logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impliedly
ಕ್ರಿಯಾವಿಶೇಷಣ
  • ಸೂಚ್ಯವಾಗಿ.
  • ಪರೋಕ್ಷವಾಗಿ.

  • implode
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಒಳಸಿಡಿಸು; ಅಂತಃಸ್ಫೋಟಗೊಳಿಸು; ಒಳಭಾಗಕ್ಕೆ ಸಿಡಿಯುವಂತೆ ಮಾಡು. ಒಳಸಿಡಿ; ಅಂತಃಸ್ಫೋಟಿಸು; ಒಳಭಾಗಕ್ಕೆ ಸಿಡಿ, ಸ್ಫೋಟಿಸು.

    implore
    ಸಕರ್ಮಕ ಕ್ರಿಯಾಪದ
  • (ನೆರವು, ದಯೆ, ಮೊದಲಾದವುಗಳಿಗಾಗಿ) ಮೊರೆಯಿಡು; ಬೇಡು; ಶ್ರದ್ಧೆಯಿಂದ, ದೈನ್ಯದಿಂದ, ಸೆರಗೊಡ್ಡಿ – ಕೇಳಿಕೊ.
  • (ವ್ಯಕ್ತಿಯನ್ನು) ಪ್ರಾರ್ಥಿಸಿಕೊ; ಅಂಗಲಾಚು; ಬೇಡು; ಬೇಡಿಕೊ: they implored him to go ಅವನನ್ನು ಹೋಗೆಂದು ಅಂಗಲಾಚಿಕೊಂಡರು.

  • imploringly
    ಕ್ರಿಯಾವಿಶೇಷಣ
    ಮೊರೆಯಿಟ್ಟು ಬೇಡಿ; ದೈನ್ಯದಿಂದ ಪ್ರಾರ್ಥಿಸಿ; ಅಂಗಲಾಚಿ.

    imploringness
    ನಾಮವಾಚಕ
    ಅಂಗಲಾಚಿಕೆ; ಪ್ರಾರ್ಥಿಸುವಿಕೆ; ದೈನ್ಯದ ಬೇಡಿಕೆ.

    implosion
    ನಾಮವಾಚಕ
    ಒಳಸಿಡಿತ; ಅಂತಃಸ್ಫೋಟ; ಒಳಭಾಗಕ್ಕೆ ಸಿಡಿಯುವಿಕೆ.

    implosive
    ಗುಣವಾಚಕ
    ಒಳಸಿಡಿವ; ಅಂತಃಸ್ಫೋಟ(ನ)ದ; ಒಳಭಾಗಕ್ಕೆ ಸಿಡಿಯುವ, ಸ್ಫೋಟಿಸುವ.

    impluvium
    ನಾಮವಾಚಕ
    (ರೋಮನ್‍ ಪ್ರಾಕ್ತನಶಾಸ್ತ್ರ) ಚದರ ತೊಟ್ಟಿ; ಮನೆಯ ತೊಟ್ಟಿಯ ತೆರಪಿನಲ್ಲಿ ಚಾವಣಿಯಿಂದ ಸುರಿಯುವ ಮಳೆ ನೀರನ್ನು ಹಿಡಿಯುವುದಕ್ಕಾಗಿ ಕಟ್ಟಿದ ಚೌಕವಾದ ತೊಟ್ಟಿ.

    imply
    ಸಕರ್ಮಕ ಕ್ರಿಯಾಪದ
  • (ಕಂಠೋಕ್ತವಾಗಿ ಹೇಳದಿದ್ದರೂ, ಯಾವುದೋ ಒಂದು ವಿಷಯದ ಸತ್ಯಾಂಶವನ್ನು) ಸೂಚಿಸು; ವ್ಯಕ್ತಗೊಳಿಸು; (ಅಡಗಿರುವ) ಅರ್ಥ ಕೊಡು: the girl’s evasive answer implied that her suitor has changed his mind ಆ ಹುಡುಗಿಯ ಜಾರಿಕೆಯ ಉತ್ತರವು ಅವಳ ನಲ್ಲ ಮನಸ್ಸನ್ನು ಬದಲಾಯಿಸಿಬಿಟ್ಟನೆಂಬುದನ್ನು ಸೂಚಿಸಿತು.
  • (ಒಂದು ವಿಷಯವು ಅನಿವಾರ್ಯವಾಗಿ ಇನ್ನೊಂದನ್ನು) ಸೂಚಿಸು; ಒಳಗೊಂಡಿರು: speech implies a speaker ಮಾತು ಮಾತಾಡುವವನನ್ನು ಒಳಗೊಂಡಿರುತ್ತದೆ; ಮಾತು ಎಂಬುದು ‘ಮಾತನಾಡುವವನು’ (ಇದ್ದಾನೆ) ಎಂಬುದನ್ನು ಸೂಚಿಸುತ್ತದೆ.
  • ಸೂಚಿಸು; ಪರೋಕ್ಷವಾಗಿ ವ್ಯಕ್ತಪಡಿಸು: your statement implies that I am wrong ನಿನ್ನ ಹೇಳಿಕೆಯು ನನ್ನದೇ ತಪ್ಪು ಎಂಬುದನ್ನು ಸೂಚಿಸುತ್ತದೆ.

  • impolder
    ಸಕರ್ಮಕ ಕ್ರಿಯಾಪದ
    (ಸಮುದ್ರ, ನದಿ, ಮೊದಲಾದವುಗಳಿಂದ) ನೆಲವನ್ನು – ತಿರುಗಿ ಪಡೆ, ಪುನಃಪಡೆ, ಪುನಃ ಗಳಿಸು; ಏರಿ ಮೊದಲಾದವನ್ನು ಕಟ್ಟಿ ಸಮುದ್ರ, ನದಿ, ಮೊದಲಾದವುಗಳಲ್ಲಿ ಮುಳುಗಿರುವ ನೆಲವನ್ನು ನೀರಿನಿಂದ ಬಿಡಿಸಿ ಕೃಷಿಯೋಗ್ಯವನ್ನಾಗಿ ಮಾಡು, ಸಾಗುವಳಿಗೆ ಬರುವಂತೆ ಮಾಡು.


    logo