logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electronic flash
ನಾಮವಾಚಕ
(ಛಾಯಾಚಿತ್ರಣ) ಇಲೆಕ್ಟ್ರಾನಿಕ್‍ ಸ್ಫುರಣ; ಅಧಿಕವೇಗದ ಛಾಯಾಚಿತ್ರೀಕರಣದಲ್ಲಿ ಬಳಸುವ, ಅನಿಲ ವಿಸರ್ಜಕ ನಳಿಕೆಯು ನೀಡುವ ಕ್ಷಣಿಕ ಪ್ರಕಾಶ.

electronic tube
ನಾಮವಾಚಕ
ಇಲೆಕ್ಟ್ರಾನಿಕ್‍ ನಾಳ; ಮೊಹರು ಮಾಡಿದ ಗಾಜಿನ ಯಾ ಲೋಹದ ಕೊಳವೆಯೊಳಗಡೆ ಶೂನ್ಯದಲ್ಲಿ ಯಾ ಅನಿಲದಲ್ಲಿ ಇಲೆಕ್ಟ್ರಾನುಗಳು ಹರಿಯುವಂತೆ ಏರ್ಪಡಿಸಿರುವ ಸಾಧನ.

electronically
ಕ್ರಿಯಾವಿಶೇಷಣ
ಇಲೆಕ್ಟ್ರಾನಿಕವಾಗಿ; ಇಲೆಕ್ಟ್ರಾನಿಗೆ ಯಾ ಇಲೆಕ್ಟ್ರಾನ್‍ ಶಾಸ್ತ್ರಕ್ಕೆ ಸಂಬಂಧಿಸಿದಂತೆ.

electronics
ನಾಮವಾಚಕ
(ಬಹುವಚನವಾದರೂ ಏಕವಚನವಾಗಿ ಬಳಕೆ).
  • ಇಲೆಕ್ಟ್ರಾನಿಕ್‍ ಶಾಸ್ತ್ರ; ಇಲೆಕ್ಟ್ರಾನಿಕ್ಸ್‍; ಶೂನ್ಯಪ್ರದೇಶ, ಅರೆವಾಹಕ ಮತ್ತು ಅನಿಲಗಳಲ್ಲಿ ಇಲೆಕ್ಟ್ರಾನ್‍ಗಳ ಸ್ಫುರಣ, ಅವುಗಳ ವರ್ತನೆ ಮತ್ತು ಅವುಗಳ ಪರಿಣಾಮಗಳನ್ನು ಕುರಿತ, ಇದನ್ನಾಧರಿಸಿ ತಯಾರಿಸುವ ಸಾಧನಗಳನ್ನು ಕುರಿತ ಶಾಸ್ತ್ರ.
  • ಅದರಲ್ಲಿ ಬಳಸುವ ಮಂಡಲಗಳು ಮೊದಲಾದವು.

  • electrophilic
    ಗುಣವಾಚಕ
    (ರಸಾಯನವಿಜ್ಞಾನ) = electronegative(2).

    electrophonic
    ಗುಣವಾಚಕ
    = electronic(2, 3).

    electrophore
    ನಾಮವಾಚಕ
    (ರಸಾಯನವಿಜ್ಞಾನ) ವಿದ್ಯುದ್ಧರ; ವಿದ್ಯುದ್ಧಾರಕ; ವಿದ್ಯುದಾವೇಶವಿರುವ ಒಂದು ಕಾಯದ ಪ್ರೇರಣೆಯಿಂದ ಇನ್ನೊಂದು ಕಾಯದ ಮೇಲೆ ಸ್ಥಿತಿವಿದ್ಯುತ್ತನ್ನು ಉಂಟುಮಾಡುವ ಸಾಧನ.

    electrophoresis
    ನಾಮವಾಚಕ
    (ರಸಾಯನವಿಜ್ಞಾನ) ವಿದ್ಯುತ್ಸರಣ; ವಿದ್ಯುಚ್ಚಾಲಕ ಬಲದ ಪರಿಣಾಮವಾಗಿ ಕಲಿಲ ದ್ರಾವಣದಲ್ಲಿರುವ ಕಣಗಳು ಎರಡರಲ್ಲೊಂದು ವಿದ್ಯುದ್ವಾರದ ದಿಕ್ಕಿನಲ್ಲಿ ಚಲಿಸುವುದು.

    electrophoretic
    ಗುಣವಾಚಕ
    (ರಸಾಯನವಿಜ್ಞಾನ) ವಿದ್ಯುತ್ಸರಣಕ; ವಿದ್ಯುಚ್ಚಾಲಕ ಬಲದ ಪರಿಣಾಮವಾಗಿ ಕಲಿಲ ದ್ರಾವಣದಲ್ಲಿರುವ ಕಣಗಳು ಎರಡರಲ್ಲೊಂದು ವಿದ್ಯುದ್ವಾರದ ದಿಕ್ಕಿನಲ್ಲಿ ಚಲಿಸುವ.

    electrophorus
    ನಾಮವಾಚಕ
    = electrophore.


    logo