logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

canso
ನಾಮವಾಚಕ
(ಫ್ರಾನ್ಸಿನ ಪ್ರೊವೆನ್ಸ್‍ ಪ್ರಾಂತದ) ಪ್ರೇಮಗೀತ; ನಲ್ಮೆಹಾಡು.

canst
ಕ್ರಿಯಾಪದ
can ನೋಡಿ.

cant
ನಾಮವಾಚಕ
  • (ಹರಳು, ಸ್ಫಟಿಕ, ದಡ, ದಿಣ್ಣೆ ಮೊದಲಾದವುಗಳ) ಓರೆಮುಖ; ಓರೆ; ವಾಲುವೆ; ವಾಟ.
  • (ಉರುಳಿಸಿಬಿಡುವ, ಬೀಳಿಸಿಬಿಡುವ ಯಾ ಅಲ್ಲಾಡಿಸುವ) ಎಸೆತ; ತಳ್ಳುವಿಕೆ; ದಬ್ಬುವಿಕೆ; ದಬ್ಬೋಣ; ನೂಕಲು.
  • ಓರೆ; ಓರಸ; ಓಲು; ಮಾಲು; ಬಾಗು; ಓಲಿರುವ ಸ್ಥಿತಿ.

  • cant
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಏಣು ಸವರು; ಮೂಲೆ ಮುರಿ.
  • ಓರೆ ಮಾಡು; ಓಲಿಸು; ಬಾಗಿಸು.
  • ಮಗಚು; ತಲೆಕೆಳಗು ಮಾಡು.
  • ಪಕ್ಕಕ್ಕೆ–ನೂಕು, ಬೀಳಿಸು.

  • cant
    ನಾಮವಾಚಕ
  • (ಸಾಮಾನ್ಯವಾಗಿ, ಹೀನಾರ್ಥಕ ಪ್ರಯೋಗ) (ಒಂದು ಪಂಗಡ, ಕಸುಬು ಮೊದಲಾದವುಗಳ) ಪರಿಭಾಷೆ; ಸಂಕೇತ ಭಾಷೆ.
  • (ಕೆಲಕಾಲ ಮಾತ್ರ ಆಕರ್ಷಕವಾಗಿ ಬಳಕೆಯಲ್ಲಿರುವ) ಸೆಳೆಮಾತು; ಸೆಳೆನುಡಿ; ಆಕರ್ಷಕ ವಚನ.
  • (ಅರ್ಥವಿಲ್ಲದ) ಡೌಲುವಚನ; ಡಂಭ ಮಾತು.
  • (ಶ್ರದ್ಧಾಭಕ್ತಿಗಳನ್ನು ಸೂಚಿಸುವ) ಸೋಗುನುಡಿ; ಬೂಟಾಟಿಕೆ ಮಾತು; ಕಪಟಭಾಷೆ.
  • ಬೂಟಾಟಿಕೆ; ಕಪಟಾಚಾರ; ಆಷಾಢಭೂತಿತನ; ಡಂಭಾಚಾರ.
  • ಗೂಢಭಾಷೆ; ಗುಪ್ತಭಾಷೆ; ಕೂಟಭಾಷೆ.
  • (ಭಿಕ್ಷುಕರಂತೆ) ಮೂಗಿನಲ್ಲಿ ಮಾತನಾಡುವುದು, ಗೋಗರೆಯುವುದು.

  • cant
    ಅಕರ್ಮಕ ಕ್ರಿಯಾಪದ
  • (ಒಂದು ವರ್ಗ, ಕಸುಬಿನವರು ಮೊದಲಾದವರ ವಿಷಯದಲ್ಲಿ) ಪರಿಭಾಷೆ ಬಳಸು; ಪರಿಭಾಷೆಯಲ್ಲಿ – ಮಾತನಾಡು, ವ್ಯವಹರಿಸು.
  • ಬೂಟಾಟಿಕೆ ಮಾತನಾಡು; ಕಪಟನುಡಿ ಬಳಸು; (ಮುಖ್ಯವಾಗಿ ಧಾರ್ಮಿಕನಂತೆ ತೋರಿಸಿಕೊಳ್ಳಲು) ಸೋಗು ಮಾತಾಡು.
  • (ಭಿಕ್ಷುಕನಂತೆ) ಗೋಗರೆ; ಮೂಗಿನಲ್ಲಿ ಮಾತಾಡು.

  • cant-dog
    ನಾಮವಾಚಕ
    = cant-hook.

    cant-hook
    ನಾಮವಾಚಕ
    ಕಂಬಿಕೊಕ್ಕೆ; ತೊಲೆಗಳನ್ನು ಉರುಳಿಸಲು ಬಳಸುವ, ಕಂಬಿಯ ತುದಿಯಲ್ಲಿರುವ, ಕಬ್ಬಿಣದ ಕೊಕ್ಕೆ.

    Cant.
    ಸಂಕ್ಷಿಪ್ತ
    (ಬೈಬಲಿನ ಹಳೆಯ ಒಡಂಬಡಿಕೆಯ) Canticles.

    Cantab.
    ಸಂಕ್ಷಿಪ್ತ
    of Cambridge University.


    logo