ವಿದ್ಯುನ್ಮೋಟಾರು; ವಿದ್ಯುಚ್ಛಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸಬಲ್ಲ ಯಂತ್ರ.
electron
ನಾಮವಾಚಕ
ಪದಗುಚ್ಛ
(ಭೌತವಿಜ್ಞಾನ, ರಸಾಯನವಿಜ್ಞಾನ) positive electron = positron.
ಇಲೆಕ್ಟ್ರಾನ್; ಋಣವಿದ್ಯುತ್ತಿನ ಭೇದಿಸಲಾಗದ ಏಕಮಾನವಿರುವ, ಎಲ್ಲ ಪರಮಾಣುಗಳಲ್ಲಿಯೂ ಬೀಜದ ಸುತ್ತ ನಿರ್ದಿಷ್ಟ ಸಂಖ್ಯೆಯಲ್ಲಿದ್ದು ಸುತ್ತುಹಾಕುತ್ತಿರುವ, ಘನವಸ್ತುಗಳಲ್ಲಿ ವಿದ್ಯುತ್ ವಾಹಕವಾಗಿ ವರ್ತಿಸುವ ಸ್ಥಿರ ಕಣ.
ಇಲೆಕ್ಟ್ರಾನ್ ದಂಡ; ವೇಗವಾಗಿ ಚಲಿಸುತ್ತಿರುವ ಇಲೆಕ್ಟ್ರಾನುಗಳ ಪ್ರವಾಹ.
electron gun
ನಾಮವಾಚಕ
ಇಲೆಕ್ಟ್ರಾನ್ — ಬಂದೂಕು, ಕೋವಿ; ಕಾಯಿಸಿದ ಕ್ಯಾತೋಡ್‍ನಿಂದ ಇಲೆಕ್ಟ್ರಾನ್ ಪ್ರವಾಹವನ್ನು ಉತ್ಪತ್ತಿಮಾಡುವ ಸಾಧನ.
electron lens
ನಾಮವಾಚಕ
ಇಲೆಕ್ಟ್ರಾನ್ ಮಸೂರ; ಇಲೆಕ್ಟ್ರಾನ್ ಯವ; ಇಲೆಕ್ಟ್ರಾನ್ ಪ್ರವಾಹವು ಒಂದು ಬಿಂದುವಿನಲ್ಲಿ ನಾಭೀಕರಿಸುವಂತೆ ಯಾ ಒಂದು ಬಿಂದುವಿನ ಅಗಲವಾಗಿ ಹರಡಿಕೊಳ್ಳುವಂತೆ ವಿದ್ಯುತ್‍ಕ್ಷೇತ್ರ ಯಾ ಕಾಂತಕ್ಷೇತ್ರದ ಸಹಾಯದಿಂದ ಮಾಡಿರುವ ಏರ್ಪಾಟು.
electron micrograph
ನಾಮವಾಚಕ
ಇಲೆಕ್ಟ್ರಾನ್ ಸೂಕ್ಷ್ಮಲೇಖ; ಇಲೆಕ್ಟ್ರಾನ್ ಸೂಕ್ಷ್ಮದರ್ಶಕದ ಸಹಾಯದಿಂದ ಪಡೆದ ಚಿತ್ರ.