logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acro-
ಸಮಾಸ ಪೂರ್ವಪದ
ತುತ್ತ ತುದಿಯ, ಅಗ್ರ, ಅತ್ಯುನ್ನತ ಎಂಬ ಅರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ: acrophobia.

acrobat
ನಾಮವಾಚಕ
  • ದೊಂಬ; ಕೊಲ್ಲಟಿಗ; ಲಾಗಪಟು; ಗಣೆಯಾಟದವನು; ಹಗ್ಗದ ಮೇಲೆ ನಡೆಯುವುದು ಮೊದಲಾದ ಸಾಹಸಗಳನ್ನು ಮಾಡುವವನು. Figure: acrobat
  • (ರೂಪಕವಾಗಿ) ಸಮಯ ಸಾಧಕ; ಸಮಯಾನುವರ್ತಿ; ಸಮಯಕ್ಕೆ ತಕ್ಕಂತೆ ಬೇಗ ನಡೆನುಡಿಗಳನ್ನು ಬದಲಾಯಿಸುವವ.

  • acrobatic
    ಗುಣವಾಚಕ
    ದೊಂಬರಾಟದ; ದೊಂಬರಾಟದಂತಹ; ದೊಂಬನಿಗೆ ಯಾ ದೊಂಬರಾಟಕ್ಕೆ ಸಂಬಂಧಿಸಿದ.

    acrobatically
    ಕ್ರಿಯಾವಿಶೇಷಣ
    ದೊಂಬರಂತೆ; ದೊಂಬರಾಟದಂತೆ.

    acrobatics
    ನಾಮವಾಚಕ
  • ದೊಂಬರಾಟ; ಕೊಲ್ಲಾಟ; ದೊಂಬನ ಚಮತ್ಕಾರಗಳು.
  • (ರೂಪಕವಾಗಿ) ದೊಂಬರಾಟ; ಯಾವುದೇ ಕಾರ್ಯದಲ್ಲಿ ತೋರಿಸುವ ಚಳಕ ಯಾ ಚಮತ್ಕಾರ.
  • aerobatics.

  • acrobatism
    ನಾಮವಾಚಕ
    = acrobatics.

    acrocarpous
    ಗುಣವಾಚಕ
    ಅಗ್ರಫಲಿ; ಪಾಚಿಯಂತೆ, ಕಾಂಡದ ತುದಿಯಲ್ಲಿ ಹಣ್ಣು ಬಿಡುವ.

    acrodont
    ನಾಮವಾಚಕ
    (ಪ್ರಾಣಿವಿಜ್ಞಾನ) ಅಗ್ರದಂತಿ; ಹಲ್ಲುಗಳು ಒಸಡಿನ ಗೂಡುಗಳೊಳಕ್ಕೆ ಸೇರಿಕೊಂಡಿರದೆ ಹಲ್ಲಿಗಳಲ್ಲಿರುವಂತೆ ನೇರವಾಗಿ ದಿಂಡಿಗೆ ಸೇರಿಕೊಂಡಿರುವ ಪ್ರಾಣಿ.

    acrogen
    ನಾಮವಾಚಕ
    (ಸಸ್ಯವಿಜ್ಞಾನ) ಅಗ್ರವರ್ಧಿ; ಶೀರ್ಷವರ್ಧಿ; ಕಾಂಡದ ತುದಿಯಲ್ಲಿ ಬೆಳೆಯುವ ಬಿಂದುವನ್ನುಳ್ಳ, ಬಹುಕಾಲ ಬಾಳುವಂಥ ಕಾಂಡವುಳ್ಳ, ಹೂಗಳಿಲ್ಲದ ಯಾ ಗುಪ್ತಪುಷ್ಪಿಯಾದ ಗಿಡ, ಉದಾಹರಣೆಗೆ ಜರಿಗಳು ಯಾ ಪಾಚಿಗಳು.

    acrogenous
    ಗುಣವಾಚಕ
    ಅಗ್ರವರ್ಧಿ; ಶೀರ್ಷವರ್ಧಿ; ಕಾಂಡದ ತುದಿಯಿಂದ ಬೆಳೆಯುವ.


    logo