logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baragnosis
ನಾಮವಾಚಕ
(ರೋಗಶಾಸ್ತ್ರ) ತೂಕಮಂಕು; ತೂಕದ ಅರಿವಳಿವು; ಭಾರಸಂವೇದನಾ ನಾಶ; ವಸ್ತುವಿನ ತೂಕವನ್ನು ತಿಳಿಯುವ ಶಕ್ತಿ ಕುಂದಿರುವಿಕೆ.

barathea
ನಾಮವಾಚಕ
(ರೇಷ್ಮೆ ಯಾ ಹತ್ತಿಯನ್ನು ಸೇರಿಸಿದ ಯಾ ಸೇರಿಸದ) ಉಣ್ಣೆಯ ನಯ ಬಟ್ಟೆ.

barathrum
ನಾಮವಾಚಕ
  • (ಅಥೆನ್ಸಿನಲ್ಲಿ) ಬ್ಯಾರತ್ರಮ್‍; ಮರಣದಂಡನೆಗೆ ಗುರಿಯಾದವರನ್ನು ತಳ್ಳುತ್ತಿದ್ದ ಕುಳಿ.
  • ಮರಣಕುಳಿ; ಪಾತಾಳ; ಮೃತ್ಯುಕೂಪ.

  • barb
    ನಾಮವಾಚಕ
  • (ಬಾರ್ಬಲ್‍ ಈನು ಮೊದಲಾದವುಗಳ ದಾಡಿಯಂಥ) ಸ್ಪರ್ಶಾಂಗ.
  • (ಸಂನ್ಯಾಸಿನಿಯ ತಲೆಯುಡುಗೆಯ) ಗಲ್ಲಮರೆ; ಕತ್ತು ಮತ್ತು ಗಲ್ಲ ಮುಚ್ಚುವ ಬಿಳಿ ಬಟ್ಟೆಯ ತುಂಡು.
  • (ಹಕ್ಕಿಗರಿಯ ಮೇಲಣ) ಅಡ್ಡ ಎಳೆ.
  • ಕೊಕ್ಕೆ; ಬಾಗುಮುಳ್ಳು; ಅಂಬು, ಗಾಳ, ಮೊದಲಾದವುಗಳ ಬಾಗಿರುವ ಮೊನೆ.
  • (ರೂಪಕವಾಗಿ) ಚುಚ್ಚು ಮಾತು; ಕುಟುಕುನುಡಿ.

  • barb
    ಸಕರ್ಮಕ ಕ್ರಿಯಾಪದ
    (ಬಾಣ ಮೊದಲಾದವುಗಳಿಗೆ) ಕೊಕ್ಕೆ – ತಗುಲಿಸು, ಸೇರಿಸು.

    barb
    ನಾಮವಾಚಕ
    ಬಾರ್ಬ್‍:
  • ಬಾರ್ಬರಿಯಿಂದ ತರಿಸಿದ ಕುದುರೆ ತಳಿ ಯಾ ಪಾರಿವಾಳದ ತಳಿ.
  • (ಆಸ್ಟ್ರೇಲಿಯ) ಕಪ್ಪು ಕುರಿನಾಯಿ; ಕುರಿಗಳನ್ನು ಕಾಯುವ, ಮಧ್ಯಮ ಗಾತ್ರದ ನಾಯಿತಳಿ.

  • Barbadian
    ನಾಮವಾಚಕ
    ಬಾರ್ಬಡಸ್‍ನಲ್ಲಿ ಹುಟ್ಟಿದವನು ಯಾ ಅಲ್ಲಿಯ ನಿವಾಸಿ.

    Barbadian
    ಗುಣವಾಚಕ
  • ಬಾರ್ಬಡಸ್‍ನ.
  • ಬಾರ್ಬಡಸ್‍ನ ನಿವಾಸಿಗಳ, ಅವರಿಗೆ ಸಂಬಂಧಿಸಿದ, ಅವರ ಲಕ್ಷಣಗಳುಳ್ಳ.

  • barbal
    ಗುಣವಾಚಕ
    ದಾಡಿಯ ಯಾ ಅದಕ್ಕೆ ಸಂಬಂಧಿಸಿದ.

    barbara
    ನಾಮವಾಚಕ
    (ಪಾಶ್ಚಾತ್ಯ ತರ್ಕದಲ್ಲಿ) ಬಾರ್ಬರ; ನಿಗಮನ ಸರಣಿಯ (ಸಿಲಜಿಸಮ್‍) ರೂಪಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಾಯಕವಾಗುವಂತೆ ಸೃಷ್ಟಿಸಿರುವ ಸಂಕೇತಪದಗಳಲ್ಲಿ ಮೊದಲನೆಯದು.


    logo