logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acred
ಗುಣವಾಚಕ
ಎಕರೆಗಳುಳ್ಳ; ಜಮೀನು ಹೊಂದಿರುವ.

acrid
ಗುಣವಾಚಕ
  • (ರುಚಿ, ವಾಸನೆ, ಮೊದಲಾದವುಗಳ ವಿಷಯದಲ್ಲಿ) ಅತಿ ಕಾರದ: ತೀಕ್ಷ್ಣ; ಕ್ಷಾರಕ; ಸುಡುವ.
  • (ಟೀಕೆ ಮೊದಲಾದವುಗಳ ವಿಷಯದಲ್ಲಿ) ಉಗ್ರ; ಕಟು; ಕಠಿಣ; ನಿಷ್ಠುರ; ಪರುಷ.

  • acridine
    ನಾಮವಾಚಕ
    (ರಸಾಯನವಿಜ್ಞಾನ) ಆಕ್ರಿಡೀನ್‍; ಕಲ್ಲಿದ್ದಲ ಟಾರಿನಿಂದ ತಯಾರಿಸುವ ರಂಗು ಹಾಗೂ ಔಷಧಗಳ ಮುಖ್ಯ ಘಟಕವಾಗಿರುವ, ಬಣ್ಣವಿಲ್ಲದ, ಸ್ಫಟಿಕಸಂಯುಕ್ತ.

    acridity
    ನಾಮವಾಚಕ
  • (ರುಚಿ ಮೊದಲಾದವುಗಳ ವಿಷಯದಲ್ಲಿ) ಅತಿ ಕಾರ; ತೀಕ್ಷ್ಣತೆ; ಕ್ಷಾರತ್ವ.
  • (ಟೀಕೆ ಮೊದಲಾದವುಗಳ ವಿಷಯದಲ್ಲಿ) ಕಟುತ್ವ; ಉಗ್ರತೆ; ನಿಷ್ಠುರತೆ; ಕಾಠಿಣ್ಯ.

  • acriflavine
    ನಾಮವಾಚಕ
    (ರಸಾಯನವಿಜ್ಞಾನ) ಆಕ್ರಿಹ್ಲೇವಿನ್‍; ರೋಗಾಣು ನಿರೋಧ ಕವಾಗಿ ಬಳಸುವ ನಸುಗೆಂಪು ಪುಡಿ.

    acrimonious
    ಗುಣವಾಚಕ
    (ನಡೆ ನುಡಿ, ಮನೋಭಾವಗಳಲ್ಲಿ) ಕಹಿ; ಕಟು; ಉಗ್ರ; ತೀಕ್ಷ್ಣ; ನಿಷ್ಠುರ.

    acrimoniously
    ಕ್ರಿಯಾವಿಶೇಷಣ
    (ನಡೆ ನುಡಿಗಳಲ್ಲಿ) ಕಹಿಯಾಗಿ; ಕಟುವಾಗಿ; ಉಗ್ರವಾಗಿ; ತೀಕ್ಷ್ಣವಾಗಿ; ನಿಷ್ಠುರವಾಗಿ.

    acrimony
    ನಾಮವಾಚಕ
    (ನಡೆ, ನುಡಿ, ಮನೋಭಾವಗಳಲ್ಲಿ) ಕಹಿ; ಕಟುತ್ವ; ಉಗ್ರತೆ; ತೀಕ್ಷ್ಣತೆ.

    Acrita
    ನಾಮವಾಚಕ
    (ಪ್ರಾಣಿವಿಜ್ಞಾನ) (ಬಹುವಚನ) ಆಕ್ರಿಟ; ಸ್ಪಷ್ಟವಾದ ನರವ್ಯೂಹವಿಲ್ಲದ ಒಂದು ಪ್ರಾಣಿ ವರ್ಗ.

    acritochromacy
    ನಾಮವಾಚಕ
    ಬಣ್ಣಗುರುಡು; ವರ್ಣಾಂಧತೆ; ಬಣ್ಣಗಳನ್ನು ಬೇರೆ ಬೇರೆಯಾಗಿ ಗುರುತಿಸಲಾಗದಿರುವುದು.


    logo