(ವಸ್ತುವನ್ನು, ಮುಖ್ಯವಾಗಿ ಸರಕನ್ನು, ಹೊರದೇಶದಿಂದ) ತರು; ಆಮದು ಮಾಡು; ಆಯಾತ ಮಾಡು.
ಸೂಚಿಸು; ಅರ್ಥ, ಅಭಿಪ್ರಾಯ, ಭಾವ ಕೊಡು: his words imported that some change had to be made ಏನಾದರೂ ಬದಲಾವಣೆ ಮಾಡಲೇಬೇಕೆಂದು ಅವನ ಮಾತುಗಳು ಸೂಚಿಸಿದವು.
ವ್ಯಕ್ತಪಡಿಸು; ಸಾರು; ತಿಳಿಸು: an inscription importing that it was erected by the pope ಪೋಪ್ ಸ್ಥಾಪಿಸಿದ್ದೆಂದು ತಿಳಿಸುವ ಶಾಸನ.
(ಪ್ರಾಚೀನ ಪ್ರಯೋಗ) (ಒಬ್ಬನಿಗೆ, ಯಾವುದಾದರೂ ಒಂದು ವಸ್ತುವಿಗೆ) ಮುಖ್ಯವಾಗಿರು; ಮುಖ್ಯವಾಗಿ ಸಂಬಂಧಿಸಿರು ( ಅಕರ್ಮಕ ಕ್ರಿಯಾಪದ ಸಹ): questions that import us nearly ನಮಗೆ ನಿಕಟವಾಗಿ ಸಂಬಂಧಿಸಿರುವ ಸಮಸ್ಯೆಗಳು. it imports us to know ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದುದೇನೆಂದರೆ. it imports little that we are early or late ನಾವು ಬಂದಿರುವುದು ಮುಂಚಿತವಾಗಿಯೋ ತಡವಾಗಿಯೋ ಎಂಬುದು ಮುಖ್ಯವಲ್ಲ.
import
ನಾಮವಾಚಕ
ಸೂಚನೆ; ಅರ್ಥ; ಧ್ವನಿ; ಭಾವ; ಸೂಚಿತವಾದದ್ದು.
ಪ್ರಾಧಾನ್ಯ; ಪ್ರಾಮುಖ್ಯ: a man of great import ಬಹಳ ಪ್ರಾಮುಖ್ಯವುಳ್ಳ ವ್ಯಕ್ತಿ.
(ಸಾಮಾನ್ಯವಾಗಿ ಬಹುವಚನದಲ್ಲಿ) ಒಟ್ಟು – ಆಯಾತ, ಆಮದು; ಆಮದಿನ ಮೊತ್ತ; ಆಮದಾದ ಒಟ್ಟು ಸರಕು, ಸಾಮಾನುಗಳು.
ಆಮದಾದ ವಸ್ತು ಯಾ ಸರಕು.
= importation.
importance
ನಾಮವಾಚಕ
ಪ್ರಾಮುಖ್ಯ; ಪ್ರಾಧಾನ್ಯ; ಮುಖ್ಯವಾಗಿರುವುದು.
(ರೂಪಕವಾಗಿ) ತೂಕ; ಮಹತ್ವ.
ಪ್ರಭಾವ; ಪರಿಣಾಮ.
ಅಗ್ಗಳಿಕೆ; ಹೆಚ್ಚುಗಾರಿಕೆ; ಘನತೆ.
ಆಡಂಬರ; ಪ್ರತಿಷ್ಠೆ (ಸಾಮಾನ್ಯವಾಗಿ self-importance ಸ್ವಪ್ರತಿಷ್ಠೆ).
important
ಗುಣವಾಚಕ
(ಒಬ್ಬ ವ್ಯಕ್ತಿ, ಒಂದು ಉದ್ದೇಶ, ಮೊದಲಾದವಕ್ಕೆ) ಮುಖ್ಯ(ವಾದ); ಪ್ರಮುಖ(ವಾದ); ಪ್ರಧಾನ(ವಾದ).
ತೂಕವುಳ್ಳ; ಗುರುತರವಾದ; ಮಹತ್ವದ.
ಪರಿಣಾಮಕಾರಿ; ಪ್ರಭಾವಶಾಲಿ: important decisions ಪರಿಣಾಮಕಾರಿಯಾದ ತೀರ್ಮಾನಗಳು; ಪ್ರಭಾವಶಾಲಿ ನಿರ್ಣಯಗಳು.
ಆಡಂಬರದ; ಪ್ರತಿಷ್ಠೆಯ; ಡೌಲಿನ; ಡಬಡ್ಡಾಳಿಕೆಯ: with an important air ಡಬಡ್ಡಾಳಿಕೆಯಿಂದ.
(ವ್ಯಕ್ತಿಯ ವಿಷಯದಲ್ಲಿ ದರ್ಜೆ ಯಾ ವರ್ಗದಲ್ಲಿ) ಪ್ರಮುಖ; ಉನ್ನತ; ಪ್ರತಿಷ್ಠಿತ; ವರಿಷ್ಠ.
importantly
ಕ್ರಿಯಾವಿಶೇಷಣ
ಮುಖ್ಯವಾಗಿ; ಪ್ರಧಾನವಾಗಿ.
ಮಹತ್ವಪೂರ್ಣವಾಗಿ.
ಪರಿಣಾಮಕಾರಿಯಾಗಿ.
ಆಡಂಬರದಿಂದ; ಪ್ರತಿಷ್ಠೆಯಿಂದ.
importunate
ಗುಣವಾಚಕ
(ಒತ್ತಾಯದಿಂದ) ಪ್ರಾರ್ಥಿಸುವ; ಮೇಲಿಂದ ಮೇಲೆ – ಬೇಡಿಕೊಳ್ಳುವ, ಅಂಗಲಾಚುವ, ಕೇಳಿಕೊಳ್ಳುವ.
(ಕೋರಿಕೆಗಳ ಮೂಲಕ ಯಾ ಅಶ್ಲೀಲ ಉದ್ದೇಶದಿಂದ) ಪೀಡಿಸುವ; ಒತ್ತಾಯಮಾಡುವ; ಕಾಡುವ; ಉಪದ್ರವ ಕೊಡುವ.
(ಒತ್ತಾಯದಿಂದ) ಪ್ರಾರ್ಥಿಸು; ಅಂಗಲಾಚು; ಮೇಲಿಂದ ಮೇಲೆ – ಕೇಳಿಕೊ, ಬೇಡಿಕೊ ( ಅಕರ್ಮಕ ಕ್ರಿಯಾಪದ ಸಹ).
(ಕೋರಿಕೆಗಳ ಮೂಲಕ ಯಾ ಅಶ್ಲೀಲ ಉದ್ದೇಶಕ್ಕಾಗಿ) ಪೀಡಿಸು; ಕಾಡು; ಒತ್ತಾಯ ಪಡಿಸು: arrested for importuning a male in the park ಪಾರ್ಕಿನಲ್ಲಿ ಗಂಡಸೊಬ್ಬನನ್ನು ಅಶ್ಲೀಲ ಉದ್ದೇಶದಿಂದ ಪೀಡಿಸಿದ್ದಕ್ಕಾಗಿ ದಸ್ತಗಿರಿ ಮಾಡಲಾದ.