logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

underclothes
ನಾಮವಾಚಕ
(ಬಹುವಚನ) ಒಳುಡುಪು; ಇತರ ಉಡುಪುಗಳ ಒಳಗಡೆ ತೊಡುವ, ಮುಖ್ಯವಾಗಿ ಚರ್ಮಕ್ಕೆ ತಗುಲಿರುವ, ಉಡುಪು.

underclothing
ನಾಮವಾಚಕ
= underclothes.

undercoat
ನಾಮವಾಚಕ
  • ಒಳಂಗಿ; ಹೊರಗಿನ ಅಂಗಿಯ ಒಳಗೆ ಧರಿಸಿದ ಅಂಗಿ.
  • ಪ್ರಾಣಿಗಳ ದೇಹದ ಕೆಳಪದರದ ಕೂದಲು, ತುಪ್ಪುಳ.
  • ಹೊರ ಮೈಗೆ ಬಳಿಯುವ ಬಣ್ಣದ ಅಂತಿಮ ಲೇಪನಕ್ಕಿಂತ ಮುಂಚೆ ಬಳಿಯುವ – ಅಡಿಲೇಪ, ಒಳಲೇಪ; ಮೊದಲ (ಬಣ್ಣದ) ತೊಡೆತ; ಪ್ರಥಮ ಲೇಪ.
  • ಹೀಗೆ ಬಳಿದ ಬಣ್ಣ ಮೊದಲಾದವು.

  • undercoating
    ನಾಮವಾಚಕ
  • (ಪ್ರಾಣಿಗಳ) ದೇಹದ ಕೆಳಪದರದ ಕೂದಲು.
  • ಒಳಲೇಪ; ಹೊರಗಡೆ ಬಳಿಯುವ ಬಣ್ಣದ ಬಳಿತದ ಅಡಿ ಲೇಪ.

  • undercover
    ಗುಣವಾಚಕ
  • ಒಳಗೊಳಗಿನ; ರಹಸ್ಯವಾದ; ಮುಚ್ಚುಮರೆಯ; ಗುಪ್ತ; ಗುಟ್ಟಿನ.
  • ಬೇಹುಗಾರಿಕೆಯ; ಗೂಢಚಾರ ಕೃತ್ಯ ನಡೆಸುವ (ಮುಖ್ಯವಾಗಿ ಜನರ ಮಧ್ಯೆ ಓಡಾಡುತ್ತಿದ್ದು ಅವರಿಂದ ಸಂಗ್ರಹಿಸಿದ ಮಾಹಿತಿಗಳಿಂದಲೇ ಅವರ ಮೇಲೆ ಗುಪ್ತಚರ್ಯೆ ನಡೆಸುವ): an undercover agent ಗೂಢಚಾರ ಕಾರ್ಯಭಾರಿ.

  • undercroft
    ನಾಮವಾಚಕ
    = crypt (1, 2).

    undercurrent
    ನಾಮವಾಚಕ
  • ಒಳಪ್ರವಾಹ; ಅಂತಃಪ್ರವಾಹ; ಅಡಿಹರಿವು.
  • ಅಂತಃಪ್ರವೃತ್ತಿ; ಗುಪ್ತವಾಹಿನಿ; ಒಳಗೊಳಗೆ ಚಲಿಸುವ, (ಮುಖ್ಯವಾಗಿ) ವಿರೋಧಿ ಭಾವ, ಪ್ರಭಾವ, ಚಟುವಟಿಕೆ, ಪ್ರವೃತ್ತಿ, ಮೊದಲಾದವು.

  • undercut
    ಸಕರ್ಮಕ ಕ್ರಿಯಾಪದ
    (ವರ್ತಮಾನ ಕೃದಂತ undercutting; ಭೂತರೂಪ ಮತು ಭೂತಕೃದಂತ ಅದೇ).
  • (ಕೆತ್ತನೆಯಲ್ಲಿ ಮಾದರಿ ಎದ್ದುಕಾಣುವಂತೆ, ಉಬಉಚಿತ್ರವಾಗುವಂತೆ) ಹಿನ್ನೆಲೆ ಪದಾರ್ಥವನ್ನು ಕೆತ್ತಿ (ತೆಗೆದು)ಹಾಕು.
  • (ಗಾಲ್‍)(ಎತ್ತರಕ್ಕೆ ಹೋಗುವಂತೆಯೂ, ನೆಲದ ಮೇಲೆ ಹೆಚ್ಚು ದೂರ ಉರುಳದಂತೆಯೂ ಚೆಂಡನ್ನು) ಮಧ್ಯಕ್ಕಿಂತ ಕೆಳಗೆ ಹೊಡೆ.
  • (ಮತ್ತೊಬ್ಬನಿಗಿಂತ) ಕಡಮೆ ಬೆಲೆಗೆ ಮಾರು ಯಾ ಕಡಮೆ ಕೂಲಿಗೆ ಕೆಲಸ ಮಾಡು.
  • ಒಂದು ವಸ್ತುವಿನ – ತಳ ಕತ್ತರಿಸು, ಕೆಳಗಿನ ಯಾ ಅಡಿಯ ಭಾಗವನ್ನು ಕತ್ತರಿಸಿ ಹಾಕು.
  • ಅಸ್ಥಿರಗೊಳಿಸು; ದೃಢವಾಗಿರದಂತೆ, ಭದ್ರವಾಗಿರದಂತೆ ಮಾಡು.

  • undercut
    ನಾಮವಾಚಕ
  • (ಅಮೆರಿಕನ್‍ ಪ್ರಯೋಗ) (ಮರವನ್ನು ಉರುಳಿಸುವಾಗ ಅದು ಯಾವ ಕಡೆ ಉರುಳಬೇಕೋ ಆ ಕಡೆ ಮಾಡಿದ) ಕಚ್ಚು; ಕೊಯ್ತಗೆರೆ.
  • (ಬ್ರಿಟಿಷ್‍ ಪ್ರಯೋಗ) ದನದ ಪಕ್ಕೆಮಾಂಸದ ಕೆಳಭಾಗ.
  • ಅಡಿ ತೆರಪು; ತಳಾವಕಾಶ; ಯಾವುದೇ ಒಂದರ ಕೆಳಭಾಗದಿಂದ ದ್ರವ್ಯವನ್ನು ತೆಗೆದುಹಾಕುವುದರಿಂದ ಯಾ ಕೆಳಭಾಗದ ದ್ರವ್ಯ ಇಲ್ಲದಿರುವುದರಿಂದ ಉಂಟಾಗುವ ತೆರಪು.

  • underdeveloped
    ಗುಣವಾಚಕ
  • ಅಪಕ್ವ; ಪೂರ್ತಿ ಅಭಿವೃದ್ಧಿಯಾಗದ; ಚೆನ್ನಾಗಿ ವಿಕಾಸಗೊಳ್ಳದ.
  • (ಛಾಯಾಚಿತ್ರಣ) ಸಾಕಷ್ಟು ಸ್ಫುಟಗೊಳಿಸದ; ಮಸುಕಾದ.
  • (ರಾಷ್ಟ್ರ ಮೊದಲಾದವುಗಳ ವಿಷಯದಲ್ಲಿ) ಹಿಂದುಳಿದ; ಅನಭಿವೃದ್ಧ; ಅಂತಸ್ಥವಾದ ತನ್ನ ಆರ್ಥಿಕ ಸಾಮರ್ಥ್ಯದ ಮಟ್ಟಕ್ಕಿಂತ ಕೆಳಗಿರುವ.


  • logo