logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electrokinetics
ನಾಮವಾಚಕ
ವಿದ್ಯುಚ್ಚಲನಶಾಸ್ತ್ರ; ಕಾಂತಕ್ಷೇತ್ರ ಹಾಗೂ ವಿದ್ಯುತ್‍ ಕ್ಷೇತ್ರಗಳಲ್ಲಿ ವಿದ್ಯುತ್ಪ್ರವಾಹ ಯಾ ವಿದ್ಯುದಾವಿಷ್ಟಕಣಗಳ ಚಲನೆಯನ್ನು ಕುರಿತ ಭೌತವಿಜ್ಞಾನ ವಿಭಾಗ.

electrolier
ನಾಮವಾಚಕ
ವಿದ್ಯುದ್ದೀಪ ಪುಂಜ; ಗೊಂಚಲುದೀಪ; ದೀಪಗುಚ್ಚ.

electrolyse
ಸಕರ್ಮಕ ಕ್ರಿಯಾಪದ
(ರಸಾಯನವಿಜ್ಞಾನ) ವಿದ್ಯುದ್ವಿಚ್ಛೇದನಕ್ಕೆ ಒಳಪಡಿಸುವ ಯಾ ಅದರಿಂದ ಸಂಸ್ಕರಿಸು.

electrolysis
ನಾಮವಾಚಕ
(ರಸಾಯನವಿಜ್ಞಾನ) ವಿದ್ಯುದ್ವಿಚ್ಛೇದನ:
  • ಆಮ್ಲ, ಪ್ರತ್ಯಾಮ್ಲ ಯಾ ಲವಣಗಳನ್ನು ದ್ರವಿಸಿ ಯಾ ತಕ್ಕ ಲೀನಕಾರಿಯಲ್ಲಿ ಕರಗಿಸಿ ಅದರ ಮೂಲಕ ವಿದ್ಯುತ್ಪ್ರವಾಹವನ್ನು ಹಾಯಿಸಿ ಉಂಟುಮಾಡುವ ರಾಸಾಯನಿಕ ಬದಲಾವಣೆ.
  • ಇದನ್ನು ಕುರಿತ ಶಾಸ್ತ್ರ.
  • (ಶಸ್ತ್ರವೈದ್ಯ) ವಿದ್ಯುತ್ತಿನ ಸಹಾಯದಿಂದ ದೇಹದಲ್ಲಿನ ಗಂತಿಗಳನ್ನೂ ಅಶ್ಮರಿಗಳನ್ನೂ ಕೂದಲ ಬೇರುಗಳನ್ನೂ ನಾಶಮಾಡುವುದು.

  • electrolyte
    ನಾಮವಾಚಕ
    (ರಸಾಯನವಿಜ್ಞಾನ) ವಿದ್ಯುದ್ವಿಚ್ಛೇದ್ಯ:
  • ಮುಖ್ಯವಾಗಿ ವಿದ್ಯುತ್ಕೋಶ ಯಾ ಬ್ಯಾಟರಿಯಲ್ಲಿ ವಿದ್ಯುತ್ತನ್ನು ಹಾಯಗೊಟ್ಟು ರಾಸಾಯನಿಕ ಬದಲಾವಣೆ ಹೊಂದಬಲ್ಲ ಯಾವುದೇ ದ್ರವ ಯಾ ದ್ರಾವಣ.
  • ದ್ರವಿಸಿದಾಗ ಯಾ ಸೂಕ್ತ ದ್ರವದಲ್ಲಿ ಕರಗಿಸಿದಾಗ ಅಂತಹ ದ್ರವವನ್ನು ನೀಡಬಲ್ಲ ರಾಸಾಯನಿಕ ಪದಾರ್ಥ.

  • electrolytic
    ಗುಣವಾಚಕ
    (ರಸಾಯನವಿಜ್ಞಾನ)
  • ವಿದ್ಯುದ್ವಿಚ್ಛೇದನದ, ಅದರಿಂದ ಉತ್ಪತ್ತಿಯಾದ, ಅದಕ್ಕೆ ಸಂಬಂಧಿಸಿದ.
  • ವಿದ್ಯುದ್ವಿಚ್ಛೇದ್ಯದ, ಅದಕ್ಕೆ ಸಂಬಂಧಿಸಿದ.

  • electrolyze
    ಸಕರ್ಮಕ ಕ್ರಿಯಾಪದ
    = electrolyse.

    electromagnet
    ನಾಮವಾಚಕ
    ವಿದ್ಯುತ್ಕಾಂತ; ವಿದ್ಯುತ್ಪ್ರವಾಹ ಹರಿಯುತ್ತಿರುವ ಸುರುಳಿಯ ಒಳಗಿರುವ ಕಾರಣ ಕಾಂತತೆಯನ್ನು ಪಡೆದಿರುವ ಮಿದುಕಬ್ಬಿಣದ ತುಂಡು.

    electromagnetic
    ಗುಣವಾಚಕ
  • ವಿದ್ಯುತ್ಕಾಂತೀಯ; ವಿದ್ಯುತ್‍ ಮತ್ತು ಕಾಂತೀಯ ಲಕ್ಷಣಗಳುಳ್ಳ ಯಾ ವಿದ್ಯುತ್‍ ಮತ್ತು ಕಾಂತೀಯ ಪರಿಣಾಮಗಳನ್ನು ನೀಡಬಲ್ಲ.
  • ವಿದ್ಯುತ್ಕಾಂತದ ಯಾ ಅದಕ್ಕೆ ಸಂಬಂಧಿಸಿದ.

  • electromagnetic field
    ನಾಮವಾಚಕ
    (ವಿದ್ಯುದ್ವಿಜ್ಞಾನ) ವಿದ್ಯುತ್ಕಾಂತಕ್ಷೇತ್ರ; ವಿದ್ಯುದಾವೇಶವೊಂದರ ಚಲನೆಯ ಪರಿಣಾಮವಾಗಿ ಉತ್ಪತ್ತಿಯಾಗುವ ವಿದ್ಯುತ್‍ ಹಾಗೂ ಕಾಂತೀಯ ಘಟಕಗಳಿರುವ ಕ್ಷೇತ್ರ.


    logo