ಕಲಿತ–ಗುಣ, ಗುಣ ಸಂಪತ್ತಿ; ಸಾಧಿಸಿದ ಕೌಶಲ; ಸಂಪಾದಿಸಿದ–ವಿದ್ವತ್ತು, ಪಾಂಡಿತ್ಯ; ಸಾಮಾನ್ಯವಾಗಿ ಭೌತಿಕವಾದ ಯಾ ಬಾಹ್ಯ ವಸ್ತುಗಳ ಗಳಿಕೆಯಾಗಿರದೆ, ಸಹಜಶಕ್ತಿ ಯಾ ಕೌಶಲಕ್ಕೆ ವಿರುದ್ಧವಾದ, ಸ್ವಪ್ರಯತ್ನದಿಂದ ವೈಯಕ್ತಿಕವಾಗಿ ಪಡೆದದ್ದು, ಗಳಿಸಿದ್ದು.
acquisition
ನಾಮವಾಚಕ
ಗಳಿಕೆ; ಅರ್ಜನೆ; ಸಂಗ್ರಹಣೆ; ಸಂಪಾದನೆ; ಗಳಿಸುವುದು; ಸಂಪಾದಿಸುವುದು; ಗಳಿಸಿದ್ದು ಯಾ ಸಂಪಾದಿಸಿದ್ದು.
acquisitive
ಗುಣವಾಚಕ
ಸಂಗ್ರಹಶೀಲ; ಅರ್ಜನಶೀಲ; ಸಂಗ್ರಾಹಕ; ಸಂಪಾದಿಸುವ; ಕೂಡಿಹಾಕುವ ಬುದ್ಧಿಯ ಯಾ ಪ್ರವೃತ್ತಿಯ.
acquisitiveness
ನಾಮವಾಚಕ
ಸಂಗ್ರಹಶೀಲತೆ; ಅರ್ಜನಶೀಲತೆ; ಸಂಪಾದಿಸುವುದು; ಕೂಡಿಹಾಕುವ ಬುದ್ಧಿ ಯಾ ಪ್ರವೃತ್ತಿ.
acquit
ಸಕರ್ಮಕ ಕ್ರಿಯಾಪದ
ಪದಗುಚ್ಛ
(ಪ್ರಾಚೀನ ಪ್ರಯೋಗ) (ಸಾಲ) ತೀರಿಸು.
(ಆಪಾದನೆಯಿಂದ ಯಾ ಆರೋಪದಿಂದ ವ್ಯಕ್ತಿಯನ್ನು) ಬಿಡುಗಡೆ ಮಾಡು; ಖುಲಾಸೆ ಮಾಡು; ವಿಮೋಚಿಸು; ವಿಮುಕ್ತಗೊಳಿಸು; ನಿರಪರಾಧಿಯೆಂದು ಘೋಷಿಸು.
ಹೊರೆಯನ್ನು ಯಾ ಕರ್ತವ್ಯ ಭಾರವನ್ನು ಇಳಿಸಿಕೊ; ಹೊಣೆ ತೀರಿಸು; ಜವಾಬ್ದಾರಿ ನಿರ್ವಹಿಸು.
ನಡೆದುಕೊ; ವರ್ತಿಸು: he acquitted himself well like a hero ಅವನು ಒಬ್ಬ ವೀರನಂತೆ ಸರಿಯಾಗಿ ನಡೆದುಕೊಂಡ.
acquittal
ನಾಮವಾಚಕ
(ಪ್ರಾಚೀನ ಪ್ರಯೋಗ) ಸಾಲ ತೀರಿಸುವಿಕೆ; ಋಣ ಸಂದಾಯ; ಪಾವತಿ.
(ನ್ಯಾಯಶಾಸ್ತ್ರ) ಬಿಡುಗಡೆ; ಖುಲಾಸೆ.
(ಕರ್ತವ್ಯ ಮೊದಲಾದವುಗಳ) ನಿರ್ವಹಣೆ; ನೆರವೇರಿಸುವಿಕೆ.
acquittance
ನಾಮವಾಚಕ
= acquittal(1).
(ಸಾಲ ಮೊದಲಾದವನ್ನು ಪೂರ್ತಿಯಾಗಿ ಕೊಟ್ಟದ್ದಕ್ಕೆ ಕೊಡುವ) ಸಲ್ಲಿಕೆ ಚೀಟಿ; ಸಲುವಳಿ ಚೀಟಿ; ರಸೀತಿ.
(ಸಾಲದಿಂದ) ಬಿಡುಗಡೆ; ಮುಕ್ತಿ; ಋಣಮುಕ್ತಿ.
acquittance roll
ನಾಮವಾಚಕ
(ಬ್ರಿಟಿಷ್ ಪ್ರಯೋಗ, ಸೈನ್ಯ) ಸಲುವಳಿ ಖಾತೆ; ಪ್ರತಿಯೊಂದು ದಳದ ಸೈನಿಕರ ಹೆಸರು, ಅವರಿಗೆ ಸಂದಾಯವಾದ ಹಣ, ಮೊದಲಾದವನ್ನು ಬರೆದಿಡುವ ದಹ್ತರ.
acre
ನಾಮವಾಚಕ
ನುಡಿಗಟ್ಟು
ಎಕರೆ; ಭೂಮಿಯ ವಿಸ್ತೀರ್ಣವನ್ನು ಅಳೆಯುವ ಮಾನ (4840 ಚದರಗಜ ಯಾ ಸುಮಾರು 4050 ಚದರ ಮೀಟರ್).