logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

old moon
ನಾಮವಾಚಕ
ಮುದಿಚಂದ್ರ; ಅಮಾವಾಸ್ಯೆಗೆ ಮುಂಚೆ, ಶುಕ್ಲಪಕ್ಷದ ಕೊನೆಯ ಪಾದದ ಚಂದ್ರ.

Old Nick
ನಾಮವಾಚಕ
(ಆಡುಮಾತು) ಸೈತಾನ.

Old Pals Act
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಸ್ನೇಹಿತರು ಸದಾ ಪರಸ್ಪರ ನೆರವಾಗಬೇಕೆಂಬ ತತ್ತ್ವ; ಸ್ನೇಹಸೂತ್ರ.

Old Pretender
ನಾಮವಾಚಕ
ಎರಡನೇ ಜೇಮ್ಸ್‍ನ ಮಗನೂ ಬ್ರಿಟಿಷ್‍ ಸಿಂಹಾಸನದ ಹಕ್ಕುದಾರನೂ ಆಗಿದ್ದ, ಜೇಮ್ಸ್‍ ಸ್ಟುಅರ್ಟ್‍ (1688–1766).

old school
ನಾಮವಾಚಕ ಪದಗುಚ್ಛ
  • ಸಾಂಪ್ರದಾಯಿಕ ಮನೋಧರ್ಮಗಳು.
  • ಪ್ರಾಚೀನ ಪಂಥ; ಹಳೆಯ ಪಂಥ; ಸಾಂಪ್ರದಾಯಿಕ ಮನೋಭಾವವಿಟ್ಟುಕೊಂಡಿರುವವರು.

  • old school tie
    ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ಒಂದು ನಿರ್ದಿಷ್ಟ ಶಾಲೆಯ (ಸಾಮಾನ್ಯವಾಗಿ ಪಬ್ಲಿಕ್‍ ಸ್ಕೂಲಿನ) ವಿದ್ಯಾರ್ಥಿಗಳು ಹಾಕಿಕೊಳ್ಳುವ ಕಂಠಬಂಧ ‘ನೆಕ್‍ ಟೈ’.
  • ಒಂದು ಸಾಮಾಜಿಕ ವರ್ಗ, ಪ್ರದೇಶ, ಸಾಂಪ್ರದಾಯಿಕ ಮೌಲ್ಯಗಳು, ಮೊದಲಾದವುಗಳ ಬಗ್ಗೆ ಇರುವ ಅತಿಭಾವುಕವಾದ, ಅತಿರೇಕದ–ಅಭಿಮಾನ; ಕಟ್ಟಾ ಸಂಪ್ರದಾಯಪ್ರೇಮ.

  • old soldier
    ನಾಮವಾಚಕ
  • ಮಾಜಿ ಸೈನಿಕ.
  • (ರೂಪಕವಾಗಿ) ಅನುಭವಿ; ನಿಷ್ಣಾತ; ಮುಖ್ಯವಾಗಿ ಕಷ್ಟದ ಕೆಲಸ ಮಾಡುವುದರಲ್ಲಿ ಪರಿಣತ, ಎತ್ತಿದ ಕೈ ಆದವನು.

  • old stager
    ನಾಮವಾಚಕ
    = old hand.

    old style
    ಗುಣವಾಚಕ
    (ತಾರೀಖಿನ ವಿಷಯದಲ್ಲಿ) ಪ್ರಾಚೀನ ಪದ್ಧತಿಯ; ಹಳೆ ಪಂಚಾಂಗದ; ಜೂಲಿಯನ್‍ ಕ್ಯಾಲೆಂಡರಿನ ಪ್ರಕಾರ ಲೆಕ್ಕ ಹಾಕಿದ.

    Old Testament
    ನಾಮವಾಚಕ
    (ಬೈಬಲಿನ) ಹಳೆಯ ಒಡಂಬಡಿಕೆ; ಯೆಹೂದ್ಯರ ಧರ್ಮಗ್ರಂಥಗಳುಳ್ಳ ಬೈಬಲ್ಲಿನ ಭಾಗ.


    logo