logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

implement
ಸಕರ್ಮಕ ಕ್ರಿಯಾಪದ
  • (ಒಪ್ಪಂದ, ವಾಗ್ದಾನ, ಏರ್ಪಾಡು, ಗೊತ್ತುಪಾಡು, ಮೊದಲಾದವನ್ನು) ನಡೆಸು, ನಡೆಸಿಕೊಡು; ನೆರವೇರಿಸು; ಕೈಗೂಡಿಸು, ಕಾರ್ಯಗತ ಮಾಡು; ಪರಿಪಾಲಿಸು.
  • (ಕಾರ್ಯಗತಿ, ವಿಧಾನ, ಕ್ರಮ, ಮೊದಲಾದವನ್ನು) ಪೂರ್ಣ ಮಾಡು; ಭರತಿ ಮಾಡು; ಕೊರತೆ ತುಂಬು; ಜೊತೆಗೆ ಸೇರಿಸಿ ಪೂರ್ತಿಗೊಳಿಸು.
  • (ಯೋಜನೆ, ತೀರ್ಮಾನ, ಮೊದಲಾದವನ್ನು) ಕಾರ್ಯರೂಪಕ್ಕೆ ತರು.
  • (ಸಾಧನ, ಸಲಕರಣೆ, ಮೊದಲಾದವುಗಳಿಂದ) ಸಜ್ಜುಗೊಳಿಸು: implemented for industry ಕೈಗಾರಿಕೆಗಾಗಿ ಸಜ್ಜುಗೊಳಿಸಿದ.

  • implementation
    ನಾಮವಾಚಕ
  • (ಕೈಗೊಂಡ ಕೆಲಸ ಮೊದಲಾದವನ್ನು) ಪೂರೈಸುವಿಕೆ; ನೆರವೇರಿಸುವಿಕೆ.
  • (ಯೋಜನೆ, ತೀರ್ಮಾನ, ಮೊದಲಾದವನ್ನು) ಕಾರ್ಯಗತಗೊಳಿಸುವಿಕೆ.

  • impletion
    ನಾಮವಾಚಕ
  • (ಪ್ರಾಚೀನ ಪ್ರಯೋಗ) ತುಂಬಿಕೆ; ತುಂಬು; ತುಂಬುವುದು; ಭರತಿ.
  • ಪೂರ್ಣತೆ: spiritual impletion ಆಧ್ಯಾತ್ಮಿಕ ಪೂರ್ಣತೆ.

  • implicate
    ನಾಮವಾಚಕ
    (ಪ್ರತಿಜ್ಞಾವಾಕ್ಯ ಮೊದಲಾದವುಗಳಲ್ಲಿ) ಸೂಚಿತ(ವಾದದ್ದು).

    implicate
    ಸಕರ್ಮಕ ಕ್ರಿಯಾಪದ
  • (ಪ್ರಾಚೀನ ಪ್ರಯೋಗ) ತೆಕ್ಕೆಹಾಕು; ತೊಡಕಿಸು; ತೊಡರಿಸು; ತಳಕು ಹಾಕು; ಒಂದಕ್ಕೊಂದು ಸುತ್ತು.
  • ಅನುಮಾನಕ್ಕೆ ಒಯ್ಯು; ಅನುಮಿತಿಯ ಮೂಲಕ ಸೂಚಿಸು: ‘parent’ implicates child ‘ಜನಕ’ ಎಂಬ ಶಬ್ದವು ಮಗು ಇದೆ ಎಂಬುದನ್ನು ಸೂಚಿಸುತ್ತದೆ.
  • ಪರಿಣಾಮವಾಗಿ ಯಾ ಫಲವಾಗಿ – (ಯಾವುದಕ್ಕೇ) ಒಯ್ಯು, ಮುಟ್ಟಿಸು: it implicates a contradiction ಅದು ಪೂರ್ವಾಪರ ವಿರೋಧಕ್ಕೆ ಒಯ್ಯುತ್ತದೆ.
  • (ಒಬ್ಬನನ್ನು ದೋಷಾರೋಪಣೆ, ತಕ್ಸೀರು, ಮೊದಲಾದವುಗಳಲ್ಲಿ) ಸಿಕ್ಕಿಸು; ಒಳಪಡಿಸು; ಸಿಕ್ಕಿಹಾಕು.
  • (ಕರ್ಮಣಿಪ್ರಯೋಗ) ಒಂದರ ಪರಿಣಾಮಕ್ಕೆ – ಒಳಗಾಗಿರು, ಸಿಕ್ಕಿರು.

  • implication
    ನಾಮವಾಚಕ ಪದಗುಚ್ಛ
    by implication ಸೂಚ್ಯವಾಗಿ; ಸೂಚನೆಯ ಮೂಲಕ.
  • (ಪ್ರಾಚೀನ ಪ್ರಯೋಗ) ತೆಕ್ಕೆಹಾಕಿಕೊಳ್ಳುವುದು; ತೊಡಕಿಸುವುದು; ತೊಡರಿಸುವುದು; ಒಂದಕ್ಕೊಂದು ಸುತ್ತುವುದು.
  • ಸಿಕ್ಕು; ಗೋಜು; ತೊಡಕು; ಸಿಕ್ಕಿಕೊಂಡ ಸ್ಥಿತಿ (ರೂಪಕವಾಗಿ ಸಹ).
  • ಸೂಚನೆ; ಅಂತರಾರ್ಥ; ಒಳಗಿನ ಅರ್ಥ; ಸೂಚ್ಯಾರ್ಥ.
  • (ಸೂಚಿತವಾದ) ಪರಿಣಾಮ; ಪ್ರಭಾವ: political implications (ಸೂಚಿತವಾದ) ರಾಜಕೀಯ ಪರಿಣಾಮಗಳು.

  • implicative
    ಗುಣವಾಚಕ
    ಸೂಚ್ಯ; ಸೂಚನೆಯುಳ್ಳ; ಸೂಚನೆಯನ್ನೊಳಗೊಂಡ; ಅನುಮಿತಿಯಿಂದ ಸೂಚಿಸುವ: implicative statement ಸೂಚ್ಯವಾದ ಹೇಳಿಕೆ.

    implicit
    ಗುಣವಾಚಕ
  • ಧ್ವನಿತ; ಸೂಚ್ಯ; ವ್ಯಕ್ತವಾಗಿ ಹೇಳದಿದ್ದರೂ ಅದೇ ಅರ್ಥ ಕೊಡುವ.
  • (ವಸ್ತುತಃ) ಅಡಕವಾಗಿರುವ; ಅಡಗಿರುವ; ಸೇರಿರುವ; ಅಂತರ್ಗತ; ಅಂತರ್ನಿಹಿತ: the oak is implicit in the acorn ಓಕ್‍ಮರ ಅದರ ಬೀಜದಲ್ಲೇ ಅಡಗಿದೆ. the drama implicit in the situation ಆ ಸನ್ನಿವೇಶದಲ್ಲಿರುವ ನಾಟಕೀಯತೆ.
  • ನಿಸ್ಸಂದೇಹದ; ದೃಢವಾದ; ನಿಸ್ಸಂದಿಗ್ಧವಾದ; ಎಳ್ಳಷ್ಟೂ – ಸಂಶಯವೆತ್ತದ, ಸಂದೇಹ ಪಡದ: implicit faith ಸಂಪೂರ್ಣ ಶ್ರದ್ಧೆ; ಪೂರ್ಣ ವಿಶ್ವಾಸ; ದೃಢ ನಂಬಿಕೆ; ವ್ಯಕ್ತಿಯ ಸ್ವತಂತ್ರವಾದ ವಿಚಾರದಿಂದ ಒದಗಿರದೆ ಧರ್ಮಗ್ರಂಥ ಮೊದಲಾದವುಗಳ ಆಧಾರವನ್ನು ಪೂರ್ಣವಾಗಿ ಅವಲಂಬಿಸಿರುವ ನಂಬಿಕೆ. implicit obedience ಸಂಪೂರ್ಣ ವಿಧೇಯತೆ; ಪ್ರಶ್ನೆಯನ್ನೇ ಎತ್ತದ ವಿಧೇಯತೆ.
  • (ಗಣಿತ) ಇಂಗಿತ; (ಫಲನದ ವಿಷಯದಲ್ಲಿ) ಸ್ವತಂತ್ರಚರಗಳ ಮೂಲಕ ನೇರವಾಗಿ ವ್ಯಕ್ತವಾಗಿರದ.

  • implicitly
    ಕ್ರಿಯಾವಿಶೇಷಣ
  • ಸೂಚ್ಯವಾಗಿ.
  • ದೃಢವಾಗಿ; ನಿಸ್ಸಂದಿಗ್ಧವಾಗಿ; ನಿಸ್ಸಂಶಯವಾಗಿ; ನಿಶ್ಯಂಕೆಯಿಂದ; ಪೂರ್ಣವಿಶ್ವಾಸದಿಂದ; ಸ್ವತಂತ್ರವಾಗಿ ಯಾವುದೇ ವಿಚಾರ ಮಾಡದೆ.

  • implicitness
    ನಾಮವಾಚಕ
    ಸಂಪೂರ್ಣ ವಿಶ್ವಾಸ; ದೃಢ ನಂಬಿಕೆ; ಸ್ವತಂತ್ರವಾಗಿ ವಿಚಾರ ಮಾಡದೆ ಧರ್ಮಗ್ರಂಥ ಮೊದಲಾದ ಆಧಾರದ ಮೇಲೆ ನಂಬುವುದು.


    logo