logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

maniple
ನಾಮವಾಚಕ
  • (ರೋಮನ್‍ ಚರಿತ್ರೆ) ರೋಮನ್‍ ದಂಡಿನ (20 ಯಾ 60 ಸೈನಿಕರುಳ್ಳ) ಸೇನಾಭಾಗ, ಪಡೆ, ದಳ.
  • (ಕ್ರೈಸ್ತಧರ್ಮ) ತೂಗು ಪಟ್ಟಿ; ಪ್ರಭುಭೋಜನದ ಸಂದರ್ಭದಲ್ಲಿ ಬಳಸುವ, ಎಡದೋಳಿನಿಂದ ತೂಗಾಡುವಂತೆ ತೊಟ್ಟ ಪಟ್ಟಿ, ಬಟ್ಟೆ.

  • manipulability
    ನಾಮವಾಚಕ
  • (ವಸ್ತುವನ್ನು) ಕುಶಲತೆಯಿಂದ ಬಳಸಹುದಾಗಿರುವಿಕೆ.
  • (ಯಂತ್ರ, ವಿಷಯ, ಮೊದಲಾದವನ್ನು) ಕುಶಲತೆಯಿಂದ – ನಿರ್ವಹಿಸಬಹುದಾಗಿರುವಿಕೆ, ನಡೆಸಬಹುದಾಗಿರುವಿಕೆ.
  • (ಮುಖ್ಯವಾಗಿ ನ್ಯಾಯವಿರುದ್ಧವಾದ ರೀತಿಯಲ್ಲಿ) ಪ್ರಭಾವ ಮೊದಲಾದವನ್ನು ಜಾಣ್ಮೆಯಿಂದ ಬಳಸಿ (ಒಬ್ಬನನ್ನು) ವಶದಲ್ಲಿಟ್ಟುಕೊಳ್ಳಬಹುದಾಗಿರುವಿಕೆ.
  • (ಕಂಪ್ಯೂಟರ್‍) (ದತ್ತಾಂಶ ಮೊದಲಾದವನ್ನು) ಬದಲಾಯಿಸಬಹುದಾಗಿರುವಿಕೆ; ವ್ಯತ್ಯಸನೀಯತೆ.
  • (ದೇಹದ ಅಂಗ) ಮುಟ್ಟಿ ಪರೀಕ್ಷಿಸಿ ಚಿಕಿತ್ಸೆ ನೀಡಬಹುದಾಗಿರುವಿಕೆ.

  • manipulable
    ಗುಣವಾಚಕ
    = manipulatable.

    manipulatable
    ಗುಣವಾಚಕ
  • (ವಸ್ತುವನ್ನು) ಕುಶಲತೆಯಿಂದ ಬಳಸಬಹುದಾದ.
  • (ಯಂತ್ರ, ವಿಷಯ, ಮೊದಲಾದವನ್ನು) ಕುಶಲತೆಯಿಂದ – ನಿರ್ವಹಿಸಬಹುದಾದ, ನಡೆಸಬಹುದಾದ.
  • (ಮುಖ್ಯವಾಗಿ ನ್ಯಾಯವಿರುದ್ಧವಾದ ರೀತಿಯಲ್ಲಿ) ಪ್ರಭಾವ ಮೊದಲಾದವನ್ನು ಜಾಣ್ಮೆಯಿಂದ ಬಳಸಿ (ಒಬ್ಬನನ್ನು) ಸ್ವಾಧೀನ ಮಾಡಿಕೊಳ್ಳಬಹುದಾದ.

  • manipulate
    ಸಕರ್ಮಕ ಕ್ರಿಯಾಪದ
  • (ವಸ್ತುವನ್ನು) ಕುಶಲತೆಯಿಂದ ಬಳಸು.
  • (ಯಂತ್ರ ಮೊದಲಾದವನ್ನು) ಕುಶಲತೆಯಿಂದ ನಡೆಸು.
  • (ವಿಷಯ ಮೊದಲಾದವನ್ನು) ಕುಶಲತೆಯಿಂದ ನಿರ್ವಹಿಸು.
  • (ಮುಖ್ಯವಾಗಿ ನ್ಯಾಯವಿರುದ್ಧವಾದ ರೀತಿಯಲ್ಲಿ) ಪ್ರಭಾವ ಮೊದಲಾದವನ್ನು ಜಾಣ್ಮೆಯಿಂದ ಬಳಸಿ (ಒಬ್ಬನನ್ನು) – ಸ್ವಾಧೀನಮಾಡಿಕೊ, ವಶದಲ್ಲಿಟ್ಟುಕೊ, ದುರುಪಯೋಗ ಪಡಿಸಿಕೊ; (ಒಬ್ಬನ ಮೇಲೆ) ಕೈಚಳಕ, ಕೈವಾಡ – ತೋರಿಸು.
  • (ದೇಹದ ಒಂದು ಅಂಗವನ್ನು) ಕೈಯಿಂದ ಮುಟ್ಟಿ ಪರೀಕ್ಷಿಸಿ ಚಿಕಿತ್ಸೆ ನೀಡು.
  • (ಕಂಪ್ಯೂಟರ್‍) (ದತ್ತಾಂಶ ಮೊದಲಾದವನ್ನು) ಬದಲಿಸು; ವ್ಯತ್ಯಾಸ ಮಾಡು; ಚಲಿಸುವಂತೆ ಮಾಡು ಯಾ ಸಂಪಾದಿಸು.
  • (ಜನನಾಂಗವನ್ನು) ಉತ್ತೇಜಿಸು; ಉದ್ರೇಕಿಸು; ಕೆರಳಿಸು.

  • manipulation
    ನಾಮವಾಚಕ
  • ಕುಶಲಬಳಕೆ; ವಸ್ತುವನ್ನು ಕುಶಲತೆಯಿಂದ ಬಳಸುವುದು.
  • (ಯಂತ್ರ ಮೊದಲಾದವನ್ನು) ಕುಶಲತೆಯಿಂದ ನಡೆಸುವುದು.
  • ಕುಶಲ ನಿರ್ವಹಣೆ; ವಿಷಯವನ್ನು ಕುಶಲತೆಯಿಂದ ನಿರ್ವಹಿಸುವುದು.
  • ಕುತಂತ್ರ; ಪ್ರಭಾವ ಮೊದಲಾದವನ್ನು ಜಾಣ್ಮೆಯಿಂದ ಮುಖ್ಯವಾಗಿ ನ್ಯಾಯವಿರುದ್ಧವಾದ ರೀತಿಯಲ್ಲಿ ಬಳಸಿ, ಒಬ್ಬನನ್ನು ಸ್ವಾಧೀನಮಾಡಿಕೊಳ್ಳುವುದು, ವಶದಲ್ಲಿಟ್ಟುಕೊಳ್ಳುವುದು, ದುರುಪಯೋಗಪಡಿಸಿಕೊಳ್ಳುವುದು; (ಒಬ್ಬನ ಮೇಲೆ) ಕೈಚಳಕ, ಕೈವಾಡ ತೋರಿಸುವುದು.
  • (ದೇಹದ ಒಂದು ಅಂಗವನ್ನು) ಕೈಯಿಂದ ಮುಟ್ಟಿ ಪರೀಕ್ಷಿಸಿ ಚಿಕಿತ್ಸೆ ನೀಡುವುದು.
  • (ಕಂಪ್ಯೂಟರ್‍) (ದತ್ತಾಂಶ ಮೊದಲಾದವನ್ನು) ಬದಲಿಸುವಂತೆ, ಚಲಿಸುವಂತೆ ಯಾ ಸಂಪಾದಿಸುವಂತೆ ಮಾಡುವುದು.
  • (ಜನನಾಂಗವನ್ನು) ಉತ್ತೇಜಿಸುವುದು; ಕೆರಳಿಸುವುದು; ಉದ್ರೇಕಿಸುವುದು.

  • manipulative
    ಗುಣವಾಚಕ
  • (ಒಂದು ಪರಿಸ್ಥಿತಿ, ವ್ಯಕ್ತಿ, ಮೊದಲಾದವರನ್ನು ತನ್ನ) ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ; ದುರುಪಯೋಗ ಪಡಿಸಿಕೊಳ್ಳುವ.
  • (ವಸ್ತುವನ್ನು) ಕುಶಲತೆಯಿಂದ ಬಳಸುವ.
  • (ಯಂತ್ರ ಮೊದಲಾದವನ್ನು) ಕುಶಲತೆಯಿಂದ ನಡೆಸುವ.
  • (ವಿಷಯವನ್ನು) ಕುಶಲತೆಯಿಂದ ನಿರ್ವಹಿಸುವ.
  • (ಕಂಪ್ಯೂಟರ್‍) (ದತ್ತಾಂಶ ಮೊದಲಾದವನ್ನು) ಬದಲಾಯಿಸುವ, ವ್ಯತ್ಯಾಸ ಮಾಡುವ ಯಾ ಸಂಪಾದಿಸುವ.

  • manipulatively
    ಕ್ರಿಯಾವಿಶೇಷಣ
    (ಒಂದು ಪರಿಸ್ಥಿತಿ, ವ್ಯಕ್ತಿ, ಮೊದಲಾದವರನ್ನು) ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಂತೆ; ದುರುಪಯೋಗ ಪಡಿಸಿಕೊಳ್ಳುವ ರೀತಿಯಲ್ಲಿ.

    manipulativeness
    ನಾಮವಾಚಕ
    (ಒಂದು ಪರಿಸ್ಥಿತಿ, ವ್ಯಕ್ತಿ, ಮೊದಲಾದವರನ್ನು) ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಿಕೆ; ದುರುಪಯೋಗಪಡಿಸಿಕೊಳ್ಳುವಿಕೆ.

    manipulator
    ನಾಮವಾಚಕ
  • (ವಸ್ತುವನ್ನು) ಕುಶಲತೆಯಿಂದ ಬಳಸುವ ವ್ಯಕ್ತಿ ಯಾ ಸಾಧನ.
  • (ಯಂತ್ರ ಮೊದಲಾದವನ್ನು) ಕುಶಲತೆಯಿಂದ ನಡೆಸುವ ವ್ಯಕ್ತಿ ಯಾ ಸಾಧನೆ.
  • ಕುಶಲ ನಿರ್ವಾಹಕ; ವಿಷಯವನ್ನು ಕುಶಲತೆಯಿಂದ ನಿರ್ವಹಿಸುವವನು.
  • ಪ್ರಭಾವ ಮೊದಲಾದವನ್ನು ಜಾಣ್ಮೆಯಿಂದ, ಮುಖ್ಯವಾಗಿ ನ್ಯಾಯವಿರುದ್ಧವಾದ ರೀತಿಯಲ್ಲಿ ಬಳಸಿ, ಒಬ್ಬನನ್ನು ಸ್ವಾಧೀನ ಮಾಡಿಕೊಳ್ಳುವವನು, ವಶದಲ್ಲಿಟ್ಟುಕೊಳ್ಳುವವನು, ದುರುಪಯೋಗ ಪಡಿಸಿಕೊಳ್ಳುವವನು; (ಒಬ್ಬನ ಮೇಲೆ) ಕೈವಾಡ ತೋರಿಸುವವನು; ತಂತ್ರಿ; ಕುತಂತ್ರಿ; ತಂತ್ರಗಾರ.
  • (ಮುಖ್ಯವಾಗಿ ಕುತಂತ್ರದಿಂದ) ಸರಕುಗಳ ಬೆಲೆಯನ್ನು ನಿಯಂತ್ರಿಸುವವ.


  • logo