logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

canoeist
ನಾಮವಾಚಕ
ಅಂಬಿಗ; ಓಡಗಾರ; ಓಡ ನಡೆಸುವವ.

canon
ನಾಮವಾಚಕ
  • ಚರ್ಚು–ಶಾಸನ, ಕಟ್ಟಳೆ, ಕಾನೂನು.
  • (ಯಾವುದೇ ವಿಷಯದ ವ್ಯವಸ್ಥೆಗಾಗಿ ಮಾಡಿದ) ಸಾಮಾನ್ಯ–ನಿಯಮ, ಸೂತ್ರ, ವಿಧಿ.
  • ಮಾನದಂಡ; ಪ್ರಮಾಣ; ಒರೆಗಲ್ಲು: the canons of art ಕಲೆಯ ಮಾನದಂಡಗಳು.
  • ಸ್ವೀಕೃತ ಯಾ ಅಂಗೀಕೃತ ಪವಿತ್ರ ಗ್ರಂಥಗಳು ಮೊದಲಾದವು; ಪ್ರಕ್ಷಿಪ್ತವಾಗಿರದೆ, ಮೂಲದವೆಂದು ಒಪ್ಪಿರುವ ಪವಿತ್ರ ಗ್ರಂಥಗಳು ಮೊದಲಾದವು ಯಾ ಅವುಗಳ ಪಟ್ಟಿ.
  • (ಯಾವುದೇ ಗ್ರಂಥಕರ್ತನ) ಅಂಗೀಕೃತ ಮೂಲಕೃತಿಗಳು; ಸ್ವೀಕೃತ–ಕೃತಿಚಕ್ರ, ಗ್ರಂಥಮಾಲೆ: the Shakespeare canon ಷೇಕ್ಸ್‍ಪಿಯರನ ಕೃತಿಚಕ್ರ.
  • (ಕ್ರೈಸ್ತರ ಮಾಸ್‍ಪೂಜೆಯ) ಪಾವನ ಮಂತ್ರಾವಳಿ; ಪವಿತ್ರಗೊಳಿಸುವ ಪದಗಳನ್ನೊಳಗೊಂಡ ಭಾಗ.
  • (ಸಂಗೀತ) ಕ್ಯಾನನ್ನು; ಅನುಕರಣ ಚರಣಗೀತೆ; ಒಬ್ಬನು ಚರಣವನ್ನು ಹಾಡಿದ ತರುವಾಯ, ಬೇರೆ ಗಾಯಕರು ಅನುಕ್ರಮವಾಗಿ ಆ ಚರಣವನ್ನು ಚಾಚೂ ತಪ್ಪದೆ ಅನುಕರಿಸಿ, ಅದೇ ರೀತಿಯಲ್ಲಿ ಹಾಡುವ ಕೃತಿ, ಯಾ ಆ ಕೃತಿಯ ಶೈಲಿ.
  • (ಮುದ್ರಣ) ಕ್ಯಾನನ್‍ ಮೊಳೆ; 48 ಪಾಯಿಂಟಿನ ಅಚ್ಚುಮೊಳೆ.
  • (ಗಂಟೆಯ) ತೂಗುಬಳೆ; ತಗಲಿಹಾಕಲು ಮೇಲುಗಡೆ ಅಳವಡಿಸಿರುವ ಲೋಹದ ಬಳೆ.
  • (ಕ್ರೈಸ್ತ)ಮಠಮಂಡಳಿಯ ಸದಸ್ಯ; ಕೆಲವು ಧಾರ್ಮಿಕ ವರ್ಗಗಳ–ಸದಸ್ಯ, ಪಾದ್ರಿ; ಕ್ಯಾನನ್ನು.

  • canon
    ನಾಮವಾಚಕ
    =canyon.

    canon law
    ನಾಮವಾಚಕ
    ಚರ್ಚು ನ್ಯಾಯ; ಕ್ರೈಸ್ತ ಮಠೀಯ ನ್ಯಾಯ; ಮುಖ್ಯವಾಗಿ ಪೋಪ್‍ ಮತ್ತು ಧರ್ಮಸಭೆಗಳಿಂದ ಘೋಷಿತವಾದ ಚರ್ಚು–ಶಾಸನಗಳು, ಕಾನೂನುಗಳು.

    canon regular
    ನಾಮವಾಚಕ
    = 1canon(10).

    canoness
    ನಾಮವಾಚಕ
    ಸಂನ್ಯಾಸಿನಿದೀಕ್ಷೆಗೆ ಬದ್ಧಳಾಗದೆ ನಿಯಮಾಚರಣೆಗಳನ್ನು ಪಾಲಿಸುವ ಕ್ರೈಸ್ತಸಂಘದ ಸದಸ್ಯೆ.

    canonic
    ಗುಣವಾಚಕ
    =canonical.

    canonical
    ಗುಣವಾಚಕ
  • ಚರ್ಚುಕಾನೂನು–ನಿಗದಿಮಾಡಿರುವ, ಗೊತ್ತುಮಾಡಿರುವ.
  • (ಕ್ರೈಸ್ತ) ಶಾಸ್ತ್ರಸಮ್ಮತ; ಕ್ರೈಸ್ತ ಧರ್ಮಶಾಸ್ತ್ರದಲ್ಲಿ ಸೇರಿಸುವ.
  • ಅಂಗೀಕೃತ; ಸ್ವೀಕೃತ; ಸಪ್ರಮಾಣ; ಅಧಿಕೃತ.
  • ಚರ್ಚಿನ ಪ್ರಧಾನ ಮಂಡಲಿಯ ಯಾ ಆ ಮಂಡಲಿಯ ಸದಸ್ಯನ.
  • (ಸಂಗೀತ) ಕ್ಯಾನನ್ನಿನ ರೂಪದಲ್ಲಿರುವ.

  • canonical hours
    ನಾಮವಾಚಕ
    (ಕ್ರೈಸ್ತರಲ್ಲಿ) (ಪ್ರಾರ್ಥನೆಗೋ ಮದುವೆಗೋ) ನಿಶ್ಚಿತಕಾಲ; ಗೊತ್ತಾದ ಮುಹೂರ್ತ (ಬೆಳಿಗ್ಗೆ 8 ರಿಂದ ಮಧ್ಯಾಹ್ನ 3ರ ವರೆಗಿನ ಅವಧಿ).

    canonically
    ಕ್ರಿಯಾವಿಶೇಷಣ
  • ಚರ್ಚು ಕಾನೂನಿನಂತೆ; ಚರ್ಚುವಿಧಿಗೆ ಅನುಸಾರವಾಗಿ.
  • ನಿಯಮಪೂರ್ವಕವಾಗಿ; ಸೂತ್ರಬದ್ಧವಾಗಿ.
  • ಆಧಾರಪೂರ್ವಕವಾಗಿ; ಪ್ರಮಾಣಬದ್ಧವಾಗಿ.
  • (ಸಂಗೀತ) ಕ್ಯಾನನಿನಂತೆ; ಕ್ಯಾನನಿನ ರೂಪದಲ್ಲಿ.


  • logo