ದೀರ್ಘಸ್ಥಾಪಿತ; ಲಾಗಾಯಿತಿನಿಂದ ಇರುವ; ಅನಾದಿಕಾಲದ; ಬಹಳ ಹಿಂದಿನ ಕಾಲದಿಂದಲೂ ಇರುವ.
old-fashioned
ಗುಣವಾಚಕ
ಪದಗುಚ್ಛ
am old-fashioned enough to think (ವ್ಯಂಗ್ಯವಾಗಿ ಸ್ವನಿಂದೆ ಮಾಡಿಕೊಳ್ಳುವಾಗ) ಹಾಗೆ ಯೋಚಿಸುವಷ್ಟು ಹಳೆಯ ಕಾಲದವನು ನಾನು.
ಹಳೆಗಾಲದ; ಗತಕಾಲದ; ಓಬೀರಾಯನ ಕಾಲದ; ಅಪ್ರಚಲಿತ; ಬಳಕೆಯಲ್ಲಿಲ್ಲದ: aa old-fashioned hat ಓಬೀರಾಯನ ಕಾಲದ ಹ್ಯಾಟು.
ಹಳೆಯ ಸಂಪ್ರದಾಯದ, ಕಂದಾಚಾರದ: an old-fashioned pious family ಕಂದಾಚಾರದ ಧರ್ಮಶ್ರದ್ಧೆಯ, ಧರ್ಮನಿಷ್ಠ–ವಂಶ.
old-line
ಗುಣವಾಚಕ
(ಅಮೆರಿಕನ್ ಪ್ರಯೋಗ) ಹಳೆಯ ಜಾಡಿನ; ರೂಢಿಮಾರ್ಗದ; ಪ್ರತಿಷ್ಠಿತ; ಸ್ಥಾಪಿತ; ಸಂಪ್ರದಾಯಬದ್ಧ; ಬದಲಾವಣೆ ವಿರೋಧಿಸುವ.
old-maidish
ಗುಣವಾಚಕ
ವೃದ್ಧ ಕನ್ಯೆಯಂತೆ ಅತಿ ಗಡಿಬಿಡಿ ಯಾ ರಗಳೆ ಮಾಡುವ.
ಅತಿ ಬಿಂಕ ಬಿಗುಮಾನದ.
old-time
ಗುಣವಾಚಕ
ಹಿಂದಿನ, ಪ್ರಾಚೀನ, ಪುರಾತನ–ಕಾಲದ , ಕಾಲಕ್ಕೆ ಸೇರಿದ ಸಂಬಂಧಿಸಿದ: old-time ways ಪ್ರಾಚೀನ ಪದ್ಧತಿಗಳು, ಸಂಪ್ರದಾಯಗಳು; ಹಳೆಯ ಕಾಲದ ರೀತಿನೀತಿಗಳು.
(ಅಮೆರಿಕನ್ ಪ್ರಯೋಗ) ನುರಿತ; ಪಳಗಿದ; ದೀರ್ಘಕಾಲದ ಅನುಭವವುಳ್ಳ: many old-time bowlers ಅನೇಕ ನುರಿತ ಬೋಲರುಗಳು.
old-timer
ನಾಮವಾಚಕ
(ಅಮೆರಿಕನ್ ಪ್ರಯೋಗ)
ನುರಿತ ಹಳಬ; ಪಳಗಿದ–ಕೈ, ವ್ಯಕ್ತಿ; ಅನುಭವಶಾಲಿ.
ಹಿರಿಯ; ಇಳಿ ವಯಸ್ಸಿನವನು.
old-world
ಗುಣವಾಚಕ
ಹಳೆಯ ಕಾಲದ; ಪ್ರಾಚೀನ ಕಾಲಕ್ಕೆ ಸೇರಿದ.
ಪೂರ್ವಾರ್ಧಗೋಳದ; ಅಮೆರಿಕಗಳನ್ನು ಬಿಟ್ಟು ಪ್ರಪಂಚದ ಉಳಿದ ಭಾಗದ.
oldboy network
ನಾಮವಾಚಕ
(ಬ್ರಿಟಿಷ್ ಪ್ರಯೋಗ) (ಆಡುಮಾತು) ಹಳೆ ಮೈತ್ರಿಯ ಬಲೆ; ಹಳೆಕೆಳೆತನದ ಜಾಲ; ನೇಮಕಾತಿಯಲ್ಲಿ ಸಮಾನವಾದ ಸಾಮಾಜಿಕ ಹಿನ್ನೆಲೆ ಹೊಂದಿರುವವರಿಗೆ, ಮುಖ್ಯವಾಗಿ ವಿದ್ಯಾರ್ಥಿ ದೆಸೆಯಲ್ಲಿ ಸಹಾಧ್ಯಾಯಿ ಯಾ ಸಂಗಾತಿಗಳಾಗಿದ್ದವರಿಗೆ, ತೋರಿಸುವ ಒಲವು, ಆಸಕ್ತಿ.
olden
ಗುಣವಾಚಕ
ಪದಗುಚ್ಛ
(ಪ್ರಾಚೀನ ಪ್ರಯೋಗ) ಹಳೆಯ, ಹಿಂದಿನ–ಕಾಲದ; ಪ್ರಾಚೀನ, ಪುರಾತನ – ಕಾಲದ: (ಮುಖ್ಯವಾಗಿ) in olden times ಹಿಂದಿನ, ಪ್ರಾಚೀನ – ಕಾಲದಲ್ಲಿ. the olden time ಪುರಾತನ ಕಾಲ.