logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lateness
ನಾಮವಾಚಕ
ತಡ; ವಿಳಂಬ; ಕಾಲಮೀರುವಿಕೆ; ತಡವಾಗುವಿಕೆ; ತಡಮಾಡುವಿಕೆ.

latent
ಗುಣವಾಚಕ
  • ಅಡಗಿರುವ; ಗುಪ್ತ.
  • ಸುಪ್ತ; ಅವ್ಯಕ್ತ; ಅಪ್ರಕಟ; ಅಪ್ರಕಟಿತ; ಅಂತರ್ಗತ; ಒಳಗಿದ್ದರೂ ಹೊರಗೆ ಕಾಣದಿರುವ.
  • ಸುಪ್ತ; ಅನಭಿವ್ಯಕ್ತ; ಅಪ್ರಕಾಶ; ವಿಕಾಸಗೊಳ್ಳದಿರುವ.

  • latent heat
    ನಾಮವಾಚಕ
    (ಭೌತವಿಜ್ಞಾನ) ಗುಪ್ತೋಷ್ಣ; ಸುಪ್ತೋಷ್ಣ; ಸ್ಥಿರ ತಾಪ ಮತ್ತು ಒತ್ತಡಗಳಲ್ಲಿ ವಸ್ತುಗಳನ್ನು ಘನಸ್ಥಿತಿಯಿಂದ ದ್ರವ ಯಾ ಅನಿಲ ಸ್ಥಿತಿಗಾಗಲಿ, ದ್ರವಸ್ಥಿತಿಯಿಂದ ಅನಿಲ ಸ್ಥಿತಿಗಾಗಲಿ ಪರಿವರ್ತಿಸಲು ಅಗತ್ಯವಾಗುವ ಉಷ್ಣ.

    latent image
    ನಾಮವಾಚಕ
    (ಛಾಯಾಚಿತ್ರಣ) ಗುಪ್ತ ಬಿಂಬ; ಇನ್ನೂ ಸ್ಫುಟವಾಗಿ ಮೂಡಿಸಿ ಗೋಚರವಾಗುವಂತೆ ಮಾಡಿರದ ಬಿಂಬ.

    latently
    ಕ್ರಿಯಾವಿಶೇಷಣ
  • ಅಡಗಿರುವ, ಗುಪ್ತ – ಸ್ಥಿತಿಯಲ್ಲಿ.
  • ಸುಪ್ತಸ್ಥಿತಿಯಲ್ಲಿ; ಅಂತರ್ಗತವಾಗಿ; ಅವ್ಯಕ್ತವಾದ ಯಾ ಅಪ್ರಕಟವಾದ ಅವಸ್ಥೆಯಲ್ಲಿ.
  • ಸುಪ್ತಾವಸ್ಥೆಯಲ್ಲಿ, ವಿಕಾಸಗೊಂಡಿರದೆ; ಅಪ್ರಕಾಶ ಸ್ಥಿತಿಯಲ್ಲಿ.

  • lateral
    ಗುಣವಾಚಕ ಪದಗುಚ್ಛ
    lateral branch (of family). (ವಂಶದ) ಅಡ್ಡ – ಕವಲು, ಶಾಖೆ; ಪಾರ್ಶ್ವಶಾಖೆ.
  • ಪಕ್ಕದ; ಪಾರ್ಶ್ವಸ್ಥ; ಪಾರ್ಶ್ವದ; ಪಕ್ಕಕ್ಕಿರುವ; ಪಕ್ಕದಲ್ಲಿ ಯಾ ಪಕ್ಕದ ಕಡೆ ಇರುವ.
  • ಪಾರ್ಶ್ವದ; (ವಂಶದ) ಅಡ್ಡ – ಶಾಖೆಯ, ಕವಲಿನ; ಪಾರ್ಶ್ವ ಶಾಖೆಯ; ಮಗ್ಗುಲು ಪೀಳಿಗೆಯ; ಕುಟುಂಬದ ಪೀಳಿಗೆಯ ಮೂಲಪುರುಷನ ಸೋದರನ ಯಾ ಸೋದರಿಯ ಸಂತಾನದ.
  • (ಧ್ವನಿವಿಜ್ಞಾನ) ಪಾರ್ಶ್ವಿಕ; ನಾಲಗೆಯ ಒಂದು ಅಥವಾ ಎರಡೂ ಪಕ್ಕಗಳ ಮೂಲಕ ಉಸಿರು ಹೊರಬರುವಾಗ ಹುಟ್ಟುವ.

  • lateral
    ನಾಮವಾಚಕ
  • ಪಕ್ಕ; ಪಕ್ಕದ್ದು; ಪಕ್ಕದ ಭಾಗ; ಪಾರ್ಶ್ವ; ಪಾರ್ಶ್ವಭಾಗ.
  • ಪಕ್ಕದ ವಸ್ತು; ಪಕ್ಕದಲ್ಲಿರುವ ವಸ್ತು; (ಮುಖ್ಯವಾಗಿ) ಪಕ್ಕದ ಕೊಂಬೆ ಯಾ ಪಾರ್ಶ್ವಶಾಖೆ.
  • (ಧ್ವನಿವಿಜ್ಞಾನ) ಪಾರ್ಶ್ವಿಕ ಧ್ವನಿ, ವರ್ಣ, ಉದಾಹರಣೆಗೆ ಲ, ಳ.

  • lateral line
    ನಾಮವಾಚಕ
    (ಪ್ರಾಣಿವಿಜ್ಞಾನ) ಪಾರ್ಶ್ವರೇಖೆ; ಪಕ್ಕಗೆರೆ; ಕಂಪನ ಗ್ರಹಿಸುವ ಕೆಲಸ ಮಾಡುವ ಸಂವೇದನಾಂಗಗಳ ಸಾಲೇ ಇರುವ, ಮೀನಿನ ಪಕ್ಕದಲ್ಲಿರುವ, ಕಣ್ಣಿಗೆ ಕಾಣುವ ರೇಖೆ.

    lateral thinking
    ನಾಮವಾಚಕ
    ಪರೋಕ್ಷ ಪರಿಹಾರ; ಅತಾರ್ಕಿಕ ಪರಿಹಾರ; ವಕ್ರತರ್ಕ; ಅಶಾಸ್ತ್ರೀಯ ಚಿಂತನೆ; ಪರೋಕ್ಷ ಯಾ ಅಸಾಂಪ್ರದಾಯಿಕ ಯಾ ಅತಾರ್ಕಿಕವಾಗಿ ಕಾಣುವಂತಹ ವಿಧಾನಗಳಿಂದ ಸಮಸ್ಯೆಗಳನ್ನು ಪರಿಹರಿಸುವ ವಿಧಾನ.

    laterally
    ಕ್ರಿಯಾವಿಶೇಷಣ
    ಪಕ್ಕದಲ್ಲಿ; ಪಾರ್ಶ್ವದಲ್ಲಿ; ಪಕ್ಕಕ್ಕೆ; ಪಾರ್ಶ್ವಕ್ಕೆ.


    logo