logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barbell
ನಾಮವಾಚಕ
ಬಾರ್‍ಬೆಲ್‍; ಇಗ್ಗುಂಡು; ತೂಕ ಎತ್ತಲು, ವ್ಯಾಯಾಮದಲ್ಲಿ ಬಳಸುವ, ಎರಡು ಕೊನೆಗಳಿಗೂ ಚಕ್ರಗಳನ್ನು ಯಾ ಗುಂಡುಗಳನ್ನು ಸಿಕ್ಕಿಸಿರುವ, ಲೋಹದ ದಂಡ.

barbelled
ಗುಣವಾಚಕ
(ಈನುಗಳ ವಿಷಯದಲ್ಲಿ) ದಾಡಿತಂತುಗಳಿರುವ.

barber
ನಾಮವಾಚಕ
ನಾಯಿಂದ; ನಾಪಿತ; ಹಜಾಮ; ಕೆಲಸಿಗ; ಕಷ್ಟದವ; ಕ್ಷೌರಿಕ.

barber
ಸಕರ್ಮಕ ಕ್ರಿಯಾಪದ
  • ಚೌರ, ಕ್ಷೌರ, ಹಜಾಮತ್‍ – ಮಾಡು.
  • (ರೂಪಕವಾಗಿ) (ಹುಲ್ಲು ಮೊದಲಾದವನ್ನು) ಮೋಟಾಗಿ ಕತ್ತರಿಸು.

  • barber's block
    ನಾಮವಾಚಕ
    ಟೋಫನು ಅಚ್ಚು; ಕುಲಾವಿಗಳನ್ನೂ ಟೋಫನುಗಳನ್ನೂ ಮಾಡಲು ಮತ್ತು ಇಟ್ಟು ತೋರಲು ಬಳಸುವ, ದುಂಡನೆಯ ಮರದ ಅಚ್ಚು.

    barber's itch
    ನಾಮವಾಚಕ
    ಕ್ಷೌರದ – ಕಜ್ಜಿ, ಹುಳುಕಡ್ಡಿ; ತುರಿ ಗಜ್ಜಿ; ಕ್ಷೌರಮಾಡಿಸಿಕೊಂಡಾಗ ಶುದ್ಧಮಾಡದ ಸಲಕರಣೆಗಳಿಂದ ಒಬ್ಬರಿಂದ ಮತ್ತೊಬ್ಬರಿಗೆ ಅಂಟುಜಾಡ್ಯವಾಗಿ ಮುಖ ಮತ್ತು ಕತ್ತುಗಳಿಗೆ ಬರುವ ಒಂದು ಬಗೆಯ ಹುಳುಕಡ್ಡಿ, ತುರಿಗಜ್ಜಿ.

    barber's pole
    ನಾಮವಾಚಕ
    ಕೆಲಸಿಗನ ಕಂಬ; ಕ್ಷೌರಕ ಕಂಬ; ಕ್ಷೌರದಂಗಡಿಯ ಗುರುತಾಗಿ ಕೆಂಪು ಬಿಳಿ ಪಟ್ಟೆಗಳನ್ನು ಸುರುಳಿಯಾಗಿ ಬಳಿದಿರುವ ಕಂಬ.

    barber's rash
    ನಾಮವಾಚಕ
    = barber’s itch.

    barber(r)y
    ನಾಮವಾಚಕ
  • ಬಾರ್ಬರಿಗಿಡ; ಮುಳ್ಳು ಮುಳ್ಳಾದ ಕುಡಿಗಳುಳ್ಳ, ಹಳದಿ ಹೂಗಳನ್ನೂ ಉದ್ದವಾದ ಕೆಂಪು ಬೆರಿಗಳನ್ನೂ ಬಿಡುವ, ದೊಡ್ಡ ಮರದರಸಿನದ ಯಾ ಬಾಗಿಸೂತ್ರದ ಬಳಗದ ಪೊದೆ.
  • ಬಾರ್ಬರಿ(ಗಿಡದ) ಕಾಯಿ, ಹಣ್ಣು.

  • barber-shop
    ಗುಣವಾಚಕ
  • ಕ್ಷೌರದಂಗಡಿಯ.
  • (ಅಮೆರಿಕನ್‍ ಪ್ರಯೋಗ) (ರೂಪಕವಾಗಿ, ಆಡುಮಾತು) ನಾಲ್ವರು ಗಾಯಕರು ಮೇಳೈಸಿ ಹಾಡುವ ಯಾ ಅಂಥ ಗಾಯನದ ಯಾ ಅಂಥ ಗಾಯನ ತಂಡದ.


  • logo