ತಲೆ ಜಾದರಿ; ಹೊಟ್ಟು–ಹಂಬು, ಬಳ್ಳಿ; ಕ್ಲೆಮಾಟಿಸ್ ವೈಟಾಲ್ಟ ಕುಲಕ್ಕೆ ಸೇರಿದ, ಬೀಜಗಳ ಸುತ್ತ ಬೂದು ಯಾ ನರೆಗೂದಲಿನ ಬಣ್ಣದ ತುಪ್ಪುಳಿನಂಥ ರೋಮಗಳುಳ್ಳ, ಕಾಡು ಕ್ಲೆಮಟಿಸ್ ಬಳ್ಳಿ (traveller’s joy ಎಂದೂ ಕರೆಯುತ್ತಾರೆ).
(ಅಮೆರಿಕನ್ ಪ್ರಯೋಗ) ಒಂದು ಬಗೆಯ ಪಾಚಿ, ಹಾವಸೆ.
old master
ನಾಮವಾಚಕ
ಹಿಂದಿನ ಕಾಲದ (ಮುಖ್ಯವಾಗಿ ಕ್ರಿಸ್ತಶಕ 13ರಿಂದ 17ನೇ ಶತಮಾನದಲ್ಲಿ ಯೂರೋಪಿನಲ್ಲಿದ್ದ) ಮಹಾಕಲಾವಿದ, ಪ್ರಸಿದ್ಧ ಕಲಾಕಾರ, ಖ್ಯಾತ ಚಿತ್ರಕಾರ, ಉನ್ನತ ಕಲಾಕುಶಲಿ, ಶ್ರೇಷ್ಠ ಕಲಾವಿದ.
(ಅಂಥ ಕಲಾಕಾರನು ರಚಿಸಿದ) ಶ್ರೇಷ್ಠ ಕಲಾಕೃತಿ; ಮಹಾನ್ ಚಿತ್ರಕೃತಿ.