logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manifest
ಗುಣವಾಚಕ
(ಕಣ್ಣಿಗೆ ಯಾ ಮನಸ್ಸಿಗೆ) ಸ್ಪಷ್ಟ; ವಿಶದ; ಸುವ್ಯಕ್ತ; ಪ್ರಕಟವಾದ: his sorrow was manifest ಅವನ ದುಃಖ ಸ್ಪಷ್ಟವಾಗಿತ್ತು.

manifest
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಪ್ರೇತದ ವಿಷಯದಲ್ಲಿ) ಮೈದೋರು; ಕಾಣಿಸಿಕೊ; ಪ್ರತ್ಯಕ್ಷವಾಗು.
  • (ಕಣ್ಣಿಗೆ ಯಾ ಮನಸ್ಸಿಗೆ) ಸ್ಪಷ್ಟವಾಗಿ ತೋರಿಸು; ವಿಶದಪಡಿಸು; ವ್ಯಕ್ತಪಡಿಸು.
  • ಖಾತ್ರಿಪಡಿಸು; ರುಜುವಾತುಪಡಿಸು; ಸಾಕ್ಷ್ಯವಾಗಿರು; ಪುರಾವೆಯಾಗಿರು; ರುಜುವಾತು ಕೊಟ್ಟು ಸ್ಪಷ್ಟಪಡಿಸು; ನಿಸ್ಸಂದೇಹವಾಗುವಂತೆ ಮಾಡು: the evidence manifets his guilt ಸಾಕ್ಷ್ಯವು ಅವನ ತಪ್ಪನ್ನು ಖಾತ್ರಿ ಪಡಿಸುತ್ತದೆ.
  • (ಗುಣ, ಭಾವ, ಮೊದಲಾದವುಗಳ ಮೂಲಕ ತನ್ನ ಕಾರ್ಯಗಳು, ಮೊದಲಾದವುಗಳ ಮೂಲಕ) ತೋರಿಸು; ಅಭಿವ್ಯಕ್ತಿಸು; ಪ್ರಕಟಿಸು; ಪ್ರಕಟಪಡಿಸು; ಪ್ರದರ್ಶಿಸು; ವ್ಯಕ್ತಪಡಿಸು.
  • (ವಸ್ತುವಿನ ವಿಷಯದಲ್ಲಿಆತ್ಮಾರ್ಥಕವಾಗಿ) ಹೊರಪಡಿಸಿಕೊ; ಕಾಣಿಸಿಕೊ; ತೋರ್ಪಡಿಸಿಕೊ; ಪ್ರತ್ಯಕ್ಷವಾಗು; ಪ್ರಕಟಮಾಡಿಕೊ: the symptoms manifested themselves a week later ಒಂದು ವಾರದ ತರುವಾಯ ಚಿಹ್ನೆಗಳು ಕಾಣಿಸಿಕೊಂಡವು.

  • manifestation
    ನಾಮವಾಚಕ
  • ಸ್ಪಷ್ಟವಾಗಿ ತೋರಿಸಿಕೊಡುವುದು; ಸ್ಪಷ್ಟಪಡಿಸುವಿಕೆ; ವ್ಯಕ್ತಪಡಿಸುವಿಕೆ; ಸ್ಪಷ್ಟೀಕರಣ.
  • ಸ್ಪಷ್ಟಸ್ಥಿತಿ; ಸ್ಪಷ್ಟವಾಗಿರುವಿಕೆ.
  • ಸೃಷ್ಟೀಕರಣದ – ಸಾಧನ, ಉಪಾಯ; ಕುರುಹು; ರುಜುವಾತು; ಪುರಾವೆ; ಸಾಕ್ಷ್ಯ; ಗುರುತು; ಚಿಹ್ನೆ; ಲಕ್ಷಣ; ಸೂಚನೆ: there was no manifestation of any disease ರೋಗದ ಯಾವ ಕುರುಹೂ ಕಾಣಿಸಿರಲ್ಲಿ.
  • (ಪ್ರೇತ) ಕಾಣಿಸಿಕೊಳ್ಳುವುದು; ಮೈದೋರುವಿಕೆ; ಆವಿರ್ಭವಿಸುವಿಕೆ; ಪ್ರತ್ಯಕ್ಷವಾಗುವಿಕೆ.
  • ಅಭಿವ್ಯಕ್ತಿ; ಪ್ರಕಟನೆ.

  • manifestative
    ಗುಣವಾಚಕ
  • ಸ್ಪಷ್ಟವಾಗಿ ತೋರಿಸುವ; ಸ್ಪಷ್ಟಗೊಳಿಸುವ.
  • ವ್ಯಕ್ತಪಡಿಸುವ; ಪ್ರಕಟಪಡಿಸುವ.
  • ರುಜುವಾತಾಗಿರುವ; ಸಾಕ್ಷ ವಾಗಿರುವ; ಕುರುಹಾಗಿರುವ.

  • manifestly
    ಕ್ರಿಯಾವಿಶೇಷಣ
    ಸ್ಪಷ್ಟವಾಗಿ; ವ್ಯಕ್ತವಾಗಿ; ಪ್ರಕಟವಾಗಿ.

    manifesto
    ನಾಮವಾಚಕ
    (ರಾಜ್ಯ, ರಾಷ್ಟ್ರ, ಪಕ್ಷ ಯಾ ಮಂಡಲಿ – ತಾನು ಸಾಧಿಸಿರುವ ಯಾ ಸಾಧಿಸಲಿರುವ ಕಾರ್ಯಕಲಾಪಗಳನ್ನೂ ಘೋಷಿಸುವ) ಘೋಷಣೆ; ಪ್ರಣಾಳಿಕೆ; ಬಹಿರಂಗವಾದ ಪ್ರಕಟಣೆ; ಸಾರ್ವಜನಿಕ ಪ್ರಕಟಣೆ.

    manifold
    ಗುಣವಾಚಕ
    (ಸಾಹಿತ್ಯಕ)
  • (ರೂಪಗಳು, ಬಳಕೆಗಳು, ಮೊದಲಾದವುಗಳಲ್ಲಿ) ಪರಿಪರಿಯ; ತೆರತೆರನ; ವಿವಿಧ.
  • ಅನೇಕ ಕಾರ್ಯಕಾರಿ; ಬಹುಕಾರ್ಯಕಾರಿ; ಅನೇಕ ಕ್ರಿಯಾಕಾರಿ; ಒಂದೇ ವೇಳೆಯಲ್ಲಿ ಹಲವು ಕಾರ್ಯಗಳನ್ನು ಮಾಡುವ.
  • ಅನೇಕ ಮತ್ತು ವಿವಿಧ: manifold vexations ಹಲವಾರು, ಬಗೆ ಬಗೆಯ ಕಾಟಗಳು.

  • manifold
    ನಾಮವಾಚಕ
  • (ಯಂತ್ರಶಾಸ್ತ್ರ) ಬಹುದ್ವಾರಿ; ವಿವಿಧ ಕೊಳವೆಗಳು ಮೊದಲಾದವುಗಳೊಡನೆ ಸಂಬಂಧ ಕಲ್ಪಿಸುವ ಹಲವು ದ್ವಾರ ಯಾ ಕವಾಟಗಳನ್ನುಳ್ಳ ಕೊಳವೆ ಯಾ ಕೋಷ್ಠ.
  • ಬಹುರೂಪಿ; ನಾನಾ ರೂಪಗಳು, ಭಾಗಗಳು, ಬಳಕೆಗಳು, ಮೊದಲಾದವನ್ನುಳ್ಳ ವಸ್ತು.

  • manifold
    ಸಕರ್ಮಕ ಕ್ರಿಯಾಪದ
    (ನಕಲು ಯಂತ್ರದಿಂದ ತೆಗೆದಂತೆ, ಕಾಗದಗಳು ಮೊದಲಾದವುಗಳ) ಅನೇಕ ಪ್ರತಿಗಳನ್ನು, ನಕಲುಗಳನ್ನು – ಮಾಡು, ತೆಗೆ.

    manifold writer
    ನಾಮವಾಚಕ
    ಕಾರ್ಬನ್‍ ನಕಲು ಯಂತ್ರ; ಒಮ್ಮೆಗೇ ಅನೇಕ ಪ್ರತಿಗಳನ್ನು ತೆಗೆಯುವ ಕಾರ್ಬನ್‍ ನಕಲು ಯಂತ್ರ.


    logo