲೋಹವನ್ನು) ನಿಕ್ಷೇಪಿಸು, ಲೇಪಿಸು.

electroplate
ನಾಮವಾಚಕ
ವಿದ್ಯುಲ್ಲೇಪಿತ; ವಿದ್ಯುಲ್ಲೇಪನ ಮಾಡಿರುವ ಪಾತ್ರೆ ಮೊದಲಾದವು.

electroplexy
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ವಿದ್ಯುತ್ಕಂಪನ ಚಿಕಿತ್ಸೆ; ವಿದ್ಯುತ್ಸೆಳವು ಚಿಕಿತ್ಸೆ; ಕೇಂದ್ರ ನರವ್ಯೂಹಕ್ಕೆ ವಿದ್ಯುದಾಘಾತ ನೀಡುವ ಮೂಲಕ ಮಾನಸಿಕ ರೋಗಕ್ಕೆ ಚಿಕಿತ್ಸೆ ಮಾಡುವುದು.

electrorefining
ನಾಮವಾಚಕ
ವಿದ್ಯುತ್‍ ಶುದ್ಧೀಕರಣ; (ಲೋಹಗಳನ್ನು) ವಿದ್ಯುದ್ವಿಚ್ಛೇದನ ವಿಧಾನದಿಂದ ಶುದ್ಧೀಕರಿಸುವುದು.

electroscope
ನಾಮವಾಚಕ
ವಿದ್ಯುದ್ದರ್ಶಕ; ವಿದ್ಯುದಾವೇಶವನ್ನೂ ಅದರ ಚಿಹ್ನೆಯನ್ನೂ ಗುರುತಿಸುವ ಸಾಧನ, ಮುಖ್ಯವಾಗಿ ವಿಕಿರಣ ಕ್ರಿಯೆಯಿಂದ ಗಾಳಿಯ ಅಯಾನೀತವಾಗುವ ಸೂಚನೆಯಿಂದ ವಿದ್ಯುತ್ತನ್ನು ಗುರುತಿಸುವ ಮತ್ತು ಅಳೆಯುವ ಸಾಧನ.

electrostatic
ಗುಣವಾಚಕ
(ವಿದ್ಯುದ್ವಿಜ್ಞಾನ) ಸ್ಥಾಯೀ ವಿದ್ಯುತ್ತಿನ.

electrostatic unit
ನಾಮವಾಚಕ
(ವಿದ್ಯುದ್ವಿಜ್ಞಾನ) ವಿದ್ಯುತ್‍ ಸ್ಥಾಯೀಮಾನ; ವಿದ್ಯುದಾವೇಶಗಳ ನಡುವಣ ಬಲಗಳ ಆಧಾರದ ಮೇಲೆ ನಿಗದಿಮಾಡಿರುವ ವಿದ್ಯುನ್ಮಾನ (ಸಂಕ್ಷಿಪ್ತ esu).

electrostatics
ನಾಮವಾಚಕ
(ಭೌತವಿಜ್ಞಾನ) ಸ್ಥಾಯೀವಿದ್ಯುಚ್ಛಾಸ್ತ್ರ; ಸ್ಥಾಯೀವಿದ್ಯುತ್ತನ್ನು ಕುರಿತ ಭೌತವಿಜ್ಞಾನದ ಶಾಖೆ.

electrotechnic
ಗುಣವಾಚಕ
ವಿದ್ಯುತ್ತಂತ್ರ ವಿದ್ಯೆಯ, ಅದಕ್ಕೆ ಸಂಬಂಧಿಸಿದ.

electrotechnical
ಗುಣವಾಚಕ
= electrotechnic.


logo