logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Manichaeism
ನಾಮವಾಚಕ
= Manicheism.

Manichean
ನಾಮವಾಚಕ
= Manichee.

Manichean
ಗುಣವಾಚಕ
  • ಮ್ಯಾನಿಕಿ ಪಂಥದ.
  • (ಧಾರ್ಮಿಕವೋ ತಾತ್ತಿ ಕವೋ ಆದ) ದೇವಸೈತಾನಿಕ ದ್ವೆ ತ ಸಿದ್ಧಾಂತದ.

  • Manichee
    ನಾಮವಾಚಕ
    ಮ್ಯಾನಿಕಿ:
  • ಸೈತಾನನೂ ದೇವರಂತೆಯೇ ನಿತ್ಯನಾದವನು ಹಾಗೂ ದೇವರ ನಿತ್ಯವೈರಿ, ಎಂದರೆ ಅನಾದಿಯೂ ಅನಂತನೂ ಆದವನು, ಮತ್ತು ಸದಾ ದೇವರೊಡನೆ ವಿರೋಧದಲ್ಲಿ ತೊಡಗಿರುವವನು, ಎಂದು ಪ್ರತಿಪಾದಿಸುತ್ತಿದ್ದ (ಕ್ರಿಸ್ತಶಕ 3-5 ಶತಮಾನದ) ಒಂದು ಧಾರ್ಮಿಕ ಪಂಥದ ಅನುಯಾಯಿ.
  • ಜಗತ್ತು ಮತ್ತು ಮಾನವಜೀವನ ದೇವರು ಮತ್ತು ಸೈತಾನ ಇಬ್ಬರ ನಿಯಂತ್ರಣಕ್ಕೂ ಒಳಪಟ್ಟಿದೆ ಎಂಬ ದ್ವೈತ ಸಿದ್ಧಾಂತವೊಂದರ ಅನುಯಾಯಿ.

  • Manicheism
    ನಾಮವಾಚಕ
    ಮ್ಯಾನಿಕೀಯಿಸಂ:
  • ಸೈತಾನನೂ ದೇವರಂತೆಯೇ ನಿತ್ಯ ಮತ್ತು ದೇವರ ನಿತ್ಯವೈರಿ ಎಂದು ಪ್ರತಿಪಾದಿಸುವ ಸಿದ್ಧಾಂತ.
  • ಜಗತ್ತು ಮತ್ತು ಮಾನವಜೀವನ ದೇವರು ಮತ್ತು ಮಾನವಜೀವನ ದೇವರು ಮತ್ತು ಸೈತಾನ ಇಬ್ಬರ ನಿಯಂತ್ರಣಕ್ಕೂ ಒಳಪಟ್ಟಿದೆಯೆಂದು ಪ್ರತಿಪಾದಿಸುವ ಧಾರ್ಮಿಕವೋ ತಾತ್ತ್ವಿಕವೋ ಆದ ಒಂದು ದ್ವೈತ ಸಿದ್ಧಾಂತ.

  • manicure
    ನಾಮವಾಚಕ
  • ಹಸ್ತಾಲಂಕಾರ; ಹಸ್ತಪ್ರಸಾಧನ; ಹಸ್ತನಖಾಲಂಕರಣ; ಕೈಸಿಂಗಾರ; ಕೈಗಳನ್ನೂ ಕೈ ಉಗುರುಗಳನ್ನೂ ಅಂದಗೊಳಿಸುವ ವೃತ್ತಿ.
  • = manicurist.

  • manicure
    ಸಕರ್ಮಕ ಕ್ರಿಯಾಪದ
    (ವ್ಯಕ್ತಿಯ) ಕೈಗಳನ್ನು ಸಿಂಗರಿಸು; ಕೈಗಳನ್ನೂ ಕೈಉಗುರುಗಳನ್ನೂ ಅಂದಗೊಳಿಸು; ಹಸ್ತಾಲಂಕಾರ ಮಾಡು.

    manicurist
    ನಾಮವಾಚಕ
    ಕೈಸಿಂಗಾರಿ; ಹಸ್ತಾಲಂಕಾರಿ; ಕೈಗಳನ್ನೂ ಕೈಉಗುರುಗಳನ್ನೂ ಅಂದಗೊಳಿಸುವ ವ್ಯಕ್ತಿ.

    manifest
    ನಾಮವಾಚಕ
  • (ಸುಂಕದ ಅಧಿಕಾರಿಗಳ ಬಳಕೆಗೆ ಬೇಕಾದ) ಹಡಗಿನ ಸರಕು ಸಾಮಾನುಗಳ ಯಾದಿ, ಪಟ್ಟಿ.
  • ವಿಮಾನದ ಪ್ರಯಾಣಿಕರ ಪಟ್ಟಿ.
  • ಸರಕು ಸಾಗಣೆ ರೈಲಿನ ಗಾಡಿ, ಟ್ರಕ್ಕು, ಮೊದಲಾದವುಗಳ ಪಟ್ಟಿ, ಯಾದಿ.

  • manifest
    ಸಕರ್ಮಕ ಕ್ರಿಯಾಪದ
    (ಹಡಗಿನ ಸರಕು, ರೈಲಿನ ಗಾಡಿ, ವಿಮಾನದ ಪ್ರಯಾಣಿಕರ ಹೆಸರು, ಮೊದಲಾದವನ್ನು) ಪಟ್ಟಿಯಲ್ಲಿ ದಾಖಲಿಸು; ಯಾದಿಯಲ್ಲಿ ನಮೂದಿಸು.


    logo