ಶ್ರವಣದ; ಶ್ರಾವ; ಶ್ರವಣೇಂದ್ರಿಯದ ಯಾ ಧ್ವನಿವಿಜ್ಞಾನದ ಯಾ ಧ್ವನಿ ತರಂಗಗಳ.
(ಕಟ್ಟಡಕ್ಕೆ ಬಳಸುವ ವಸ್ತುಗಳ ವಿಷಯದಲ್ಲಿ) ಶಬ್ದನಿಯಂತ್ರಕ; ಶಬ್ದವನ್ನು ನಿರೋಧಿಸಲು ಬಳಸುವ; ಧ್ವನಿಯನ್ನು ನಿಯಂತ್ರಸುವಂತೆ ರಚಿಸಲಾದ.
(ಸಿಡಿಮದ್ದಿನ ವಿಷಯದಲ್ಲಿ) ಶಬ್ದಸ್ಫೋಟಕ; ನೀರಿನ ಒಳಗೆ ಪ್ರಸಾರವಾಗುವ ಧ್ವನಿಯ ಅಲೆಗಳಿಂದ ಸ್ಫೋಟಗೊಳಿಸುವಂಥ, ಸ್ಫೋಟಗೊಳಿಸಬಹುದಾದ.
(ಸಂಗೀತ ಮೊದಲಾದವು) (ವಾದ್ಯದ ಯಾ ಧ್ವನಿಮುದ್ರಣದ ವಿಷಯದಲ್ಲಿ) ವಿದ್ಯುತ್ತಿಲ್ಲದೆ (ಧ್ವನಿಯ ತರಂಗಗಳಿಂದಲೇ) ಆಗುವ.
acoustic ceiling
ನಾಮವಾಚಕ
ಧ್ವನಿಛಾವಣಿ; ಧ್ವನಿಯನ್ನು ನಿಯಂತ್ರಿಸುವ ಯಾ ಹೀರುವ ಛಾವಣಿ.
acoustic engineering
ನಾಮವಾಚಕ
ಧ್ವನಿ ವಾಸ್ತುವಿಜ್ಞಾನ; ಧ್ವನಿ ವಾಸ್ತುಶಿಲ್ಪ; ಭಾಷಣ, ನಾಟಕ, ಮೊದಲಾದವುಗಳಿಗೆ ಬಳಸುವ ಕಟ್ಟಡಗಳಲ್ಲಿ ಎಲ್ಲ ಕಡೆಯೂ ಧ್ವನಿಯು ಸ್ಪಷ್ಟವಾಗಿ ಮತ್ತು ಯಥಾವತ್ತಾಗಿ ಕೇಳಿಸುವಂತೆ ಕಟ್ಟಡಗಳನ್ನು ರೂಪಿಸುವುದಕ್ಕೆ ಸಂಬಂಧಿಸಿದ ವಾಸ್ತುಶಿಲ್ಪ.
acoustic nerve
ನಾಮವಾಚಕ
(ಅಂಗರಚನಾಶಾಸ್ತ್ರ) ಶ್ರವಣನರ; ಶ್ರವಣೇಂದ್ರಿಯಗಳಿಂದ ಮತ್ತು ಅರ್ಧವೃತ್ತಾಕಾರದ ನಾಳಗಳಿಂದ ಮಿದುಳಿಗೆ ಪ್ರಚೋದನೆಗಳನ್ನು ಒಯ್ಯುವ ಹಾಗೂ ಸಂವೇದನವಾಹಕ ತಂತುಗಳನ್ನು ಹೊಂದಿರುವ ಮಿದುಳು ಕೋಶದ ನರಗಳ ಎಂಟು ಜೊತೆಗಳಲ್ಲೊಂದು.
acoustic phonetics
ನಾಮವಾಚಕ
ಶ್ರವಣಾತ್ಮಕ ಧ್ವನಿವಿಜ್ಞಾನ; ಭಾಷೆಯ ಧ್ವನಿಗಳ ಶ್ರವ್ಯಗುಣದ ಅಧ್ಯಯನ.
acoustical
ಗುಣವಾಚಕ
= acoustic.
acoustically
ಕ್ರಿಯಾವಿಶೇಷಣ
ಧ್ವನಿ ವಿಜ್ಞಾನದ ಪ್ರಕಾರ.
ಶ್ರಾವ್ಯ ಗುಣದ ದೃಷ್ಟಿಯಲ್ಲಿ; ಶ್ರವಣದ ದೃಷ್ಟಿಯಿಂದ.
acoustician
ನಾಮವಾಚಕ
ಧ್ವನಿ ವಿಜ್ಞಾನಿ.
ಧ್ವನಿವಾಸ್ತುಶಿಲ್ಪಿ; ಶ್ರವಣಕ್ಕೆ ಸಂಬಂಧಿಸಿದ ಸಾಧನ ಸಲಕರಣೆಗಳನ್ನು ತಯಾರಿಸುವವನು ಯಾ ರಿಪೇರಿ ಮಾಡುವವನು.
acoustics
ನಾಮವಾಚಕ
(ಸಾಮಾನ್ಯವಾಗಿ ಏಕವಚನದಂತೆ ಪ್ರಯೋಗ) ಧ್ವನಿವಿಜ್ಞಾನ; ಶ್ರವಣ(ಗುಣ)ವಿಜ್ಞಾನ.
ಶ್ರವಣಗುಣ; ಯಾವುದೇ ಆವರಣದಲ್ಲಿ ಎಲ್ಲ ಕಡೆಯೂ ಸ್ಪಷ್ಟವಾಗಿ ಮತ್ತು ಯಥಾವತ್ತಾಗಿ ಕೇಳಿಸುವಂತಾಗಲು ಕಟ್ಟಡಕ್ಕಿರಬೇಕಾದ ಗುಣಗಳು.
acquaint
ಸಕರ್ಮಕ ಕ್ರಿಯಾಪದ
ಪದಗುಚ್ಛ
(ವ್ಯಕ್ತಿಗೆ, ಪರಿಸ್ಥಿತಿ ಮೊದಲಾದವುಗಳನ್ನು) ತಿಳಿಸು; ಶ್ರುತಪಡಿಸು: acquaint him with his duties ಅವನ ಕರ್ತವ್ಯಗಳನ್ನು ಅವನಿಗೆ ತಿಳಿಸು.
(ವ್ಯಕ್ತಿಯ ವಿಷಯದಲ್ಲಿ) (ಸತ್ಯಾಂಶ ಮೊದಲಾದವನ್ನು) ತಿಳಿದುಕೊಂಡಿರು; ಪರಿಚಯ ಮಾಡಿಕೊ: he wants to acquaint himself with all the facts ಅವನು ನಿಜಾಂಶಗಳೆಲ್ಲವನ್ನೂ ತಿಳಿದುಕೊಳ್ಳಲು ಇಚ್ಛಿಸುತ್ತಾನೆ.
(ಕರ್ಮಣಿಪ್ರಯೋಗ) (ವಸ್ತು, ವ್ಯಕ್ತಿಗಳ ವಿಷಯದಲ್ಲಿ) ಸ್ವತಃ, ನೇರವಾಗಿ–ಪರಿಚಯ ಇರು, ಗುರುತಿರು, ತಿಳಿದಿರು: I am acquainted with him ನನಗೆ ಅವರ ನೇರ ಪರಿಚಯವಿದೆ (ನಾನು ಅವನನ್ನು ಸ್ವಂತವಾಗಿ ಬಲ್ಲೆ).