logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

implacably
ಕ್ರಿಯಾವಿಶೇಷಣ
  • ತಣಿಸಲಾಗದಂತೆ; ಸಮಾಧಾನಪಡಿಸಲಾಗದ ಹಾಗೆ.
  • ಕಠೋರವಾಗಿ; ನಿರ್ದಯವಾಗಿ; ನಿಷ್ಕರುಣೆಯಿಂದ.

  • implant
    ಸಕರ್ಮಕ ಕ್ರಿಯಾಪದ
  • ಒಳಸೇರಿಸು; ಅಂತರ್ನಿವೇಶಿಸು; ಒಳಕ್ಕೆ – ಸೇರಿಸು, ನೆಡು, ನಾಟು.
  • (ತತ್ತ್ವ, ಭಾವನೆ, ಮೊದಲಾದವನ್ನು ಮನಸ್ಸು ಮೊದಲಾದವುಗಳಲ್ಲಿ) ನೆಡು; ಊರಿಸು; ಕಚ್ಚಿಸು; ಸ್ಥಾಪಿಸು; ನೆಲೆಗೊಳಿಸು.
  • (ಸಸಿ ಮೊದಲಾದವನ್ನು) ನೆಡು; ನಾಟು.
  • (ವೈದ್ಯಶಾಸ್ತ್ರ) (ಊತಕ ಮೊದಲಾದವನ್ನು) ದೇಹದಲ್ಲಿ ಸೇರಿಸು, ನಾಟಿಸು; ಅಂತರ್ನಿವೇಶಿಸು.
  • (ಕರ್ಮಣಿಪ್ರಯೋಗದಲ್ಲಿ) (ಗರ್ಭಾಧಾನವಾದ ಅಂಡಾಣುವಿನ ವಿಷಯದಲ್ಲಿ) ಗರ್ಭಕೋಶದ ಗೋಡೆಗೆ ಅಂಟಿಕೊ, ಹತ್ತಿಕೊ; ಅಂತರ್ನಿವಿಷ್ಟವಾಗು.

  • implant
    ನಾಮವಾಚಕ
  • ಒಳಸೇರಿಸಿದ್ದು; ಅಂತರ್ನಿವಿಷ್ಟ; ಒಳಕ್ಕೆ ಸೇರಿಸಿದ, ನೆಟ್ಟ ವಸ್ತು.
  • ದೇಹಾಂತರ್ನಿವಿಷ್ಟ; ದೇಹದೊಳಗೆ ಸೇರಿಸಿದ ವಸ್ತು, ಮುಖ್ಯವಾಗಿ ರೇಡಿಯಂ ಚಿಕಿತ್ಸೆಗೆ ಬೇಕಾದ ವಸ್ತುವನ್ನೊಳಗೊಂಡ ಊತಕದ ಚೂರು ಯಾ ಸಂಪುಟ (ಕ್ಯಾಪ್ಸೂಲು).

  • implantation
    ನಾಮವಾಚಕ
  • (ಸಸಿ ಮೊದಲಾದವನ್ನು) ನೆಡುವಿಕೆ.
  • (ರೂಪಕವಾಗಿ) (ಮನಸ್ಸು ಮೊದಲಾದವುಗಳಲ್ಲಿ ತತ್ತ್ವ, ಭಾವನೆ, ಮೊದಲಾದವುಗಳ) ನೆಡುವಿಕೆ; ಸ್ಥಾಪನೆ.
  • ದೇಹದೊಳಗೆ ಯಾವುದೇ ವಸ್ತುವನ್ನು ಒಳಹೊಗಿಸುವಿಕೆ; ಅಂತರ್ನಿವೇಶನ.

  • implausibility
    ನಾಮವಾಚಕ
    ಅಸಂಭಾವ್ಯತೆ; ಅವಿಶ್ವಾಸಾರ್ಹತೆ; ಸರಿಕಾಣದಿರುವಿಕೆ; ವಿಶ್ವಾಸಾರ್ಹವೆನಿಸದ್ದು.

    implausible
    ಗುಣವಾಚಕ
    ಅಸಂಭಾವ್ಯ; ಸರಿ ಕಾಣದ; ಆಪಾತೋಚಿತವಲ್ಲದ; ಒಪ್ಪತಕ್ಕದ್ದು ಎನಿಸದ; ನ್ಯಾಯಸಮ್ಮತ, ವಿಶ್ವಾಸಯೋಗ್ಯ, ಸಂಭವನೀಯ ಎಂದು – ತೋರದ: an implausible alibi ಸರಿಕಾಣದ ನೆವ.

    implausibly
    ಕ್ರಿಯಾವಿಶೇಷಣ
    ಅಸಂಭಾವ್ಯವಾಗಿ; ಸರಿಕಾಣದಂತೆ; ಆಪಾತೋಚಿತವಾಗಿ; ನ್ಯಾಯಸಮ್ಮತವೆನಿಸದ ರೀತಿಯಲ್ಲಿ.

    implead
    ಸಕರ್ಮಕ ಕ್ರಿಯಾಪದ
  • (ನ್ಯಾಯಶಾಸ್ತ್ರ) (ಒಬ್ಬನ ಮೇಲೆ ಕಾನೂನಿನ ಪ್ರಕಾರ) ಕ್ರಮ ಜರುಗಿಸು; ಖಟ್ಲೆ ಹೂಡು; ಮೊಕದ್ದಮೆ ನಡಸು.
  • (ಒಬ್ಬ ವ್ಯಕ್ತಿಯನ್ನು) ಕೋರ್ಟಿಗೆ ಎಳೆ; (ಒಬ್ಬನ ಮೇಲೆ) ದಾವೆ ಹೂಡು.

  • impledge
    ಸಕರ್ಮಕ ಕ್ರಿಯಾಪದ
    (ಪ್ರಾಚೀನ ಪ್ರಯೋಗ) ಅಡವಿಡು; ಒತ್ತೆ ಇಡು; ಗಿರವಿ ಇಡು; ಈಡುಮಾಡು.

    implement
    ನಾಮವಾಚಕ
  • (ಪೀಠೋಪಕರಣ, ಉಡುಪು, ಮೊದಲಾದ) ಸಾಮಗ್ರಿ; ಸಾಮಾನು.
  • (ಬಹುವಚನದಲ್ಲಿ) (ಪೀಠೋಪಕರಣ, ಉಡುಪು, ಮೊದಲಾದವುಗಳ) ಸಜ್ಜು.
  • (ಮುಖ್ಯವಾಗಿ ಬಹುವಚನದಲ್ಲಿ) ಮುಟ್ಟು; ಉಪಕರಣ; ಸಲಕರಣೆ; ಆಯುಧ; ಹತ್ಯಾರು.
  • (ಬಹುವಚನದಲ್ಲಿ) ಪಾತ್ರೆ ಪರಡಿ.
  • (ಸ್ಕಾಟ್ಲೆಂಡ್‍ ನ್ಯಾಯಶಾಸ್ತ್ರ) (ಒಪ್ಪಂದ ಮೊದಲಾದವುಗಳ) ನಿರ್ವಹಣೆ; ನೆರವೇರಿಕೆ; ಪರಿಪಾಲನೆ.
  • (ರೂಪಕವಾಗಿ) ಉಪಕರಣ; ಸಾಧನ: man as an implement of divine plan ದೈವಸಂಕಲ್ಪದ ಸಾಧನವಾಗಿ ಮಾನವ.


  • logo