logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electromagnetic induction
ನಾಮವಾಚಕ
(ವಿದ್ಯುದ್ವಿಜ್ಞಾನ) ವಿದ್ಯುತ್ಕಾಂತೀಯ ಪ್ರೇರಣೆ; ಒಂದು ವಿದ್ಯುದ್ವಾಹಕಕ್ಕೂ ಒಂದು ಕಾಂತಕ್ಷೇತ್ರಕ್ಕೂ ಸಾಪೇಕ್ಷ ಚಲನೆ ಉಂಟಾದಾಗ ವಾಹಕದಲ್ಲಿ ಪ್ರೇರಿತವಾಗುವ ವಿದ್ಯುಚ್ಚಾಲಕ ಬಲ.

electromagnetic radiation
ನಾಮವಾಚಕ
(ಭೌತವಿಜ್ಞಾನ) ವಿದ್ಯುತ್ಕಾಂತೀಯ ವಿಕಿರಣ; (ರೇಡಿಯೋ, ಬೆಳಕು ಇವುಗಳ ತರಂಗಗಳು, ಕ್ಷ, ಗಾಮಾ ಕಿರಣಗಳು ಇವುಗಳನ್ನೊಳಗೊಂಡ) ವಿದ್ಯುತ್ಕಾಂತೀಯ ಅಲೆಗಳ ಪ್ರಸರಣ.

electromagnetic spectrum
ನಾಮವಾಚಕ
ವಿದ್ಯುತ್ಕಾಂತೀಯ ರೋಹಿತ; ಅತ್ಯಂತ ಕಡಿಮೆ ಅಲೆಯುದ್ದದ ಗಾಮಕಿರಣಗಳಿಂದ ಹಿಡಿದು ಅತಿ ಹೆಚ್ಚು ಅಲೆಯುದ್ದದ ರೇಡಿಯೋ ಅಲೆಗಳವರೆಗಿರುವ, ವಿವಿಧ ವಿದ್ಯುತ್ಕಾಂತೀಯ ಅಲೆಗಳ ಶ್ರೇಣಿ.

electromagnetic theory
ನಾಮವಾಚಕ
ವಿದ್ಯುತ್ಕಾಂತ ಸಿದ್ಧಾಂತ; ವಿದ್ಯುಕ್ಕಾಂತವಾದ; ಬೆಳಕು ಸ್ವಭಾವತಃ ವಿದ್ಯುತ್ಕಾಂತ ಅಲೆಗಳ ಸಮೂಹ ಎಂಬ ವಾದ, ಸಿದ್ಧಾಂತ.

electromagnetic units
ನಾಮವಾಚಕ
(ವಿದ್ಯುದ್ವಿಜ್ಞಾನ) ವಿದ್ಯುತ್ಕಾಂತೀಯ ಮಾನಗಳು; ವಿದ್ಯುತ್ಪ್ರವಾಹದಿಂದ ಉಂಟಾಗುವ ವಿದ್ಯುತ್ತಿನ ಕಾಂತೀಯ ಪರಿಣಾಮಗಳ ಆಧಾರದ ಮೇಲೆ ರೂಪಿಸಿದ ವಿದ್ಯುನ್ಮಾನಗಳು.

electromagnetic wave
ನಾಮವಾಚಕ
(ಭೌತವಿಜ್ಞಾನ) ವಿದ್ಯುತ್ಕಾಂತೀಯ ಅಲೆ; ಅಲೆಯ ಪಥದ ಒಂದೊಂದು ಬಿಂದುವಿನಲ್ಲಿಯೂ ಪರಸ್ಪರ ಲಂಬವಾಗಿರುವ ವಿದ್ಯುತ್‍ ಮತ್ತು ಕಾಂತ ಕ್ಷೇತ್ರಗಳಿದ್ದು, ಅವೆರಡೂ ಅಲೆಯ ಪಥಕ್ಕೆ ಲಂಬವಾಗಿದ್ದು, ಅವುಗಳ ತೀಕ್ಷ್ಣತೆಗಳು ಆವರ್ತೀಯವಾಗಿ ಏರಿಳಿಯುತ್ತಾ ಹೋಗುವುದರ ಪರಿಣಾಮವಾಗಿ ಉಂಟಾಗುವ ಅಲೆ.

electromagnetism
ನಾಮವಾಚಕ
  • ವಿದ್ಯುತ್ಕಾಂತತೆ; ವಿದ್ಯುತ್ಪ್ರವಾಹದಿಂದ ಉತ್ಪತ್ತಿಯಾಗುವ ಕಾಂತತೆ.
  • ವಿದ್ಯುತ್ಕಾಂತ ಪ್ರಕರಣ; ವಿದ್ಯುತ್ತು ಮತ್ತು ಕಾಂತತೆಗಳಿಗಿರುವ ಸಂಬಂಧವನ್ನು ಕುರಿತ ಭೌತವಿಜ್ಞಾನ ವಿಭಾಗ.

  • electromechanical
    ಗುಣವಾಚಕ
    ವಿದ್ಯುದ್ಯಾಂತ್ರಿಕ; ಪ್ರಕ್ರಿಯೆಗಳು, ಸಾಧನಗಳು, ಮೊದಲಾದವುಗಳಿಗೆ ವಿದ್ಯುತ್ತನ್ನು ಅನ್ವಯಿಸುವುದಕ್ಕೆ ಸಂಬಂಧಿಸಿದ.

    electrometallurgy
    ನಾಮವಾಚಕ
    ವಿದ್ಯುಲ್ಲೋಹವಿದ್ಯೆ; ಅದುರುಗಳಿಂದ ಲೋಹಗಳನ್ನು ತೆಗೆಯುವುದರಲ್ಲಿಯೂ, ಆ ಲೋಹಗಳನ್ನು ಶುದ್ಧೀಕರಿಸುವುದರಲ್ಲಿಯೂ ವಿದ್ಯುತ್ಪ್ರವಾಹವನ್ನು ಬಳಸುವ ವಿದ್ಯೆ.

    electrometer
    ನಾಮವಾಚಕ
    ವಿದ್ಯುನ್ಮಾಪಕ; ವಿದ್ಯುದಾವೇಶವಿರುವ ಕಾಯಗಳ ಪರಸ್ಪರ ಆಕರ್ಷಣೆ ವಿಕರ್ಷಣೆಗಳನ್ನು ಅಳೆಯುವ ಮೂಲಕ ವಿಭವಾಂತರವನ್ನು ಯಾ ಅಯಾನೀಕಾರಕ ವಿಕಿರಣಗಳನ್ನು ಅಳೆಯುವ ಉಪಕರಣ.


    logo