logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Lateran Council
ನಾಮವಾಚಕ
ರೋಮ್‍ನಲ್ಲಿರುವ ಸೇಂಟ್‍ ಜಾನ್‍ ಲ್ಯಾಟರನ್‍ ಮಹಾಚರ್ಚಿನಲ್ಲಿ ನಡೆಯುವ ವೆಸ್ಟರ್ನ್‍ ಚರ್ಚಿನ ಐದು ಸಾಮಾನ್ಯ ಪರಿಷತ್ತುಗಳಲ್ಲೊಂದು.

laterite
ನಾಮವಾಚಕ
(ಭೂವಿಜ್ಞಾನ) ಲ್ಯಾಟರೈಟ್‍; ಜಂಬುಮಣ್ಣು; ಕೆಲವು ಬಗೆಯ ಶಿಲೆಗಳ ಸವೆತದಿಂದ ಉಂಟಾಗುವ, ಮುಖ್ಯವಾಗಿ ಕಬ್ಬಿಣದ ಆಕ್ಸೈಡ್‍ ಮತ್ತು ಅಲ್ಯೂಮಿನಿಯಂ ಹೈಡ್ರಾಕ್ಸೈಡುಗಳಿಂದ ಕೂಡಿದ, ಕಡಿಮೆ ಸಿಲಿಕ ಉಳ್ಳ, ಭಿದುರವಾದ ಮತ್ತು ಗಾಳಿಯಲ್ಲಿ ಗಟ್ಟಿಯಾಗುವ, ಉಷ್ಣವಲಯ ಪ್ರದೇಶಗಳಲ್ಲಿ ರಸ್ತೆಗಳನ್ನು ಮಾಡಲು ಬಳಸುವ, ಒಂದು ಬಗೆಯ ಕೆಂಪು ಯಾ ಹಳದಿ ಜೇಡಿ ಮಣ್ಣು.

lateritic
ಗುಣವಾಚಕ
(ಭೂವಿಜ್ಞಾನ)
  • ಲ್ಯಾಟರೈಟಿನ; ಜಂಬುಮಣ್ಣಿನ.
  • ಜಂಬುಮಣ್ಣನ್ನು ಹೋಲುವ; ಜಂಬುಮಣ್ಣಿನ ಸ್ವಭಾವದ.

  • latex
    ನಾಮವಾಚಕ
  • (ಮರಗಿಡಗಳ) ಹಾಲು; ಸಸ್ಯಕ್ಷೀರ; ಕೆಲವು ಸಸ್ಯಗಳನ್ನು ಕತ್ತರಿಸಿದಾಗ ಬರುವ ಬಿಳಿಯ ನಸುಹಳದಿ ಸ್ನಿಗ್ಧದ್ರವ, ಮುಖ್ಯವಾಗಿ ವಾಣಿಜ್ಯೋದ್ದೇಶಗಳಲ್ಲಿ ಬಳಸುವ ರಬ್ಬರ್‍ ಹಾಲು.
  • ಲೇಟೆಕ್ಸ್‍; ಕೃತಕ ರಬ್ಬರು.

  • lath
    ನಾಮವಾಚಕ ಪದಗುಚ್ಛ
    (ಮಾಳಿಗೆಯ ಹೆಂಚು ಹೊದಿಸಲು ಆಧಾರವಾಗಿ ಯಾ ಕಂಬಿಯ ಚೌಕಟ್ಟುಗಳು ಹಾಗೂ ಕಿಟಕಿಯ ವೆನಿಷಿಯನ್‍ ತೆರೆಗಳು ಇವುಗಳನ್ನು ಹಾಕುವ ಅಡ್ಡಿಪಟ್ಟಿಗಳಾಗಿ, ಬಳಸುವ) ರೀಪು; ರಿಪೀಸುಪಟ್ಟಿ; ಮರದ ದಬ್ಬೆ; ತೆಳುವಾದ ಕಿರಿಯಗಲದ ಮರದ ಪಟ್ಟಿ: as thin as a lath (ವ್ಯಕ್ತಿಗಳ ವಿಷಯದಲ್ಲಿ) (ಮರದ) ದಬ್ಬೆಯಂತೆ ತೆಳ್ಳಗಿರುವ. lath and plaster (ಒಳಗೋಡೆಯ ಮುಖಗಟ್ಟು, ಚಾವಣಿಯ ಒಳಗಟ್ಟು, ತಡಕೆ ಗೋಡೆಗಳು, ಮೊದಲಾದವುಗಳಿಗೆ ಬಳಸುವ) ದಬ್ಬೆ ಮತ್ತು ಗಾರೆ ಸಾಮಾನು.

    lath
    ಸಕರ್ಮಕ ಕ್ರಿಯಾಪದ
    (ಗೋಡೆಗೆ, ಚಾವಣಿಗೆ) ದಬ್ಬೆ ಹಾಕು; ರಿಪೀಸು ಕಟ್ಟು.

    lathe
    ನಾಮವಾಚಕ
  • ಲೇತು; ಕಡೆತ(ದ) ಯಂತ್ರ; ಕಡಚಲು ಯಂತ್ರ; ಚರಕಿಯಂತ್ರ; ಮರ, ಲೋಹ, ಮೊದಲಾದ ವಸ್ತುವನ್ನು ತಕ್ಕ ಆಕಾರಕ್ಕೆ ಕಡೆಯಲು, ಆ ಯಂತ್ರದಲ್ಲಿ ಹರಿತವಾದ ಉಳಿ ಮೊದಲಾದವಕ್ಕೆ ಕೊಟ್ಟು ತಿರುಗಿಸುವಂತಹ ಏರ್ಪಾಡುಳ್ಳ ಕಡೆತದ ಯಂತ್ರ. Figure: lathe 1
  • ಕುಂಬಾರನ ಚಕ್ರ; ಕುಲಾಲ ಚಕ್ರ.

  • lathe
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) (ಇಂಗ್ಲೆಂಡಿನ) ಕೆಂಟ್‍ ಕೌಂಟಿಯ ಆಡಳಿತ ಜಿಲ್ಲೆಗಳಲ್ಲೊಂದು.

    lathe-bearer
    ನಾಮವಾಚಕ
    ಲೇತು ಬಂಧನಿ; ಕಡೆಯಬೇಕಾದ ವಸ್ತುವನ್ನು ಕಡೆತ ಯಂತ್ರದ ಕೇಂದ್ರಗಳಿಗೆ ಯಾ ಹಿಡಿಕೆಗಳಿಗೆ ಬಂಧಿಸುವ, ಜೋಡಿಸುವ ಸಲಕರಣೆ.

    lathe-bed
    ನಾಮವಾಚಕ
    ಲೇತು ಪೀಠ; ಚರಕಿಪೀಠ; ಚರಕಿಯ ಭಾಗಗಳನ್ನು ತಕ್ಕಂತೆ ಅಳವಡಿಸಲು ತುದಿಯಿಂದ ತುದಿಗೆ ಗಾಡಿಯುಳ್ಳ ಲೇತಿನ, ಚರಕಿ ಯಂತ್ರದ – ತಳಚೌಕಟ್ಟು, ಅಡಿಮಣಿ.


    logo