logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

latchet
ನಾಮವಾಚಕ
(ಪ್ರಾಚೀನ ಪ್ರಯೋಗ) ಬೂಟ್ಸು ಬಾರು; ಬೂಟ್ಸನ್ನು ಕಟ್ಟುವ ಯಾ ಬಿಗಿಯುವ ಬಾರು, ದಾರ.

latchkey
ನಾಮವಾಚಕ ಪದಗುಚ್ಛ
ಲ್ಯಾಚ್‍ಕೀ; ಸ್ಪ್ರಿಂಗ್‍ ಬೀಗದ ಬೀಗದ ಕೈ ಯಾ ಹೊರ ಬಾಗಿಲಿನ ಕೀಲಿಕೈ. latchkey child ಲ್ಯಾಚ್‍ಕೀ ಮಗು; ಬೀಗದ ಕೈ ಮಗು; ಕೀಲಿ ಮಗು; ಶಾಲೆ ಮುಗಿಸಿಕೊಂಡು ಬಂದ ನಂತರ ಮನೆಯ ಬಾಗಿಲನ್ನು ತಾನೇ ತೆರೆದುಕೊಂಡು ಒಳಕ್ಕೆ ಬರುವಂತೆ ಹೊರಬಾಗಿಲಿನ ಬೀಗದ ಕೈಯನ್ನು ಕೊಟ್ಟಿರುವ ಮಗು.

late
ಗುಣವಾಚಕ ಪದಗುಚ್ಛ ನುಡಿಗಟ್ಟು
  • (ನಿಗದಿಯಾದ ಯಾ ವಾಡಿಕೆಯಾದ) ಹೊತ್ತು, ಕಾಲ – ಮೀರಿದ; ತಡವಾದ; ವಿಳಂಬವಾದ: was late for dinner ಊಟಕ್ಕೆ ಹೊತ್ತು ಮೀರಿ ಬಂದ. a late milk delivery ಹಾಲಿನ ವಿಳಂಬ ವಿತರಣೆ; ತಡವಾಗಿ ಮಾಡಿದ ಹಾಲಿನ ಬಟವಾಡೆ. too late to go ಹೋಗಲು ಬಹಳ ಹೊತ್ತು ಮೀರಿದ.
  • (ಹಗಲಿನಲ್ಲೋ, ರಾತ್ರಿಯಲ್ಲೋ, ಒಂದು ನಿರ್ದಿಷ್ಟ ಕಾಲಾವಧಿಯಲ್ಲೋ) ಬಹಳ ಹೊತ್ತು ಕಳೆದ; ಬಹುಹೊತ್ತಾಗಿರುವ: late dinner ತಡವಾದ ರಾತ್ರಿಯೂಟ. late hours ತಡವಾಗಿ ಮಲಗುವುದು ಯಾ ಏಳುವುದು.
  • (ಕಾಲಾವಧಿ, ಬೆಳವಣಿಗೆ, ಮೊದಲಾದವುಗಳಲ್ಲಿ) ತಡವಾಗಿ; ವಿಳಂಬವಾಗಿ; ಬಹಳ ಕಾಲ ಸರಿದ ಬಳಿಕ: late Latin ಅರ್ವಾಚೀನ ಲ್ಯಾಟಿನ್‍ ಭಾಷೆ; ಲ್ಯಾಟಿನ್‍ ಭಾಷೆಯ ಬೆಳವಣಿಗೆಯಲ್ಲಿ ಬಹಳ ಕಾಲ ಕಳೆದ ಬಳಿಕ ರೂಪುಗೊಂಡ ಲ್ಯಾಟಿನ್‍ ರೂಪ.
  • (ಹೂ ಕಾಯಿ ಬಿಡುವುದು, ಮಾಗುವುದು, ಮೊದಲಾದವುಗಳಲ್ಲಿ) ತಡವಾಗುವ; ವಿಳಂಬವಾಗುವ; ನಿಧಾನವಾಗುವ: late oranges ತಡವಾಗಿ ಬಿಟ್ಟ ಕಿತ್ತಳೆ ಹಣ್ಣುಗಳು.
  • ಮಾಜಿ:
    1. ಗತಿಸಿದ; ದಿವಂಗತ; ಮೃತ; ಸಂದ; ಈಗ ಬದುಕಿಲ್ಲದ.
    2. ಹಿಂದಿನ; ಹಿಂದೆ ಪದವಿಯಲ್ಲಿದ್ದ; ಈಗ ಆ ಸ್ಥಾನಮಾನಗಳಿಲ್ಲದ: the last Prime Minister ಮಾಜಿ ಪ್ರಧಾನಿ; ದಿವಂಗತ ಯಾ ಹಿಂದಿನ ಪ್ರಧಾನಿ.
    3. ಹಿಂದಿನ; ಈಗಿಲ್ಲದ; ಹಿಂದೆ ಇದ್ದ: my last residence ಹಿಂದಿನ ನನ್ನ ನಿವಾಸ.
  • ಇತ್ತೀಚಿನ; ಈಚೆಗಿನ; ಇದೀಗಿನ; ಮೊನ್ನೆ ಮೊನ್ನೆಯ: the last floods ಇತ್ತೀಚಿನ ಪ್ರವಾಹಗಳು, ನೆರೆಗಳು.

  • late
    ಕ್ರಿಯಾವಿಶೇಷಣ ಪದಗುಚ್ಛ ನುಡಿಗಟ್ಟು
  • ಹೊತ್ತುಮೀರಿ; ಗೊತ್ತಾದ, ನಿಶ್ಚಯಿಸಿದ – ಕಾಲಮೀರಿ; ತಡವಾಗಿ; ವಿಳಂಬವಾಗಿ; arrived late ತಡವಾಗಿ ಬಂದ.
  • ತರುವಾಯ; ಅನಂತರ; ಆಮೇಲೆ; ಬಹುಕಾಲದ ಬಳಿಕ: this happened later on ಇದು ಅನಂತರ ನಡೆಯಿತು.
  • ಬಹುಕಾಲ; ಬಹಳ, ತುಂಬ – ಹೊತ್ತಿನವರೆಗೂ: we sat late ನಾವು (ರಾತ್ರಿ) ಬಹಳ ಹೊತ್ತಿನವರೆಗೂ ಕುಳಿತಿದ್ದೆವು.
  • (ಕಾವ್ಯಪ್ರಯೋಗ) ಇತ್ತೀಚೆಗೆ; ಇದೀಗ; ಮೊನ್ನೆ ಮೊನ್ನೆ; ಈಗ ಸ್ವಲ್ಪ ಹಿಂದೆ: I sent thee late a rosy wreath ಇತ್ತೀಚೆಗೆ ನಾನು ನಿನಗೆ ಒಂದು ಗುಲಾಬಿ ಹಾರವನ್ನು ಕಳುಹಿಸಿದೆ.
  • ಈಚಿನ ಘಟ್ಟದಲ್ಲಿ; ಬೆಳವಣಿಗೆ ಮೊದಲಾದವುಗಳ ಅನಂತರದ ಹಂತದಲ್ಲಿ: traces remained as late as the Vijayanagar times ವಿಜಯನಗರದ ಕಾಲದಷ್ಟು ಈಚಿನವರೆಗೂ ಆ ಕುರುಹುಗಳು ಉಳಿದಿದ್ದವು.

  • late fee
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ತಡವಿನ ತೆರ; ವಿಳಂಬ ಶುಲ್ಕ; ತಡವಾದ ರುಸುಮು; ಕಾಗದಪತ್ರಗಳನ್ನು ತಡವಾಗಿ ಅಂಚೆಗೆ ಹಾಕುವಾಗ ಅದಕ್ಕೆ ತೆರವಾಗಿ ಹಚ್ಚುವ ಸ್ಟಾಂಪಿನ ಬೆಲೆ.

    latecomer
    ನಾಮವಾಚಕ
    ತಡವಾಗಿ ಬರುವವನು ಯಾ ಬಂದವನು.

    lateen
    ಗುಣವಾಚಕ
    (ಹಡಗಿನ ವಿಷಯದಲ್ಲಿ) ಲಟೀನ್‍ ಹಾಯಿಪಟ ಯಾ ತ್ರಿಕೋನಾಕಾರದ ಹಾಯಿಪಟದಿಂದ ಸಜ್ಜುಗೊಂಡ.

    lateen sail
    ನಾಮವಾಚಕ
    ಲಟೀನ್‍ ಹಾಯಿ(ಪಟ); ಹಡಗಿನ ಧ್ವಜಸ್ತಂಭಕ್ಕೆ ಯಾ ಕೂವೆಮರಕ್ಕೆ $45^\circ$ ಕೋನದಲ್ಲಿ ಉದ್ದನೆಯ ಜಂತಿಯ ಯಾ ದೂಲದ ಮೇಲೆ ಹರಡಿರುವ ತ್ರಿಕೋನಾಕಾರದ ಹಾಯಿ ಪಟ.

    lately
    ಕ್ರಿಯಾವಿಶೇಷಣ
    ಇತ್ತೀಚೆಗೆ; ಮೊನ್ನೆಮೊನ್ನೆ; ಈಚೀಚೆಗೆ; ಈಗೀಗ; ನೆನ್ನೆಮೊನ್ನೆ.

    latency
    ನಾಮವಾಚಕ
  • ಅಡಗಿರುವಿಕೆ; ಗುಪ್ತಸ್ಥಿತಿ.
  • ಅವ್ಯಕ್ತ ಸ್ಥಿತಿ; ಅಪ್ರಕಟ ದಶೆ; ಅಂತರ್ಗತವಾಗಿರುವಿಕೆ.
  • ಸುಪ್ತತೆ; ಅನಭಿವ್ಯಕ್ತಿ; ಅಪ್ರಕಾಶಸ್ಥಿತಿ; ವಿಕಾಸವಾಗಿಲ್ಲದಿರುವಿಕೆ.


  • logo