logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

canoodle
ಸಕರ್ಮಕ ಕ್ರಿಯಾಪದ
(ಅಶಿಷ್ಟ) ಮುದ್ದಿಸು; ಮುದ್ದುಮಾಡು; ಮುದ್ದಾಡು.

Canopic
ಗುಣವಾಚಕ
(ಪ್ರಾಚೀನ ಈಜಿಪ್ಟಿನ) ಕನೋಪಸ್‍ ನಗರದ ಯಾ ಅದಕ್ಕೆ ಸಂಬಂಧಿಸಿದ.

Canopic jar
ನಾಮವಾಚಕ
ಕರುಳುಪಾತ್ರೆ; ಅಂತ್ರಪಾತ್ರೆ; ಪ್ರಾಚೀನ ಈಜಿಪ್ಟಿನ ಶವಸಂಸ್ಕಾರದಲ್ಲಿ, ರಕ್ಷಿತ ಶವದ ಕರುಳುಗಳನ್ನು ಬೇರೆಯಾಗಿ ತೆಗೆದಿರಿಸುತ್ತಿದ್ದ ಪಾತ್ರೆ.

Canopic vase
ನಾಮವಾಚಕ
= Canopic jar.

Canopus
ನಾಮವಾಚಕ
(ಖಗೋಳ ವಿಜ್ಞಾನ) ಅಗಸ್ತ್ಯ (ನಕ್ಷತ್ರ).
  • ಕನೋಪಸ್‍; ಅಲೆಕ್ಸಾಂಡ್ರಿಯದ ಪೂರ್ವಕ್ಕೆ 15 ಮೈಲಿ ದೂರದಲ್ಲಿರುವ, ಪ್ರಾಚೀನ ಈಜಿಪ್ಟಿನ ಒಂದು ನಗರ.

  • canopy
    ನಾಮವಾಚಕ
  • (ಸಿಂಹಾಸನ, ಮಂಚ, ವ್ಯಕ್ತಿ ಮೊದಲಾದವರ ಮೇಲೆ ಎತ್ತರದಲ್ಲಿ ಹಾಕಿರುವ ಸಾಮಾನ್ಯವಾಗಿ ಬಟ್ಟೆಯ) ಮೇಲ್ಕಟ್ಟು; ವಿತಾನ.
  • (ರೂಪಕವಾಗಿ) ಮೇಲಾವರಣ; ಚಾವಣಿ; ಮೇಲ್ಚಪ್ಪರ.
  • ಆಕಾಶ.
  • (ವಾಸ್ತುಶಿಲ್ಪ) ಚಿತ್ರ ಚಾವಣಿ; ಗೂಡು, ಬಾಗಿಲು ಮೊದಲಾದವುಗಳ ಮೇಲೆ ಹಾಕುವ, ಚಿತ್ರ ಕೆಲಸದ, ಚಾವಣಿಯಂಥ ಚಾಚು ಭಾಗ.
  • ಚಾಲಕಚಾವಣಿ; ವಿಮಾನದಲ್ಲಿ ಚಾಲಕಕುಳಿಯ ಮೇಲಿನ ಪಾರದರ್ಶಕ–ಮುಚ್ಚಳ, ಹೊದಿಕೆ.
  • ಪ್ಯಾರಷೂಟಿನ ಛತ್ರಿ ಯಾ ಹರಡಿಕೊಳ್ಳುವ ಭಾಗ.

  • canopy
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಮೇಲ್ಕಟ್ಟು ಹಾಕು.
  • ಚಾವಣಿ ಹಾಕು.

  • canorous
    ಗುಣವಾಚಕ
    ಇಂಪಾದ; ಕಿವಿಗೆ ಮಧುರವಾದ; ಸುಶ್ರಾವ್ಯವಾದ.

    canorously
    ಕ್ರಿಯಾವಿಶೇಷಣ
    ಇಂಪಾಗಿ; ಸುಶ್ರಾವ್ಯವಾಗಿ.

    canorousness
    ನಾಮವಾಚಕ
    ಇಂಪು; ಸುಶ್ರಾವ್ಯತೆ.


    logo