logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barberite
ನಾಮವಾಚಕ
(ಲೋಹವಿದ್ಯೆ) ಬಾರ್ಬರೈಟ್‍; ಶೇಕಡ 88 ತಾಮ್ರ, 5 ನಿಕ್ಕಲ್‍, 5 ತವರ, 2 ಸಿಲಿಕಾನ್‍ ಇರುವ ಒಂದು ಬಗೆಯ ಮಿಶ್ರಲೋಹ.

barbet
ನಾಮವಾಚಕ
ಮುಲ್ಲಾ – ಹಕ್ಕಿ, ಪಕ್ಷಿ; ಕೊಕ್ಕಿನ ಬುಡದಲ್ಲಿ ಬಿರು ಕೂದಲಿರುವ, ಉಷ್ಣವಲಯದ ಒಂದು ಬಗೆಯ ಹಕ್ಕಿ.

barbette
ನಾಮವಾಚಕ
  • ಫಿರಂಗಿ – ವೇದಿಕೆ, ಜಗುಲಿ; ಕೋಟೆಯ ಯಾ ಹಡಗಿನ ಒಳಗಡೆಯಿಂದಲೇ, ಫಿರಂಗಿ ಕಂಡಿಯ ಅಗತ್ಯವಿಲ್ಲದೆ, ಗೋಡೆಯ ಆಚೆಗೆ ಗುಂಡು ಹೊಡೆಯಲು ಮಾಡಿರುವ, ಫಿರಂಗಿ ಮೊದಲಾದವನ್ನು ಇಡುವ, ಜಗುಲಿ.
  • (ನೌಕಾಯಾನ) ಯುದ್ಧ ನೌಕೆಯ ತಿರುಗು ಗೋಪುರದ ಕೆಳ ಅರ್ಧ ಭಾಗವನ್ನು ರಕ್ಷಿಸಲು ಬಳಸುವ ಕವಚಿತ ಕೊಳವೆ.

  • barbican
    ನಾಮವಾಚಕ
    (ನಗರದ ಯಾ ಕೋಟೆಯ) ಕಾಪುಗೋಪುರ; ಹೊರಕಾಪು; ಬುರುಜು; ಮುಖ್ಯವಾಗಿ ದುರ್ಗದ ಹೆಬ್ಬಾಗಿಲು ಯಾ ಸೇತುವೆ ಮೇಲೆ ಕಟ್ಟಿರುವ ರಕ್ಷಣಾಗೋಪುರ.

    barbital
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಔಷಧ ಶಾಸ್ತ್ರ) ಬಾರ್ಬಿಟಲ್‍; ನಿದ್ರಾಜನಕವಾದ ಬಾರ್ಬಿಟ್ಯುರೇಟ್‍ ಸಂಯುಕ್ತ, ${\rm CO(HNCO)}_2({\rm C}_2{\rm H}_5)_2$.

    barbitone
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) = barbital.

    barbiturate
    ನಾಮವಾಚಕ
    (ರಸಾಯನವಿಜ್ಞಾನ) (ನಿದ್ರಾಜನಕವಾಗಿ ಯಾ ಸಮ್ಮೋಹನದಲ್ಲಿ ಬಳಸುವ) ಬಾರ್ಬಿಟ್ಯುರೇಟ್‍; ಬಾರ್ಬಿಟ್ಯೂರಿಕ್‍ ಆಮ್ಲದ ಯಾವುದೇ ಲವಣ.

    barbituric
    ಗುಣವಾಚಕ
    (ರಸಾಯನವಿಜ್ಞಾನ) ಬಾರ್ಬಿಟ್ಯೂರಿಕ್‍ ಆಮ್ಲದ ಯಾ ಅದರಿಂದ ಉತ್ಪನ್ನವಾದ.

    barbituric acid
    ನಾಮವಾಚಕ
    (ರಸಾಯನವಿಜ್ಞಾನ) ಬಾರ್ಬಿಟ್ಯೂರಿಕ್‍ ಆಮ್ಲ; ಬಾರ್ಬಿಟ್ಯುರೇಟ್‍ಗಳ ತಯಾರಿಕೆಯಲ್ಲಿ ಬಳಸುವ, ಸ್ಫಟಿಕಾಕಾರದ, ಬಿಳಿಯ, ಸ್ವಲ್ಪ ಮಾತ್ರ ನೀರಿನಲ್ಲಿ ಕರಗುವ ಪುಡಿ, ${\rm CH}_2{\rm (CONH)}_2{\rm CO}$.

    barbiturism
    ನಾಮವಾಚಕ
    (ರೋಗಶಾಸ್ತ್ರ) ಬಾರ್ಬಿಟ್ಯೂರಿಕ್‍ ನಂಜು; ಬಾರ್ಬಿಟ್ಯೂರಿಕ್‍ ಆಮ್ಲದ ಲವಣಗಳನ್ನು ತಿಂದು ತಿಂದು ಆಗಿರುವ ಹಳೆ ನಂಜು.


    logo